ಆಗಸ್ಟ್ 15, 1947 ರಂದು ಅಸ್ತಿತ್ವದಲ್ಲಿದ್ದ ಸ್ಥಳದ ಧಾರ್ಮಿಕ ಸ್ವರೂಪವನ್ನು ಅದೇ ಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕೆಂದು ಆದೇಶಿಸುವ 1991 ರ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆಯ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹಲವಾರು ಹೊಸ ಅರ್ಜಿಗಳನ್ನು ಸಲ್ಲಿಸಿರುವ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ. ಪೂಜಾ ಸ್ಥಳಗಳ ಕಾಯ್ದೆ
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು, ಇಬ್ಬರು ನ್ಯಾಯಾಧೀಶರ ಸಂಯೋಜನೆಯಲ್ಲಿ ವಿಚಾರಣೆ ನಡೆಸುತ್ತಿರುವುದರಿಂದ, ಈ ಹಿಂದೆ ಮೂವರು ನ್ಯಾಯಾಧೀಶರ ಪೀಠವು ವಿಚಾರಣೆ ನಡೆಸಿದ ಬಾಕಿ ಉಳಿದಿರುವ ನಿಗದಿತ ಅರ್ಜಿಗಳನ್ನು ವಿಚಾರಣೆಯಲ್ಲಿ ಕೈಗೆತ್ತಿಕೊಳ್ಳಲಾಗುವುದಿಲ್ಲ ಎಂದು ಸೂಚಿಸಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನಾವು ಅದನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗದಿರಬಹುದು” ಎಂದು ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರ ಅರ್ಜಿ ವಿಚಾರಣೆಗೆ ಹೊಸ ಅರ್ಜಿಯನ್ನು ಪ್ರಸ್ತಾಪಿಸಿದಾಗ ಸಿಜೆಐ ಹೇಳಿದ್ದಾರೆ. ವಿಚಾರಣೆಯ ಆರಂಭದಲ್ಲಿ ಜೈಸಿಂಗ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು.
“ಅರ್ಜಿಗಳನ್ನು ಸಲ್ಲಿಸಲು ಕೂಡಾ ಮಿತಿ ಇದೆ. ಹಲವು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಲಾಗಿದೆ… ನಾವು ಅದನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗದಿರಬಹುದು” ಎಂದು ಸಿಜೆಐ ಹೇಳಿದ್ದಾರೆ. ಈ ಅರ್ಜಿಗಳಿಗೆ ಮಾರ್ಚ್‌ನಲ್ಲಿ ದಿನಾಂಕವನ್ನು ನೀಡಬಹುದು ಎಂದು ಅವರು ಹೇಳಿದ್ದಾರೆ. ಪೂಜಾ ಸ್ಥಳಗಳ ಕಾಯ್ದೆ
ಡಿಸೆಂಬರ್ 12, 2024 ರಂದು ಸುಪ್ರಿಂಕೋರ್ಟ್ ನೀಡಿದ್ದ ಆದೇಶದ ಮೂಲಕ, ವಾರಣಾಸಿಯ ಜ್ಞಾನವಾಪಿ, ಮಥುರಾದ ಶಾಹಿ ಈದ್ಗಾ ಮಸೀದಿ ಮತ್ತು ಸಂಭಾಲ್‌ನ ಶಾಹಿ ಜಾಮಾ ಮಸೀದಿ ಸೇರಿದಂತೆ 10 ಮಸೀದಿಗಳ ‘ಮೂಲ ಧಾರ್ಮಿಕ ಸ್ವರೂಪ’ವನ್ನು ಖಚಿತಪಡಿಸಿಕೊಳ್ಳಲು ಸಮೀಕ್ಷೆ ನಡೆಸಲು ನಿರ್ದೇಶನ ನೀಡಬೇಕು ಎಂದು ಕೋರಿ ಬಿಜೆಪಿ ಬೆಂಬಲಿಗರು ಸಲ್ಲಿಸಿದ್ದ ಸುಮಾರು 18 ಮೊಕದ್ದಮೆಗಳಲ್ಲಿ ವಿಚಾರಣೆಯನ್ನು ಪರಿಣಾಮಕಾರಿಯಾಗಿ ಸ್ಥಗಿತಗೊಳಿಸಿತು.
ಅದಕ್ಕೂ ಮೊದಲು ಸಂಭಾಲ್‌ನಲ್ಲಿ ಕೆಳ ಹಂತದ ನ್ಯಾಯಾಲಯದ ಆದೇಶದ ಮೇರೆಗೆ ನಡೆಸಲಾಗುತ್ತಿದ್ದ ಸಮೀಕ್ಷೆಯ ಸಮಯದಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ಅಪ್ರಾಪ್ತ ವಯಸ್ಕ ಸೇರಿದಂತೆ ಐದು ಮುಸ್ಲಿಂ ಯುವಕರು ಸಾವನ್ನಪ್ಪಿದ್ದರು. ಇದರ ನಂತರ ನಂತರ ಸುಪ್ರಿಂಕೋರ್ಟ್ ಫೆಬ್ರವರಿ 17 ರಂದು ಪರಿಣಾಮಕಾರಿ ವಿಚಾರಣೆಗೆ ಎಲ್ಲಾ ಅರ್ಜಿಗಳನ್ನು ಪಟ್ಟಿ ಮಾಡಿತ್ತು.
