ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26ರ ಹಣಕಾಸು ವರ್ಷದ ಬಜೆಟ್ ಅನ್ನು ಶನಿವಾರ ಮಂಡಿಸಿದ್ದಾರೆ. ಪ್ರಸ್ತುತ ಬಜೆಟ್ ಎನ್‌ಡಿಎ 3.0 ಸರ್ಕಾರದ ಮೊದಲ ಪೂರ್ಣ ಬಜೆಟ್ ಆಗಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗುವ ಗುರಿಯನ್ನು ಸಾಧಿಸಲು ಭಾರತವು ಕನಿಷ್ಠ ಒಂದು ದಶಕದವರೆಗೆ 8% ರಷ್ಟು ಸ್ಥಿರವಾದ ಆರ್ಥಿಕ ಬೆಳವಣಿಗೆಯನ್ನು ಸಾಧಿಸಬೇಕಾಗುತ್ತದೆ ಎಂದು 2024-25ರ ಆರ್ಥಿಕ ಸಮೀಕ್ಷೆಯು ಹೇಳಿತ್ತು. ಕೇಂದ್ರ ಬಜೆಟ್ 2025
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಶನಿವಾರ ನಿರ್ಮಲಾ ಸೀತಾರಾಮನ್ ಅವರ ಬಜೆಟ್‌ನ ಪ್ರಮುಖ ಘೋಷಣೆಗಳು ಇಲ್ಲಿವೆ:
ಆದಾಯ ತೆರಿಗೆ
ಹೊಸ ಆಡಳಿತದ ಅಡಿಯಲ್ಲಿ 12 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ ಎಂದು ಕೇಂದ್ರ ಸರ್ಕಾರವು ಪ್ರಸ್ತಾಪಿಸಿದೆ. 75,000 ರೂ.ಗಳ ಪ್ರಮಾಣಿತ ಕಡಿತವನ್ನು ಪರಿಗಣಿಸಿ ಸಂಬಳ ಪಡೆಯುವ ತೆರಿಗೆದಾರರಿಗೆ ಮಿತಿ 12.75 ಲಕ್ಷ ರೂ. ಆಗಿರುತ್ತದೆ.
ಹೊಸ ಆಡಳಿತದ ಅಡಿಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳನ್ನು ಹಣಕಾಸು ಸಚಿವರು ಪರಿಷ್ಕರಿಸಿದ್ದು, ಇದು ಮನೆಯ ಬಳಕೆ, ಉಳಿತಾಯ ಮತ್ತು ಹೂಡಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಹೊಸ ನೇರ ತೆರಿಗೆ ಮಸೂದೆ
ಕೇಂದ್ರ ಸರ್ಕಾರವು ಮುಂದಿನ ವಾರ ಸಂಸತ್ತಿನಲ್ಲಿ ಹೊಸ ನೇರ ತೆರಿಗೆ ಮಸೂದೆಯನ್ನು ಪರಿಚಯಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವರು ಘೋಷಿಸಿದ್ದಾರೆ. ಹೊಸ ಮದೂದೆಯು “ಸ್ಪಷ್ಟ ಮತ್ತು ನೇರ ಪಠ್ಯವಾಗಿರುತ್ತದೆ” ಮತ್ತು ತೆರಿಗೆದಾರರು ಮತ್ತು ತೆರಿಗೆ ಆಡಳಿತಕ್ಕೆ “ಅರ್ಥಮಾಡಿಕೊಳ್ಳಲು ಸುಲಭ”ವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಹಣಕಾಸಿನ ಕೊರತೆ
2024-25ರ ಹಣಕಾಸು ವರ್ಷದಲ್ಲಿ ಭಾರತದ ಪರಿಷ್ಕೃತ ಹಣಕಾಸಿನ ಕೊರತೆಯು ಒಟ್ಟು ದೇಶೀಯ ಉತ್ಪನ್ನದ 4.8% ರಷ್ಟಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮುಂದಿನ ಹಣಕಾಸು ವರ್ಷದ ಹಣಕಾಸಿನ ಕೊರತೆಯ ಗುರಿ 4.4% ಆಗಿರುತ್ತದೆ ಎಂದು ಹೇಳಿದ ಅವರು, “ಕೇಂದ್ರ ಸರ್ಕಾರದ ಸಾಲವು GDP ಯ ಶೇಕಡಾವಾರು ಪ್ರಮಾಣದಲ್ಲಿ ಕಡಿಮೆಯಾಗುವಂತೆ ಪ್ರತಿ ವರ್ಷವೂ ಹಣಕಾಸಿನ ಕೊರತೆಯನ್ನು ಕಾಯ್ದುಕೊಳ್ಳುವುದು ನಮ್ಮ ಪ್ರಯತ್ನವಾಗಿದೆ” ಎಂದು ಅವರು ಹೇಳಿದ್ದಾರೆ.
