ಛತ್ತೀಸ್‌ಗಢದ ಮಾವೋವಾದಿ ಪ್ರಭಾವಿತ ಬಿಜಾಪುರ ಜಿಲ್ಲೆಯ ಗಂಗಲೂರಿನಲ್ಲಿ ಶನಿವಾರ ಬೆಳಿಗ್ಗೆ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ನಡೆದ ಪ್ರಮುಖ ಗುಂಡಿನ ಚಕಮಕಿಯಲ್ಲಿ ಎಂಟು ಮಂದಿ ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಮೀಸಲು ಪಡೆ (DRG), ವಿಶೇಷ ಕಾರ್ಯಪಡೆ (STF), ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ನ ಬೆಟಾಲಿಯನ್ ಸಂಖ್ಯೆ 222 ಮತ್ತು CRPF ನ ಎಲೈಟ್ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್‌ನ (CoBRA) ಸಂಖ್ಯೆ 202 ಬೆಟಾಲಿಯನ್ ನಡೆಸಿದ ಜಂಟಿ ಕಾರ್ಯಾಚರಣೆಯ ನಂತರ ಈ ಎನ್ ಕೌಂಟರ್ ಸಂಭವಿಸಿದೆ.
ಇಂದು ಬೆಳಿಗ್ಗೆ 8.30 ಕ್ಕೆ ಎನ್‌ಕೌಂಟರ್ ಪ್ರಾರಂಭವಾಯಿತು ಮತ್ತು ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ತಾರ್ ಶ್ರೇಣಿಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಿ ಈ ಕುರಿತು ದೃಢಪಡಿಸಿದ್ದಾರೆ.
ಇತ್ತೀಚಿನದು ಸೇರಿದಂತೆ, ಜನವರಿ 1ರಿಂದ ಛತ್ತೀಸ್‌ಗಢದಲ್ಲಿ ವಿವಿಧ ಎನ್‌ಕೌಂಟರ್‌ಗಳಲ್ಲಿ ಒಟ್ಟಾರೆಯಾಗಿ 48 ಮಾವೋವಾದಿಗಳು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಪ್ರಮುಖ ಪೊಲೀಸ್ ನಿಗ್ರಹ ಕಾರ್ಯಾಚರಣೆಯ ಮಧ್ಯೆ ಈ ಎನ್‌ಕೌಂಟರ್‌ಗಳು ನಡೆದಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ ಆಗಸ್ಟ್‌ನಲ್ಲಿ ಮಾರ್ಚ್ 2026 ರ ವೇಳೆಗೆ ಭಾರತದಿಂದ ಎಡಪಂಥೀಯ ಉಗ್ರವಾದವನ್ನು (LWE) ನಿರ್ಮೂಲನೆ ಮಾಡಲು “ನಿರ್ದಯ ಕ್ರಮ” ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು.
ರಾಜ್ಯದಲ್ಲಿ ಎರಡು ದಶಕದ ನಕ್ಸಲ್-ಪೊಲೀಸ್ ಮುಖಾಮುಖಿಯಲ್ಲಿ 38 ಮಂದಿಯ ಹತ್ಯೆ


