ಬಿಜೆಪಿಯ ಶಾಸಕ ರಾಜಾ ಸಿಂಗ್‌ಗೆ ಸಂಬಂಧಿಸಿದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಖಾತೆಗಳನ್ನು ದ್ವೇಷ ಭಾಷಣದ ವೀಡಿಯೋ ಹಂಚಿಕೊಂಡ ಕಾರಣಕ್ಕಾಗಿ ಮೆಟಾ ತಗೆದುಹಾಕಿದೆ.
ಇಂಡಿಯಾ ಹೇಟ್ ಲ್ಯಾಬ್ (ಐಎಚ್‌ಎಲ್) ಸಾಮಾಜಿಕ ಮಾಧ್ಯಮದಲ್ಲಿ ದ್ವೇಷ ಭಾಷಣದ ಹರಡುವಿಕೆಯನ್ನು ಬಹಿರಂಗಪಡಿಸಿದ ಕೇವಲ ಒಂದು ವಾರದ ನಂತರ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮಾತೃ ಕಂಪನಿಯಾದ ಮೆಟಾ, ಬಿಜೆಪಿ ಶಾಸಕ ಟಿ.ರಾಜಾ ಸಿಂಗ್‌ಗೆ ಲಿಂಕ್ ಮಾಡಲಾದ ಎರಡು ಫೇಸ್‌ಬುಕ್ ಗುಂಪುಗಳು ಮತ್ತು ಮೂರು ಇನ್‌ಸ್ಟಾಗ್ರಾಮ್ ಖಾತೆಗಳನ್ನು ತೆಗೆದುಹಾಕಿದೆ.
ರಾಜಾ ಸಿಂಗ್ ಎಂದೂ ಕರೆಯಲ್ಪಡುವ ಠಾಕೂರ್ ರಾಜಾ ಸಿಂಗ್ ತೆಲಂಗಾಣ ರಾಜಕಾರಣಿಯಾಗಿದ್ದಾರೆ. ಹೈದರಾಬಾದ್‌ನ ಗೋಶಮಹಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ತೆಲಂಗಾಣ ವಿಧಾನಸಭೆಯ ಹಾಲಿ ಶಾಸಕರಾಗಿದ್ದಾರೆ.
ತಗೆದುಹಾಕಲಾದ ಫೇಸ್‌ಬುಕ್ ಗುಂಪುಗಳು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಸದಸ್ಯರನ್ನು ಹೊಂದಿದ್ದರೆ, ಇನ್‌ಸ್ಟಾಗ್ರಾಮ್ ಖಾತೆಗಳು 155,000 ಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದವು. “ಅಪಾಯಕಾರಿ ವ್ಯಕ್ತಿಗಳು ಮತ್ತು ಸಂಸ್ಥೆಗಳು” ಕುರಿತ ತನ್ನ ನೀತಿಯಡಿಯಲ್ಲಿ ಸಿಂಗ್ ಅವರನ್ನು 2020ರಲ್ಲಿ ಮೆಟಾದ ಪ್ಲಾಟ್‌ಫಾರ್ಮ್‌ಗಳಿಂದ ನಿಷೇಧಿಸಲಾಗಿತ್ತು, ಆದರೆ ಅವರು ಮತ್ತು ಅವರ ಬೆಂಬಲಿಗರು ನಿಷೇಧವನ್ನು ತಪ್ಪಿಸಲು ಬೇರೆ ಮಾರ್ಗಗಳನ್ನು ಕಂಡುಕೊಂಡು, ಹೊಸ ಗುಂಪುಗಳು ಮತ್ತು ಪುಟಗಳ ಮೂಲಕ ಅವರ ಭಾಷಣಗಳು ಮತ್ತು ಕಾರ್ಯಕ್ರಮದ ವಿವರಗಳನ್ನು ಹಂಚಿಕೊಳ್ಳುವುದನ್ನು ಮುಂದುವರೆಸಿದರು.
1 ಮಿಲಿಯನ್‌ಗಿಂತಲೂ ಹೆಚ್ಚು ಸದಸ್ಯರನ್ನು ಹೊಂದಿರುವ ಬಿಜೆಪಿ ನಾಯಕ ಟಿ.ರಾಜಾ ಸಿಂಗ್‌ಗೆ ಲಿಂಕ್ ಮಾಡಲಾದ ಎರಡು @facebook ಗುಂಪುಗಳನ್ನು ಮೆಟಾ ತೆಗೆದುಹಾಕಿದೆ.
