ಶಿವಾಜಿ ಜಯಂತಿ ಆಚರಿಸಿ ಹಿಂತಿರುಗುತ್ತಿದ್ದ ದುಷ್ಕರ್ಮಿಗಳ ಗುಂಪೊಂದು ಮಸೀದಿಯ ಮುಂದೆ ತಲವಾರು ಬೀಸುತ್ತಾ ಘೋಷಣೆಗಳನ್ನು ಕೂಗಿರುವ ಘಟನೆ ಹೈದರಾಬಾದ್‌ನ ನಾಚಾರಂ ಮಲ್ಲಾಪುರದಲ್ಲಿ ಬುಧವಾರ ರಾತ್ರಿ ನಡೆದಿದೆ. ಮಸೀದಿಯ ಬಳಿ
ನಾಚಾರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಚಾಣಕ್ಯಪುರಿ ಕಾಲೋನಿಯ ಮಸೀದ್-ಎ-ಆಶ್ರಫ್ ಬಳಿ ಈ ಘಟನೆ ನಡೆದಿದ್ದು, ಘಟನೆಯ ನಂತರ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಸೀದಿಯ ಬಳಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲಾಗಿದ್ದು, ವೀಡಿಯೊದಲ್ಲಿ ಸುಮಾರು 10 ರಿಂದ 12 ಜನರು ಮಸೀದಿಯ ಮುಂದೆ ಕತ್ತಿಗಳನ್ನು ಹಿಡಿದು, ಕೇಸರಿ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿರುವುದು ದಾಖಲಾಗಿದೆ. ಶಿವಾಜಿ ಜಯಂತಿ ಮೆರವಣಿಗೆಯಿಂದ ಹಿಂತಿರುಗುತ್ತಿದ್ದ ಗುಂಪು, ಭಕ್ತರು ಪ್ರಾರ್ಥನೆಯಲ್ಲಿ ತೊಡಗಿದ್ದ ಮಸೀದಿಯ ಬಳಿ ನಿಂತು ಈ ಕೃತ್ಯ ಎಸಗಿದೆ ಎಂದು ವರದಿಯಾಗಿದೆ.
ಪ್ರತ್ಯಕ್ಷದರ್ಶಿಗಳು ಈ ಕೃತ್ಯವನ್ನು ವಿಡಿಯೋದಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಪೊಲೀಸರು ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಘಟನೆಯ ಬಗ್ಗೆ ಸ್ಥಳೀಯ ನಿವಾಸಿಗಳು ಭಯ ಮತ್ತು ಹತಾಶೆಯನ್ನು ವ್ಯಕ್ತಪಡಿಸಿದ್ದು, ಇಂತಹ ಪ್ರಚೋದನಕಾರಿ ಕೃತ್ಯಗಳನ್ನು ತಡೆಯಲು ಕಠಿಣ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಕೃತ್ಯ ಎಸಗಿದ ವ್ಯಕ್ತಿಗಳನ್ನು ಗುರುತಿಸಿ ಪ್ರದೇಶದಲ್ಲಿ ಶಾಂತಿ ಕಾಪಾಡಲು ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ.
Telangana: Tension prevails as group waves swords in front of mosque. @TheSiasatDaily pic.twitter.com/pZu41Yajyf
— Mohammed Baleegh (@MohammedBaleeg2) February 20, 2025
ಇದನ್ನೂಓದಿ: ‘ಈ ವ್ಯವಸ್ಥೆಯಿಂದ ನೀವು ನಲುಗಿ ಹೋಗಿದ್ದೀರಿ’ : ದಲಿತ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ
‘ಈ ವ್ಯವಸ್ಥೆಯಿಂದ ನೀವು ನಲುಗಿ ಹೋಗಿದ್ದೀರಿ’ : ದಲಿತ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ


