ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದ ದಲಿತ ಯುವತಿಯ ಕೊಲೆ ಪ್ರಕರಣದ ಪ್ರಮುಖ ಆರೋಪಿ ದಿಗ್ವಿಜಯ್ ಮತ್ತು ಅವರ ಸಹಚರರಾದ ವಿಜಯ್ ಸಾಹು ಮತ್ತು ಹರಿರಾಮ್ ಕೋರಿ ಅವರನ್ನು ಸೋಮವಾರ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಆರೋಪಿ ದಿಗ್ವಿಜಯ್ ಸಂತ್ರಸ್ತ ಯುವತಿಯ ಹುಟ್ಟೂರು ಸಹ್ನಾವಾ ಮೂಲದವರು ಎಂದು ಎಸ್‌ಎಸ್‌ಪಿ ರಾಜ್‌ಕರಣ್ ನಯ್ಯರ್ ಅವರು ಹೇಳಿದ್ದಾರೆ. ಅಯೋಧ್ಯೆ
ಸಂತ್ರಸ್ತೆಯು ಆರೋಪಿ ದಿಗ್ವಿಜಯ್ ಜೊತೆ ಸ್ನೇಹದೊಂದಿಗೆ ಇದ್ದರು ಎಂದು ವರದಿಯಾಗಿದೆ. ಅವರ ನಡುವಿನ ಸ್ನೇಹ ಸಂಬಂಧವು ಯುವತಿಯ ಸಹೋದರನಿಗೆ ಎರಡು ತಿಂಗಳ ಹಿಂದೆ ಗೊತ್ತಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಸಂತ್ರಸ್ತ ಯುವತಿಯ ಸಹೋದರನು ಆರೋಪಿ ದಿಗ್ವಿಜಯ್‌ಗೆ ಹಲ್ಲೆ ನಡೆಸಿ ತನ್ನ ಸಹೋದರಿಯಿಂದ ದೂರವಿರಲು ಎಚ್ಚರಿಸಿದ್ದರು. ಈ ಘಟನೆಯಿಂದ ಅವಮಾನಿತನಾಗಿದ್ದ ದಿಗ್ವಿಜಯ್, ಸೇಡು ತೀರಿಸಿಕೊಳ್ಳಲು ಯುವತಿಯನ್ನು ಕೊಂದಿದ್ದಾನೆ ಎಂದು TNIE ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
22 ವರ್ಷದ ದಲಿತ ಯುವತಿಯು ಗುರುವಾರ ರಾತ್ರಿಯಿಂದ ಕಾಣೆಯಾಗಿದ್ದರು. ಶನಿವಾರ ಬೆಳಿಗ್ಗೆ ಅವರ ಮೃತದೇಹವು ಗ್ರಾಮದ ಹೊರಗಿನ ಒಣಗಿದ ಕಾಲುವೆಯಲ್ಲಿ ಪತ್ತೆಯಾಗಿತ್ತು. ಈ ವೇಳೆ ಮೃತದೇಹದಲ್ಲಿ ಹಲವಾರು ಗಾಯಗಳು ಕಂಡುಬಂದಿದ್ದು, ನಗ್ನ ದೇಹದ ಕೈಕಾಲುಗಳು ಮುರಿತಕ್ಕೊಳಗಾಗಿ, ಶರೀರವೂ ಛಿದ್ರಗೊಂಡಿತ್ತು ಎಂದು ವರದಿಗಳು ಉಲ್ಲೇಖಿಸಿವೆ. ಅಯೋಧ್ಯೆ
ಯುವತಿಯ ಕುಟುಂಬ ಮತ್ತು ಗ್ರಾಮಸ್ಥರು ಕೂಡಾ ಘಟನೆಯನ್ನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಎಂದು ಶಂಕಿಸಿದ್ದಾರೆ. ನಾಪತ್ತೆಯಾದ ಯುವತಿಯ ಬಗ್ಗೆ ಯಾವುದೇ ಸುಳಿವು ಸಿಗದಿದ್ದಾಗ, ಅವರ ಕುಟುಂಬಿಕರು ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಶುಕ್ರವಾರ ರಾತ್ರಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ, ಸಂತ್ರಸ್ತ ಯುವತಿಯ ನಗ್ನ ಮೃತದೇಹವನ್ನು ಯುವತಿಯ ಅಕ್ಕನ ಪತಿ ಗ್ರಾಮದ ಹೊರಗಿನ ಒಣಗಿದ ಚರಂಡಿಯಲ್ಲಿ ಕಂಡುಕೊಂಡಿದ್ದರು.
ಯುವತಿಯ ಕೈಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿತ್ತು, ಇಡೀ ದೇಹದ ಮೇಲೆ ಗಾಯದ ಗುರುತುಗಳಿದ್ದವು ಮತ್ತು ಆಕೆಯ ಬಟ್ಟೆಗಳು ರಕ್ತದಲ್ಲಿ ತೊಯ್ದಿದ್ದು ಮೃತದೇಹದಿಂದ ಸ್ವಲ್ಪ ದೂರದಲ್ಲಿ ಕಂಡುಬಂದಿತ್ತು. ಪ್ರಾಥಮಿಕವಾಗಿ ಇದು ಕೊಲೆ ಪ್ರಕರಣದಂತೆ ಕಂಡುಬಂದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಶರ್ಮಾ ಶನಿವಾರ ತಿಳಿಸಿದ್ದರು.
ಇದನ್ನೂಓದಿ: ಅಯೋಧ್ಯೆ | ದಲಿತ ಯುವತಿಯ ನಗ್ನ ಶವ ಪತ್ತೆ; ಸಾಮೂಹಿಕ ಅತ್ಯಾಚಾರ, ಕೊಲೆ ಶಂಕೆ
ಅಯೋಧ್ಯೆ | ದಲಿತ ಯುವತಿಯ ನಗ್ನ ಶವ ಪತ್ತೆ; ಸಾಮೂಹಿಕ ಅತ್ಯಾಚಾರ, ಕೊಲೆ ಶಂಕೆ


