ಮಾನವ ಮತ್ತು ವನ್ಯಜೀವಿಗಳ ಸಂಘರ್ಷವನ್ನು ಕಡಿಮೆ ಮಾಡಲು ಜಾರ್ಖಂಡ್ ಅರಣ್ಯ ಇಲಾಖೆಯು ‘ಎಲಿಫೆಂಟ್ ರೂಟ್ ಪ್ರಿಡಿಕ್ಟರ್’ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಆಪ್ಲಿಕೇಷನ್ ಹವಾಮಾನ ಮುನ್ಸೂಚನೆಗಳಂತೆಯೇ ಸಂಭಾವ್ಯ ಆನೆಗಳ ದಾರಿಗಳನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾಗಿದೆ.
ನಿರ್ದಿಷ್ಟ ಕಾರಿಡಾರ್‌ನಲ್ಲಿ ಆನೆಗಳ ಚಲನೆಯ ಬಗ್ಗೆಗಿನ ಪರಂಪರೆಯ ದತ್ತಾಂಶದ ಸಂಶೋಧನಾ ಅಧ್ಯಯನಗಳ ಆಧಾರದ ಮೇಲೆ ಈ ಅಪ್ಲಿಕೇಶನ್ ಅನ್ನು ಸಿದ್ಧಪಡಿಸಲಾಗಿದೆ ಎಂದು ವರದಿಯಾಗಿದೆ. ಜಾರ್ಖಂಡ್
ಅಪ್ಲಿಕೇಶನ್‌ನ ಹಿಂದಿನ ವ್ಯಕ್ತಿ ಹಜಾರಿಬಾಗ್ ಡಿಎಫ್‌ಒ (ಪೂರ್ವ) ವಿಕಾಸ್ ಕುಮಾರ್ ಉಜ್ವಲ್ ಕಳೆದ ಕೆಲವು ತಿಂಗಳುಗಳಿಂದ ಇದರ ಮೇಲೆ ಕೆಲಸ ಮಾಡುತ್ತಿದ್ದು, ಈಗಾಗಲೆ ಈ ಅಪ್ಲಿಕೇಶನ್‌ನ ಸೀಮಿತ ಪರೀಕ್ಷೆಯನ್ನು ಸಹ ಮಾಡಲಾಗಿದೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಅಪ್ಲಿಕೇಶನ್ ಈಗ ಅಂತಿಮ ಹಂತದಲ್ಲಿದೆ. ಅದನ್ನು ಶೀಘ್ರದಲ್ಲೇ ಜಾರ್ಖಾಂಡ್‌ನ ಹಜಾರಿಬಾಗ್‌ನಲ್ಲಿಯೇ ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭಿಸಲಾಗುವುದು. ಎರಡನೇ ಹಂತದಲ್ಲಿ, ಇದನ್ನು ತಳಮಟ್ಟದ ಅರಣ್ಯ ಸಿಬ್ಬಂದಿಗೆ ಮತ್ತು ನಂತರ ಜಾರ್ಖಂಡ್ ಅರಣ್ಯ ನಿರ್ವಹಣಾ ಸಮಿತಿಗಳಿಗೆ (ಜೆಎಫ್‌ಎಂಸಿ) ಲಭ್ಯವಾಗುವಂತೆ ಮಾಡಲಾಗುತ್ತದೆ” ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ವೆಬ್ ಆಧಾರಿತ ಅಪ್ಲಿಕೇಶನ್ ಅನ್ನು ಅದರ ವಲಸೆ ಮಾರ್ಗದ ಬಗ್ಗೆ ಆಯ್ಕೆ ಮಾಡುವ ಮೊದಲು ಆನೆಯಂತೆ ಯೋಚಿಸಲು ಪ್ರೋಗ್ರಾಮ್ ಮಾಡಲಾಗಿದೆ.
ಇದು ಇಲ್ಲಿಯವರೆಗೆ 80% ಕ್ಕಿಂತ ಹೆಚ್ಚು ನಿಖರವಾಗಿದೆ ಎಂದು ಸಾಬೀತಾಗಿದೆ ಮತ್ತು ತಳಮಟ್ಟದಲ್ಲಿರುವ ಅರಣ್ಯ ಸಿಬ್ಬಂದಿ ಗ್ರಾಮಸ್ಥರನ್ನು ಮುಂಚಿತವಾಗಿ ಎಚ್ಚರಿಸಲು, ಸಂಘರ್ಷದ ನಿರೀಕ್ಷೆಯಲ್ಲಿ ತ್ವರಿತ ಪ್ರತಿಕ್ರಿಯೆ ತಂಡಗಳನ್ನು ಇರಿಸಲು ಮತ್ತು (ಅಗತ್ಯವಿದ್ದರೆ) ಅವುಗಳನ್ನು ಎಚ್ಚರಿಕೆಯಿಂದ ಓಡಿಸಲು ಸಹಾಯ ಮಾಡುತ್ತದೆ ಎಂದು ಅವರು ಅರಣ್ಯ ಅಧಿಕಾರಿ ಹೇಳಿದ್ದಾರೆ.
ಕೊನೆಯದಾಗಿ ನೋಡಿದ ಸ್ಥಳದಿಂದ ರಾತ್ರಿಯಲ್ಲಿ ಆನೆಗಳು ಎಲ್ಲಿವೆ ಎಂಬುದರ ಬಗ್ಗೆಯೂ ಇದು ಸುಳಿವು ನೀಡುತ್ತದೆ ಎಂದು ಅವರು ಹೇಳಿದ್ದಾರೆ. ಮಾನವ-ಆನೆ ಸಂಘರ್ಷ (HEC) ನಿರ್ವಹಣೆ ಮತ್ತು ಅರಣ್ಯ ಸಿಬ್ಬಂದಿ (ಮತ್ತು ಆನೆ ಚಾಲನಾ ತಂಡಗಳು) ಸುರಕ್ಷತೆಯಲ್ಲಿ ಇದು ಬಹಳ ಸಹಾಯಕವಾದ ಸಾಧನವಾಗಿದೆ ಎಂದು ಸಾಬೀತಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಗೆ ಸಭೆ ಸೇರಲಿರುವ ಮೋದಿ, ರಾಹುಲ್!


