ಕಬ್ಬು ಕಟಾವು ಸಂಬಂಧಿತ ಕೆಲಸಗಳಿಗಾಗಿ ಸ್ಥಳೀಯ ಗುತ್ತಿಗೆದಾರರು ಕರೆದೊಯ್ದಿದ್ದ ನೈಋತ್ಯ ಮಧ್ಯಪ್ರದೇಶದ ಬುಡಕಟ್ಟು ಜನಾಂಗದ 17 ಜನರನ್ನು ಮಹಾರಾಷ್ಟ್ರದ ಧರಾಶಿವ್ (ಉಸ್ಮಾನಾಬಾದ್) ಜಿಲ್ಲೆಯಲ್ಲಿ ಅವರಿಗೆ ಕೂಲಿಯೂ ಕೊಡದೆ, ಕೂಡಿ ಹಾಕಿ ಜೀತದಾಳುಗಳನ್ನಾಗಿ ಮಾಡಲು ಪ್ರಯತ್ನಿಸಿರುವ ಘಟನೆ ನಡೆದಿದೆ. ಪೊಲೀಸ್ ದೂರಿನ ನಂತರ ಅವರನ್ನು ಬಂಧನದಿಂದ ಬಿಡುಗಡೆ ಮಾಡಲಾಯಿತು ಎಂದು ವರದಿಯಾಗಿದೆ. ಮಹಾರಾಷ್ಟ್ರ
ಕೂಡಿ ಹಾಕಲ್ಪಟ್ಟ 17 ಜನರಲ್ಲಿ ಐವರು ಮಹಿಳೆಯರು ಮತ್ತು ಏಳು ಮಕ್ಕಳು ಇದ್ದರು ಎಂದು TNI ವರದಿ ಮಾಡಿದೆ. ಬುಡಕಟ್ಟು ಸಮುದಾಯದ ಈ ಕಾರ್ಮಿಕರು ನಾಲ್ಕು ತಿಂಗಳ ಹಿಂದೆ ಜಲಗಾಂವ್ (ಮಹಾರಾಷ್ಟ್ರ) ಮೂಲದ ಗುತ್ತಿಗೆದಾರ ದೇವಸಿಂಗ್ ಎಂಬುವವರ ಮೂಲಕ ಮಹಾರಾಷ್ಟ್ರದ ಧಾರಾಶಿವ್ (ಉಸ್ಮಾನಾಬಾದ್) ಜಿಲ್ಲೆಯ ಕಲಾಂಬ್ ತಹಸಿಲ್‌ನ ಗಂಭೀರ್ವಾಡಿ ಗ್ರಾಮದ ಶ್ರೀಮಂತ ರೈತನ ಕಬ್ಬಿನ ಹೊಲಗಳಲ್ಲಿ ಕಬ್ಬು ಕಟಾವು ಸಂಬಂಧಿತ ಕೆಲಸಗಳಿಗಾಗಿ ತೆರಳಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆದಾಗ್ಯೂ, ಗುತ್ತಿಗೆದಾರ ದೇವಸಿಂಗ್ ಕಾರ್ಮಿಕರನ್ನು ಧರಾಶಿವ್ ಜಿಲ್ಲೆಯಲ್ಲಿ ಬಿಟ್ಟು ಪರಾರಿಯಾಗಿದ್ದನು. ಗುತ್ತಿಗೆದಾರ ಪರಾರಿಯಾದ ಕಾರಣಕ್ಕೆ ಬುಡಕಟ್ಟು ಕಾರ್ಮಿಕರು ಅಲ್ಲಿಯೇ ಸಿಲುಕಿಕೊಂಡಿದ್ದು, ಅವರಿಗೆ ಸರಿಯಾದ ಆಹಾರ ಕೂಡಾ ಲಭ್ಯವಾಗಿಲ್ಲ ಎಂದು ಆರೋಪಿಸಲಾಗಿದೆ.
ಆಹಾರದ ಕೊರತೆ ಮತ್ತು ಇತರ ಸಮಸ್ಯೆಗಳಿಂದಾಗಿ ಬುಡಕಟ್ಟು ಕಾರ್ಮಿಕರು ಕಬ್ಬಿನ ತೋಟದ ಮಾಲೀಕರ ಬಳಿ ತಮ್ಮ ವೇತನವನ್ನು ಪಾವತಿಸುವಂತೆ ಕೇಳಿಕೊಂಡಿದ್ದರು. ಆದರೆ ಈ ವೇಳೆ ಕಬ್ಬಿನ ತೋಟದ ಮಾಲಿಕ ಅವರಿಗೆ ಭರವಸೆ ನೀಡಿದ್ದ ವೇತನ ನೀಡುವ ಬದಲು, ಅವರ ಮೇಲೆಯೆ ಹಲ್ಲೆ ನಡೆಸಿದ್ದರು. ಮಹಾರಾಷ್ಟ್ರ
ಹಲ್ಲೆ ನಡೆಸಿದ್ದಲ್ಲದೆ, ಕಾರ್ಮಿಕರೊಂದಿಗೆ ಅನುಚಿತವಾಗಿ ವರ್ತಿಸಿ, ಹೊರಗಿನ ಪ್ರಪಂಚದೊಂದಿಗಿನ ಸಂಪರ್ಕವನ್ನು ಕಡಿತಗೊಳಿಸಲು ಅವರ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಒಪ್ಪಿದ ವೇತನವನ್ನು ಪಾವತಿಸದೆ ಅವರನ್ನು ಬಂಧಿಸಿ ಜಮೀನಿನಲ್ಲಿ ಕೆಲಸ ಮಾಡಲು ಒತ್ತಾಯಿಸಲಾಯಿತು ಎಂದು ಎಂದು ಹೇಳಲಾಗಿದೆ.
ಕಳೆದ ವಾರ ಜನವರಿಯಲ್ಲಿ ಬಂಬಾಡಾ ಗ್ರಾಮದ (ಬುಡಕಟ್ಟು ಕಾರ್ಮಿಕರು ಮಧ್ಯಪ್ರದೇಶದಲ್ಲಿ ವಾಸಿಸುತ್ತಿದ್ದ ಗ್ರಾಮ) ನಿವಾಸಿಯೊಬ್ಬರು ಬುರ್ಹಾನ್‌ಪುರ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಈ ದೂರಿನ ಮೇರೆಗೆ, ಬುರ್ಹಾನ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಪಾಟಿದಾರ್ ಅವರು ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಗೆ ಮೀಸಲಾದ ಪೊಲೀಸ್ ತಂಡವನ್ನು ಕಾರ್ಮಿಕರಿದ್ದ ತೋಟಕ್ಕೆ ಕಳುಹಿಸಿದ್ದರು. ಹಾಗಾಗಿ ಮಂಗಳವಾರ ಅಲ್ಲಿ ಬಂಧಿತರಾಗಿದ್ದ 17 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
ಇದನ್ನೂಓದಿ: ಬಾಂಬೆ ಹೈಕೋರ್ಟ್ | ಮ್ಯಾಗಿ ನೂಡಲ್ಸ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು
ಬಾಂಬೆ ಹೈಕೋರ್ಟ್ | ಮ್ಯಾಗಿ ನೂಡಲ್ಸ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು


