ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಮೈಸೂರಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ಶುಕ್ರವಾರ ವರದಿ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಆರೋಪಿಯಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ ದೂರುದಾರರಾಗಿ ಕೃಷ್ಣ ಸುದ್ದಿಯಲ್ಲಿದ್ದಾರೆ.
ಚೆಕ್‌ನ ಮೊತ್ತವನ್ನು ತಕ್ಷಣ ಮರುಪಾವತಿಸಲು ವಿಫಲವಾದರೆ ಕೃಷ್ಣ ಅವರು ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಸ್ನೇಹಮಯಿ ಕೃಷ್ಣ ಅವರು 2015 ರಲ್ಲಿ ಮೈಸೂರು ನಗರದ ಹೊರವಲಯದಲ್ಲಿರುವ ಲಲಿತಾದ್ರಿಪುರದ ಕುಮಾರ್ ಎಂಬುವವರಿಂದ ಸಾಲ ಪಡೆದಿದ್ದರು. ಈ ವೇಳೆ ಅವರು ಪ್ರತಿಯಾಗಿ, ಕೃಷ್ಣ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕಿನಿಂದ ಚೆಕ್ ನೀಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆದರೆ ಈ ಚೆಕ್ ಅನ್ನು ಪ್ರದೀಪ್ ಕುಮಾರ್ ಬ್ಯಾಂಕಿಗೆ ಠೇವಣಿ ಇಟ್ಟಾಗ, ಅದು ಬೌನ್ಸ್ ಆಗಿತ್ತು. ಈ ವೇಳೆ ಅವರು ಕೃಷ್ಣ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಗುರುವಾರ ಪ್ರಥಮ ದರ್ಜೆಯ ಮೂರನೇ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಜೆಎಂಎಫ್‌ಸಿ) ನ್ಯಾಯಾಲಯವು ಕೃಷ್ಣ ಅವರನ್ನು ಚೆಕ್ ವಂಚನೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಿದೆ.
ಅದಾಗ್ಯೂ, ಕೃಷ್ಣ ಅವರು ತೀರ್ಪಿನ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ ಎಂದು ವರದಿ ಹೇಳಿದೆ.