ಕಳೆದ ವಾರ ಪ್ರಕಟವಾದ ದ್ವೇಷ ಭಾಷಣ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಪಾತ್ರದ ಕುರಿತು ಇಂಡಿಯಾ ಹೇಟ್ ಲ್ಯಾಬ್‌ನ ವರದಿಯನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
IHL ಎಂಬುದು ವಾಷಿಂಗ್ಟನ್ ಮೂಲದ ಲಾಭರಹಿತ ಸಂಘಟಿತ ದ್ವೇಷದ ಅಧ್ಯಯನ ಕೇಂದ್ರದ (CSOH) ಒಂದು ಯೋಜನೆಯಾಗಿದ್ದು, ಇದು ದ್ವೇಷ ಭಾಷಣದ ಪ್ರವೃತ್ತಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ವಿಶ್ಲೇಷಿಸುತ್ತದೆ.
ಫೆಬ್ರವರಿ 10ರಂದು ಬಿಡುಗಡೆಯಾದ IHL ವರದಿ, ಸಾಮಾಜಿಕ ಮಾಧ್ಯಮ ಮತ್ತು ಭಾರತದಲ್ಲಿ ದ್ವೇಷ ಭಾಷಣವು 2024ರಲ್ಲಿ ದ್ವೇಷ ಭಾಷಣದ ಹರಡುವಿಕೆಯನ್ನು ವಿಶ್ಲೇಷಿಸಿದೆ. ವಿಶೇಷವಾಗಿ ರಾಜಕೀಯ ರ್ಯಾಲಿಗಳು, ಚುನಾವಣಾ ಪ್ರಚಾರಗಳು, ಧಾರ್ಮಿಕ ಸಭೆಗಳು ಮತ್ತು ರಾಷ್ಟ್ರೀಯತಾವಾದಿ ಕಾರ್ಯಕ್ರಮಗಳ ಸಮಯದಲ್ಲಿ ಫೇಸ್‌ಬುಕ್ ನಲ್ಲಿ 495 ದ್ವೇಷ ಭಾಷಣದ ವೀಡಿಯೊಗಳನ್ನು ಹಂಚಿಕೊಂಡಿರುವುದನ್ನು ಅದು ಕಂಡುಕೊಂಡರೆ, ಯೂಟ್ಯೂಬ್ 211 ವೀಡಿಯೊಗಳನ್ನು ಹಂಚಿಕೊಂಡಿದೆ. ಹೆಚ್ಚುವರಿಯಾಗಿ, ಹಿರಿಯ ಬಿಜೆಪಿ ನಾಯಕರಿಂದ ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣದ 266 ಪ್ರಕರಣಗಳನ್ನು ದಾಖಲಿಸಲಾಗಿದೆ, ಅವುಗಳಲ್ಲಿ ಹಲವು ಫೇಸ್‌ಬುಕ್, ಯೂಟ್ಯೂಬ್ ಮತ್ತು X ನಲ್ಲಿ ನೇರ ಪ್ರಸಾರವಾಗಿವೆ.
ಭಾರತದಾದ್ಯಂತ 32 ದ್ವೇಷ ಭಾಷಣಗಳನ್ನು ನೀಡಿದ್ದಕ್ಕಾಗಿ ಸಿಂಗ್ ಅವರನ್ನು ವರದಿಯಲ್ಲಿ ಹೆಸರಿಸಲಾಗಿದೆ. ಇದರಲ್ಲಿ 22 ಪ್ರಕರಣಗಳು ಮುಖ್ಯವಾಗಿ ಮುಸ್ಲಿಮರ ವಿರುದ್ಧ ಹಿಂಸಾಚಾರವನ್ನು ನೇರವಾಗಿ ಪ್ರಚೋದಿಸುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡಿವೆ. ಇವುಗಳಲ್ಲಿ 16 ಭಾಷಣಗಳು ಆರಂಭದಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿದ್ದರೆ, 13 ಭಾಷಣಗಳು ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡಿವೆ.
ಗೋಶಮಹಲ್ ಶಾಸಕ ಸಿಂಗ್ ವಿವಾದಗಳಿಗೆ ಹೊಸದೇನಲ್ಲ ಮತ್ತು ಅವರ ವಿವಾದಾತ್ಮಕ ಹೇಳಿಕೆಗಳಿಗಾಗಿ ಈ ಹಿಂದೆಯೂ ಸಿಲುಕಿಕೊಂಡಿದ್ದರು. ಆಗಸ್ಟ್ 2022ರಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಮತ್ತು ನಿರ್ದಿಷ್ಟ ಧರ್ಮದ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಯಿತು. ಅಗ ಅವರನ್ನು ಶೀಘ್ರದಲ್ಲೇ ಪಕ್ಷದಿಂದ ಅಮಾನತುಗೊಳಿಸಲಾಯಿತು, ಆದಾಗ್ಯೂ, 2023ರಲ್ಲಿ ತೆಲಂಗಾಣ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅಮಾನತು ರದ್ದುಗೊಳಿಸಲಾಯಿತು.
ಮದ್ದೂರು | ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಮಿಕಲ್ ಸ್ಫೋಟ : ಕಾರ್ಮಿಕರು ಆಸ್ಪತ್ರೆಗೆ ದಾಖಲು


