ಔಷಧ ಪ್ರಚಾರಕ್ಕಾಗಿ ತಪ್ಪು ದಾರಿಗೆಳೆಯುವ ಜಾಹೀರಾತು ನೀಡಿದ ಪ್ರಕರಣದಲ್ಲಿ ಸ್ವಘೋಷಿತ ಯೋಗ ಗುರು ಬಾಬಾ ರಾಮ್‌ದೇವ್ ಮತ್ತು ಅವರ ಉದ್ಯಮ ಪಾಲುದಾರ ಆಚಾರ್ಯ ಬಾಲಕೃಷ್ಣ ವಿರುದ್ದ ಕೇರಳದ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ.
ಫೆಬ್ರವರಿ 1ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಪಾಲಕ್ಕಾಡ್‌ನ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಜಾಮೀನು ಸಹಿತ ಬಂಧನ ವಾರೆಂಟ್ ಹೊರಡಿಸಿದ್ದರು. ಫೆಬ್ರವರಿ 1ರಂದು ಇಬ್ಬರೂ ಕೂಡ ವಿಚಾರಣೆಗೆ ಗೈರಾದ ಕಾರಣ ಫೆಬ್ರವರಿ 15ರಂದು ವಿಚಾರಣೆಗೆ ಹಾಜರಾಗುವಂತೆ ಮತ್ತೊಂದು ಗಡುವು ನೀಡಿ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದ್ದಾರೆ.
ಔಷಧ ಪ್ರಚಾರಕ್ಕಾಗಿ ತಪ್ಪು ದಾರಿಗೆಳೆಯುವ ಜಾಹೀರಾತು ನೀಡಲಾಗಿದೆ ಎಂದು ಆರೋಪಿಸಿ ಕೇರಳದ ಔಷಧ ನಿಯಂತ್ರಣ ಇಲಾಖೆ ರಾಮ್‌ದೇವ್ ಮತ್ತು ಬಾಲಕೃಷ್ಣ ವಿರುದ್ಧ ದೂರು ದಾಖಲಿಸಿದೆ.
ಹರಿದ್ವಾರ ಮೂಲದ ಆಯುರ್ವೇದ ಔಷಧ ತಯಾರಿಕಾ ಕಂಪನಿ ಪತಂಜಲಿ ಆಯುರ್ವೇದದ ಮುಖ್ಯಸ್ಥರಾಗಿರುವ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ವಿರುದ್ದ ಭಾರತ ವಿವಿಧ ರಾಜ್ಯಗಳಲ್ಲಿ ಇದೇ ರೀತಿಯ ಪ್ರಕರಣಗಳಿವೆ. ಆದರೆ, ಮೊದಲ ಬಾರಿಗೆ ಬಂಧನ ವಾರೆಂಟ್ ಹೊರಡಿಸಲಾಗಿದೆ.
ಪತಂಜಲಿ ಉತ್ಪನ್ನಗಳು ಅಧಿಕ ರಕ್ತದೊತ್ತಡ ಮತ್ತು ಮಧುಮೇಹವನ್ನು ಗುಣಪಡಿಸುತ್ತದೆ ಎಂದು ತಮ್ಮ ದಿವ್ಯಾ ಫಾರ್ಮಸಿ ಮೂಲಕ ಸುದ್ದಿ ಮಾಧ್ಯಮಗಳಲ್ಲಿ ತಪ್ಪುದಾರಿಗೆಳೆಯುವ ಜಾಹೀರಾತು ನೀಡಿರುವ ಆರೋಪ ರಾಮ್‌ದೇವ್ ಮತ್ತು ಬಾಲಕೃಷ್ಣ ಮೇಲಿದೆ.
ಅಕ್ಟೋಬರ್ 2024ರಲ್ಲಿ ಈ ಸಂಬಂಧ ಕೇರಳದ ಪಾಲಕ್ಕಾಡ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಜನವರಿ 16, 2025ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಇಬ್ಬರಿಗೂ ಮೊದಲ ಸಮನ್ಸ್ ನೀಡಲಾಗಿತ್ತು.
ತೆಲಂಗಾಣ ಜಾತಿ ಸಮೀಕ್ಷೆ : ರಾಜ್ಯದ ಜನಸಂಖ್ಯೆಯಲ್ಲಿ ಹಿಂದುಳಿದ ಜಾತಿಯವರ ಪ್ರಮಾಣ ಶೇ. 56


