ಚೆನ್ನೈ: 27 ವರ್ಷದ ಮಹಿಳೆಯ ಮೇಲೆ ಚಾಕು ತೋರಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಿಹಾರದ ಅಪ್ರಾಪ್ತ ವಯಸ್ಕ ಸೇರಿದಂತೆ ಮೂವರು ಕಾರ್ಮಿಕರನ್ನು ಬುಧವಾರ ತಮಿಳುನಾಡಿನ ತಿರುಪುರದಲ್ಲಿ ಬಂಧಿಸಲಾಗಿದೆ. ಆಕೆಯ ಗಂಡನನ್ನು ಕಟ್ಟಿಹಾಕಿ ಮಗುವಿನ ಕತ್ತು ಕತ್ತರಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಕುಟುಂಬವು ಫೆಬ್ರವರಿ 17ರಂದು ತಿರುಪುರ ರೈಲ್ವೆ ನಿಲ್ದಾಣದ ಬಳಿ ಈ ಆರೋಪಿಗಳನ್ನು ಭೇಟಿಯಾಯಿತು. ಸ್ಥಳೀಯ ಉಡುಪು ಉತ್ಪಾದನಾ ಘಟಕಗಳಲ್ಲಿನ ತಮ್ಮ ಕೆಲಸದಲ್ಲಿ ಅತೃಪ್ತಿ ಹೊಂದಿ ಒಡಿಶಾಗೆ ಮರಳಲು ಯೋಚಿಸುತ್ತಿದ್ದಾಗ ಅವರು ಆರೋಪಿಗಳನ್ನು ಭೇಟಿಯಾದರು ಎಂದು ತಿರುಪುರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಯಾದವ್ ಗಿರೀಶ್ ಹೇಳಿದರು.
“ಆರೋಪಿಗಳು ತಾವು ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಿ ಕುಟುಂಬವನ್ನು ತಮ್ಮ ಕೋಣೆಗೆ ಕರೆದೊಯ್ದರು. ರಾತ್ರಿಯ ಸಮಯದಲ್ಲಿ ಅವರು ಆಕೆಯ ಗಂಡನನ್ನು ಹಗ್ಗದಿಂದ ಕಟ್ಟಿ ಹಾಕಿ, ಮಹಿಳೆಯ ಮೇಲೆ ಚಾಕು ತೋರಿಸಿ ಅತ್ಯಾಚಾರ ನಡೆಸಿದರು. ಮಹಿಳೆ ವಿರೋಧಿಸಿದಾಗ, ಆರೋಪಿಗಳು ಚಾಕುವಿನಿಂದ ಮಗುವಿನ ಕತ್ತು ಕತ್ತರಿಸುವುದಾಗಿ ಬೆದರಿಕೆ ಹಾಕಿದರು” ಎಂದು ಗಿರೀಶ್ ಹೇಳಿದರು.
ಮಂಗಳವಾರ ಸಂಜೆ ತಿರುಪ್ಪೂರು ಉತ್ತರ ಮಹಿಳಾ ಪೊಲೀಸ್ ಠಾಣೆಯಲ್ಲಿ ದಂಪತಿ ದೂರು ದಾಖಲಿಸಿದ್ದು, ಪೊಲೀಸರು ಮೊಹಮ್ಮದ್ ನದೀಮ್, ಮೊಹಮ್ಮದ್ ಡ್ಯಾನಿಶ್ ಮತ್ತು 17 ವರ್ಷದ ಬಾಲಕನನ್ನು ಬಂಧಿಸಲಾಗಿದೆ. ಮಹಿಳೆಯನ್ನು ತಿರುಪ್ಪೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗಿರೀಶ್ ಹೇಳಿದರು.
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಏಳು ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿದ ಒಂದು ದಿನದ ನಂತರ ಇದು ಸಂಭವಿಸಿದೆ. ಈ ಘಟನೆಯು ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವಿರೋಧ ಪಕ್ಷವಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಮಂಗಳವಾರ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಹೆಚ್ಚುತ್ತಿರುವ ಲೈಂಗಿಕ ಅಪರಾಧಗಳ ವಿರುದ್ಧ ಪ್ರತಿಭಟಿಸಲು ಬೀದಿಗಿಳಿದಿದೆ.
