ಮಂಡ್ಯದ ಸರ್ಕಾರಿ ಶಾಲೆಯ ಆವರಣದಲ್ಲಿ 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಆರೋಪ ಕೇಳಿ ಬಂದಿದೆ
ಜನವರಿ 31ರಂದು ಘಟನೆ ನಡೆದಿದ್ದು, ಬಾಲಕಿಗೆ ರಕ್ತಸ್ರಾವವಾಗುತ್ತಿರುವುದನ್ನು ಕಂಡು ಆಕೆಯ ಚಿಕ್ಕಮ್ಮ ಆಸ್ಪತ್ರೆಗೆ ದಾಖಲಿಸಿದ ನಂತರ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಬಾಲಕಿಯ ಪ್ರಕಾರ, ಮೂವರು ವ್ಯಕ್ತಿಗಳು ಕೇಕ್ ಆಮಿಷವೊಡ್ಡಿ ಕರೆದೊಯ್ದು, ಚಾಕು ತೋರಿಸಿ, ಬೆದರಿಸಿ ದೌರ್ಜನ್ಯ ನಡೆಸಿದ್ದಾರೆ. ಆದರೆ, ಆಕೆಯ ಹೇಳಿಕೆಗಳು ಅಸಮಂಜಸವಾಗಿವೆ ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ. ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿಯೊಬ್ಬರು ಆಕೆಗೆ ಕೌನ್ಸೆಲಿಂಗ್ ನಡೆಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. “ನಾವು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಮತ್ತು ಬಾಲಕಿ ಹೇಳಿಕೆಯಲ್ಲಿ ತಿಳಿಸಿರುವ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ. ಆಕೆಯ ಹೇಳಿಕೆಯಲ್ಲಿ ಕೆಲವು ಅಸಂಗತತೆಗಳಿವೆ” ಎಂದು ಎಸ್‌ಪಿ ಹೇಳಿದ್ದಾಗಿ ವರದಿ ತಿಳಿಸಿದೆ.
ಬಾಲಕಿಯ ಹೇಳಿಕೆಯ ನಂತರ, ಇಬ್ಬರು ಅಪರಿಚಿತ ಹುಡುಗರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ಕುರಿತು ಮಾಹಿತಿ ಕಲೆ ಹಾಕಲು ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಖಾಸಗಿ ಭಾಗಗಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಕಂಡುಬಂದಿದೆ ಎಂದು ವರದಿ ವಿವರಿಸಿದೆ.
ಶಾಲೆಯ ಬಳಿ ಶೌಚಾಲಯಕ್ಕೆ ಹೋದಾಗ ಇಬ್ಬರು ಹುಡುಗರು ಬಂದು ಬಾಲಕಿಯನ್ನು ಬಾಯಿ, ಕಣ್ಣು ಮುಚ್ಚಿ ಎಳೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕನ್ನಡದ ಡಿಜಿಟಲ್ ಮಾಧ್ಯಮವೊಂದು ವರದಿ ಮಾಡಿದೆ. ಇಬ್ಬರು ಆರೋಪಿಗಳು ಬಾಲಕಿಯ ಶಾಲೆಯದ್ದೇ ಹುಡುಗರು. ಈ ಪೈಕಿ ಒಬ್ಬ ಆಕೆಯ ಸಹಪಾಠಿ ಎಂದು ವರದಿ ಹೇಳಿದೆ.
ಈ ನಡುವೆ, ಘಟನೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮಂಡ್ಯದಲ್ಲಿ ನಡೆದಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯಮೇಲಿನ ಸಾಮೂಹಿಕ ಅತ್ಯಾಚಾರ ಘಟನೆ ಅತ್ಯಂತ ಹೇಯ ಹಾಗೂ ಪೈಶಾಚಿಕ ಮನಸ್ಥಿತಿಯ ವಿಕೃತರ ಅಟ್ಟಹಾಸದ ಪರಮಾವಧಿಯಾಗಿದೆ. ಈ ಘಟನೆಯು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನಿಷ್ಕ್ರೀಯಗೊಂಡಿದ್ದು, ಇದರ ಲಾಭ ಪಡೆಯುತ್ತಿರುವ ಸಮಾಜಘಾತುಕ… pic.twitter.com/nNxBQdOBGk
— Vijayendra Yediyurappa (@BYVijayendra) February 3, 2025
ಹುಬ್ಬಳ್ಳಿ | ಗೌರಿ ಲಂಕೇಶ್, ಎಂ.ಎಂ ಕಲ್ಬುರ್ಗಿ ಹತ್ಯೆ ಆರೋಪಿಗಳಿಗೆ ‘ಹಿಂದೂ ಹುಲಿ’ಗಳೆಂದು ಬ್ಯಾನರ್ ಹಾಕಿ ಸ್ವಾಗತ!