ಡಿಸೆಂಬರ್ 12 ರ ನಂತರ ಪೂಜಾ ಸ್ಥಳಗಳ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಕೋರಿ, AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಸಮಾಜವಾದಿ ಪಕ್ಷದ ನಾಯಕಿ, ಕೈರಾನಾ ಸಂಸದೆ ಇಕ್ರಾ ಚೌಧರಿ ಮತ್ತು ಕಾಂಗ್ರೆಸ್ ಪಕ್ಷ ಸೇರಿದಂತೆ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದೆ.
ಫೆಬ್ರವರಿ 14 ರಂದು ಉತ್ತರ ಪ್ರದೇಶದ ಕೈರಾನಾದ ಲೋಕಸಭಾ ಸಂಸದೆ ಚೌಧರಿ ಅವರು, ಮಸೀದಿಗಳು ಮತ್ತು ದರ್ಗಾಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಕಾನೂನು ಕ್ರಮಗಳು ಕೋಮು ಸಾಮರಸ್ಯ ಮತ್ತು ದೇಶದ ಜಾತ್ಯತೀತ ಸಂರಚನೆಗೆ ಧಕ್ಕೆ ತರುತ್ತಿವೆ ಎಂದು ಅರ್ಜಿ ಸಲ್ಲಿಸಿದ್ದು, ಈ ರೀತಿಯ ಪ್ರವೃತ್ತಿ ಹೆಚ್ಚುತ್ತಿದ್ದು, ಅದನ್ನು ತಡೆಯುವಂತೆ ಕೋರಿದ್ದಾರೆ. ಇದೇ ರೀತಿಯ ಅರ್ಜಿಯನ್ನು ಓವೈಸಿ ಅವರ ಪ್ರತ್ಯೇಕ ಅರ್ಜಿಯಲ್ಲಿ ಪರಿಶೀಲಿಸಲು ಸುಪ್ರೀಂ ಕೋರ್ಟ್ ಈ ಹಿಂದೆ ಒಪ್ಪಿಕೊಂಡಿತ್ತು.
1991 ರ ಕಾನೂನಿನ ನಿಬಂಧನೆಗಳ ಸಿಂಧುತ್ವದ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಬಿಜೆಪಿ ಪರ ಸಂಘಟನೆಗಳು ಸುಪ್ರಿಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದಕ್ಕೂ ಮೊದಲು, 1991 ರ ಕಾನೂನಿನ ವಿವಿಧ ನಿಬಂಧನೆಗಳನ್ನು ಪ್ರಶ್ನಿಸಿ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಪ್ರಮುಖ ಅರ್ಜಿ ಸೇರಿದಂತೆ ಆರು ಅರ್ಜಿಗಳನ್ನು ಪೀಠವು ವಿಚಾರಣೆ ನಡೆಸುತ್ತಿತ್ತು.
1991ರ ಈ ಕಾನೂನು ಯಾವುದೇ ಪೂಜಾ ಸ್ಥಳವನ್ನು ಪರಿವರ್ತಿಸುವುದನ್ನು ನಿಷೇಧಿಸುತ್ತದೆ ಮತ್ತು ಆಗಸ್ಟ್ 15, 1947 ರಂದು ಅಸ್ತಿತ್ವದಲ್ಲಿದ್ದ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಹಾಗೆಯೆ ಕಾಪಾಡಿಕೊಳ್ಳಲು ಅವಕಾಶ ನೀಡುತ್ತದೆ. ಆದಾಗ್ಯೂ, ಅಯೋಧ್ಯೆಯಲ್ಲಿ ಬಾಬರಿ ಮಸೀದಿಗೆ ಸಂಬಂಧಿಸಿದ ವಿವಾದವನ್ನು ಈ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು.
ಇದನ್ನೂಓದಿ: ರಾಜಸ್ಥಾನ| ಪೊಲೀಸ್ ಭದ್ರತೆಯಲ್ಲಿ ದಲಿತ ವರನ ಕುದುರೆ ಮೆರವಣಿಗೆ; ಬೆದರಿಕೆ ಹಾಕಿದ ಪ್ರಬಲ ಜಾತಿಯ ನಾಲ್ವರ ಬಂಧನ
ರಾಜಸ್ಥಾನ| ಪೊಲೀಸ್ ಭದ್ರತೆಯಲ್ಲಿ ದಲಿತ ವರನ ಕುದುರೆ ಮೆರವಣಿಗೆ; ಬೆದರಿಕೆ ಹಾಕಿದ ಪ್ರಬಲ ಜಾತಿಯ ನಾಲ್ವರ ಬಂಧನ


