ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಸೋಲಿನಿಂದ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸಂತೋಷಗೊಂಡಿದ್ದಾರೆ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಭಾನುವಾರ ಹೇಳಿದ್ದಾರೆ. ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಳೆದ ಕೆಲವು ವರ್ಷಗಳಿಂದ ಮಾಡಲಾಗುತ್ತಿರುವ ಭ್ರಷ್ಟಾಚಾರ ಆರೋಪಗಳ ಕುರಿತು ಅಣ್ಣಾ ಹಜಾರೆ ಅವರ ಮೌನವನ್ನು ಸಹ ರಾವತ್ ಪ್ರಶ್ನಿಸಿದ್ದಾರೆ. ಕೇಜ್ರಿವಾಲ್ ಸೋಲು
ದೆಹಲಿಯ 70 ಸದಸ್ಯ ಬಲದ ವಿಧಾನಸಭೆಯಲ್ಲಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಆಮ್ ಆದ್ಮಿ ಪಕ್ಷದ ಆಳ್ವಿಕೆಯನ್ನು ಕೊನೆಗೊಳಿಸಿತ್ತು. ಅಲ್ಲದೆ, ಸೋತ ಪ್ರಮುಖರಲ್ಲಿ ಎಎಪಿ ಮುಖ್ಯಸ್ಥ ಕೇಜ್ರಿವಾಲ್ ಕೂಡ ಒಬ್ಬರು. ಕೇಜ್ರಿವಾಲ್ ಸೋಲು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಣ್ಣಾ ಹಜಾರೆ ಬಗ್ಗೆ ಪ್ರತಿಕ್ರಿಯಿಸಿದ ರಾವತ್, “ಮೋದಿ ಆಳ್ವಿಕೆಯಲ್ಲಿ ಭ್ರಷ್ಟಾಚಾರ ನಡೆದಾಗ ಹಜಾರೆ ಎಲ್ಲಿದ್ದರು? ಕೇಜ್ರಿವಾಲ್ ಸೋಲಿನಿಂದ ಹಜಾರೆ ಸಂತೋಷಗೊಂಡಿದ್ದಾರೆ. ಒಬ್ಬನೇ ಕೈಗಾರಿಕೋದ್ಯಮಿಯ ಕೈಯಲ್ಲಿ ಸಂಪತ್ತು ಕೇಂದ್ರೀಕೃತವಾಗಿ ದೇಶವನ್ನು ಲೂಟಿ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಹೇಗೆ ಮುಂದುವರಿಯಬಹುದು? ಇಂತಹ ಸಮಯದಲ್ಲಿ ಹಜಾರೆ ಅವರ ಮೌನದ ಹಿಂದಿನ ರಹಸ್ಯವೇನು” ಎಂದು ರಾಜ್ಯಸಭಾ ಸಂಸದರು ಪ್ರಶ್ನಿಸಿದ್ದಾರೆ.
“ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಮತದಾರರ ಪಟ್ಟಿ ಗೊಂದಲ ಒಂದೇ ರೀತಿಯ ಮಾದರಿಯಲ್ಲಿ ಇತ್ತು. ಆದಾಗ್ಯೂ, ಹಜಾರೆ ಅವರು ಅಂತಹ ವಿಷಯಗಳ ಬಗ್ಗೆ ಮೌನವಾಗಿದ್ದಾರೆ. ಹರಿಯಾಣದಲ್ಲೂ ಇದೇ ರೀತಿಯ ದೂರುಗಳು ಕೇಳಿ ಬಂದಿದ್ದವು. ಬಿಹಾರ ಚುನಾವಣೆಯಲ್ಲೂ ಇವು ಕೇಳಿ ಬರುತ್ತವೆ” ಎಂದು ರಾವತ್ ವರದಿಗಾರರಿಗೆ ತಿಳಿಸಿದ್ದಾರೆ.
2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ, ಚುನಾವಣೆಗಳಲ್ಲಿ ಸಾಂವಿಧಾನಿಕ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. “ಅಕ್ರಮ ಮತ್ತು ಹಣದ ಬಲದ ಮೂಲಕ ಗೆಲುವು ಸಾಧಿಸಲಾಗುತ್ತಿದೆ” ಎಂದು ರಾವತ್ ಪ್ರತಿಪಾದಿಸಿದ್ದಾರೆ. ಅಲ್ಲದೆ, ಅವರು ಎಎಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದಲ್ಲಿ ಸ್ಪರ್ಧಿಸಿದ್ದರೆ ದೆಹಲಿ ಚುನಾವಣೆಯ ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿ ಚುನಾವಣಾ ಫಲಿತಾಂಶಗಳು ಘೋಷಣೆಯಾದ ನಂತರ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಹಜಾರೆ, ಕೇಜ್ರಿವಾಲ್ ನಾನು ಹೇಳಿದ್ದ ವಿಷಯಗಳಿಗೆ ಗಮನ ಕೊಡಲಿಲ್ಲ. ಅವರು ಮದ್ಯದ ಮೇಲೆ ಮಾತ್ರ ಗಮನಹರಿಸಿದರು ಎಂದು ಹೇಳಿಕೊಂಡಿದ್ದಾರೆ.
“ಅಭ್ಯರ್ಥಿಯ ನಡವಳಿಕೆ ಮತ್ತು ಆಲೋಚನೆಗಳು ಶುದ್ಧವಾಗಿರಬೇಕು. ಅವನ ಜೀವನವು ದೋಷರಹಿತವಾಗಿರಬೇಕು ಮತ್ತು ಅದು ತ್ಯಾಗವನ್ನು ಒಳಗೊಂಡಿರಬೇಕು ಎಂದು ನಾನು ಯಾವಾಗಲೂ ಹೇಳುತ್ತಲೆ ಬಂದಿದ್ದೇನೆ. ಮತದಾರರಲ್ಲಿ ವಿಶ್ವಾಸವನ್ನು ಬೆಳೆಸುವ ಗುಣಗಳು ಇವುಗಳಾಗಿದ್ದು, ನಾನು ಇದನ್ನು ಕೇಜ್ರಿವಾಲ್‌ಗೆ ಹೇಳಿದ್ದೆ. ಆದರೆ ಅವರು ಅದರತ್ತ ಗಮನ ಹರಿಸಲಿಲ್ಲ. ಅವರು ಹಣ ಬಲದ ಹಿಂದೆ ಹೋಗಿದ್ದರು” ಎಂದು ಹಜಾರೆ ಹೇಳಿದ್ದರು.
ಇದನ್ನೂಓದಿ: ಸಮುದ್ರ ಗಡಿ ಉಲ್ಲಂಘನೆ | ಶ್ರೀಲಂಕಾ ನೌಕಾಪಡೆಯಿಂದ 14 ಭಾರತೀಯ ಮೀನುಗಾರರ ಬಂಧನ; ಸರಣಿ ಮುಂದುವರಿಕೆ
ಸಮುದ್ರ ಗಡಿ ಉಲ್ಲಂಘನೆ | ಶ್ರೀಲಂಕಾ ನೌಕಾಪಡೆಯಿಂದ 14 ಭಾರತೀಯ ಮೀನುಗಾರರ ಬಂಧನ; ಸರಣಿ ಮುಂದುವರಿಕೆ