“ತಮಿಳುನಾಡಿನಲ್ಲಿ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯವಿಲ್ಲದ ಒಂದು ದಿನವೂ ಇಲ್ಲ. ಬಂಧನಗಳ ಬಗ್ಗೆ ಹೆಮ್ಮೆ ಪಡುವ ಬದಲು ಅಂತಹ ಅಪರಾಧಗಳನ್ನು ತಡೆಯುವುದು ತಮ್ಮ ಪ್ರಾಥಮಿಕ ಕರ್ತವ್ಯ ಎಂದು ಪೊಲೀಸರು ಮತ್ತು ಅಧಿಕಾರಿಗಳು ಯಾವಾಗ ಅರಿತುಕೊಳ್ಳುತ್ತಾರೆ?” ಎಂದು ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಸಂಸ್ಥಾಪಕ ಡಾ. ಎಸ್. ರಾಮದಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಹಿಂದಿನ ಎಐಎಡಿಎಂಕೆ ಆಡಳಿತದ ಸಮಯದಲ್ಲಿ ನಡೆದ ಅಪರಾಧಗಳಿಗಿಂತ ಭಿನ್ನವಾಗಿ, ನಮ್ಮ ಆಡಳಿತದಲ್ಲಿ ಈ ಅಪರಾಧಗಳನ್ನು ವರದಿ ಮಾಡಲು ಸಂತ್ರಸ್ತ್ರರು ಈಗ ಆತ್ಮವಿಶ್ವಾಸ ಹೊಂದಿದ್ದಾರೆ” ಎಂದು ದ್ರಾವಿಡ ಮುನ್ನೇತ್ರ ಕಳಗಂ ನಾಯಕ ಮತ್ತು ರಾಜ್ಯ ಕಾನೂನು ಸಚಿವ ಸೇವುಗನ್ ರೆಗುಪತಿ ಹೇಳಿದರು. ಆಗ, ಪೊಲ್ಲಾಚಿಯಲ್ಲಿ ಲೈಂಗಿಕ ದೌರ್ಜನ್ಯದ ಸಂತ್ರಸ್ತ್ರರು ದೂರುಗಳನ್ನು ದಾಖಲಿಸಲು ಹೆದರಿದ್ದರು ಮತ್ತು ಎಫ್‌ಐಆರ್ ಅನ್ನು ಎರಡು ವಾರಗಳ ನಂತರವೇ ದಾಖಲಿಸಲಾಯಿತು.” ಎಂದಿದ್ದಾರೆ.
ಡಿಸೆಂಬರ್‌ನಲ್ಲಿ ಚೆನ್ನೈನ ಅನ್ನಾ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಯಿತು. ಎರಡು ವಾರಗಳ ಹಿಂದೆ, ಕೃಷ್ಣಗಿರಿಯಲ್ಲಿ ಮೂವರು ಶಿಕ್ಷಕರನ್ನು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿಸಲಾಯಿತು. ಸೇಲಂನಲ್ಲಿ, ಹನ್ನೊಂದನೇ ತರಗತಿಯ ಮೂವರು ಹುಡುಗರನ್ನು ಕ್ಯಾಂಪಸ್‌ನಲ್ಲಿ ತಮ್ಮ ಜೂನಿಯರ್ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ. ಕಳೆದ ವಾರ ಪೊಲ್ಲಾಚಿಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ಮತ್ತು ಒಬ್ಬ ಹುಡುಗನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಮೊಬೈಲ್ ಫೋನ್‌ಗಳಲ್ಲಿ ಕೃತ್ಯಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಮೂವರು ಅಪ್ರಾಪ್ತ ಬಾಲಕರು ಮತ್ತು 18 ವರ್ಷದ ಯುವಕನನ್ನು ಬಂಧಿಸಲಾಗಿದೆ.
ಮುಡಾ ಪ್ರಕರಣ| ಸಿಎಂ ಸಿದ್ದರಾಮಯ್ಯಗೆ ಕರ್ನಾಟಕ ಲೋಕಾಯುಕ್ತರಿಂದ ‘ಕ್ಲೀನ್ ಚಿಟ್’