ಸರ್ಕಾರದ ಖರ್ಚು ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಅದು ಉತ್ಪಾದಿಸುವ ಆದಾಯಕ್ಕಿಂತ ಹೆಚ್ಚಾದಾಗ ಹಣಕಾಸಿನ ಕೊರತೆ ಉಂಟಾಗುತ್ತದೆ. 2025-26ರ ಹಣಕಾಸು ವರ್ಷದಲ್ಲಿ, ಸರ್ಕಾರದ ಅಂದಾಜು ರಶೀದಿಗಳು 35 ಲಕ್ಷ ಕೋಟಿ ರೂ. ಮತ್ತು ಪ್ರಸ್ತಾವಿತ ವೆಚ್ಚವು 50 ಲಕ್ಷ ಕೋಟಿ ರೂ. ಆಗಿದೆ.
ಸಾಲಗಳನ್ನು ಹೊರತುಪಡಿಸಿ ಪರಿಷ್ಕೃತ ರಶೀದಿಗಳ ಅಂದಾಜು 31.4 ಲಕ್ಷ ಕೋಟಿ ರೂ.ಗಳಾಗಿದ್ದು, ಅದರಲ್ಲಿ ನಿವ್ವಳ ತೆರಿಗೆ ರಶೀದಿಗಳು 25.5 ಲಕ್ಷ ಕೋಟಿ ರೂ.ಗಳಾಗಿವೆ. ಪರಿಷ್ಕೃತ ವೆಚ್ಚದ ಅಂದಾಜು 47.1 ಲಕ್ಷ ಕೋಟಿ ರೂ.ಗಳಾಗಿದ್ದು, ಇದರಲ್ಲಿ ಬಂಡವಾಳ ವೆಚ್ಚ ಸುಮಾರು 10.1 ಲಕ್ಷ ಕೋಟಿ ರೂ.ಗಳಾಗಿದೆ.
ಗಿಗ್ ಕೆಲಸಗಾರರಿಗೆ ವಿಮೆ
ಸರ್ಕಾರದ ಇ-ಶ್ರಮ್ ಪೋರ್ಟಲ್‌ನಲ್ಲಿ ಗುರುತಿನ ಚೀಟಿಗಳು ಮತ್ತು ನೋಂದಣಿಯನ್ನು ಒದಗಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಗಿಗ್ ಕೆಲಸಗಾರರಿಗೆ ಆರೋಗ್ಯ ಸೌಲಭ್ಯಗಳನ್ನು ಸಹ ನೀಡಲಾಗುವುದು. ಈ ಕ್ರಮವು ಸುಮಾರು ಒಂದು ಕೋಟಿ ಗಿಗ್ ಕೆಲಸಗಾರರಿಗೆ ಸಹಾಯ ಮಾಡುವ ನಿರೀಕ್ಷೆಯಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯನ್ನು ಹೆಚ್ಚಳ
ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಯ ಮಿತಿಯನ್ನು ಪ್ರಸ್ತುತ 74% ರಿಂದ 100% ಕ್ಕೆ ಹೆಚ್ಚಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ. ಹೊಸ ಮಿತಿಯು ಭಾರತದಲ್ಲಿ ಸಂಪೂರ್ಣ ಪ್ರೀಮಿಯಂ ಅನ್ನು ಹೂಡಿಕೆ ಮಾಡುವ ಕಂಪನಿಗಳಿಗೆ ಲಭ್ಯವಿರುತ್ತದೆ. “ವಿದೇಶಿ ಹೂಡಿಕೆಗೆ ಸಂಬಂಧಿಸಿದ ಪ್ರಸ್ತುತ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಸರಳೀಕರಿಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಮೂಲಸೌಕರ್ಯಕ್ಕಾಗಿ ರಾಜ್ಯಗಳಿಗೆ ಆರ್ಥಿಕ ಬೆಂಬಲ
ಕೇಂದ್ರವು ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ 50 ವರ್ಷಗಳ ಬಡ್ಡಿರಹಿತ ಸಾಲಗಳು ಮತ್ತು “ಸುಧಾರಣೆಗಳಿಗೆ ಪ್ರೋತ್ಸಾಹಕಗಳಿಗೆ” 1.5 ಲಕ್ಷ ಕೋಟಿ ರೂ.ಗಳ ವಿನಿಯೋಗವನ್ನು ಪ್ರಸ್ತಾಪಿಸಿದೆ.
ಇದನ್ನೂಓದಿ: ಲೋಕಸಭಾ ಚುನಾವಣೆ 2024 | ಬಿಜೆಪಿ ಖರ್ಚು ₹1,737 ಕೋಟಿ; ಕಾಂಗ್ರೆಸ್‌ಗಿಂತ 3 ಪಟ್ಟು ಹೆಚ್ಚು!
ಲೋಕಸಭಾ ಚುನಾವಣೆ 2024 | ಬಿಜೆಪಿ ಖರ್ಚು ₹1,737 ಕೋಟಿ; ಕಾಂಗ್ರೆಸ್‌ಗಿಂತ 3 ಪಟ್ಟು ಹೆಚ್ಚು!


