ಮರಾಠಾ ರಾಜ ಛತ್ರಪತಿ ಸಂಭಾಜಿ ಅವರ ಕುರಿತಾದ ವಿಕ್ಕಿ ಕೌಶಲ್ ಅಭಿನಯದ ಕಾಲ್ಪನಿಕ ಹಿಂದಿ ಚಲನಚಿತ್ರ ‘ಛಾವಾ’ವನ್ನು ವೀಕ್ಷಿಸಿದ ದುಷ್ಕರ್ಮಿಗಳ ಗುಂಪೊಂದು ಅಕ್ಬರ್ ಮತ್ತು ಹುಮಾಯೂನ್ ಹೆಸರಿನ ರಸ್ತೆಯ ನಾಮಫಲಕಗಳಿಗೆ ಕಪ್ಪು ಬಣ್ಣ ಬಳಿದು, ಛತ್ರಪತಿ ಶಿವಾಜಿಯ ಪೋಸ್ಟರ್‌ಗಳನ್ನು ಅಂಟಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಸಿನಿಮಾ ವೀಕ್ಷಿಸಿ
ನವದೆಹಲಿಯ ಅಕ್ಬರ್ ರಸ್ತೆ ಮತ್ತು ಹುಮಾಯೂನ್ ರಸ್ತೆಯಲ್ಲಿರುವ ನಾಮಫಲಕಗಳಿಗೆ ಕಪ್ಪು ಬಣ್ಣ ಬಳಿದು, ಛತ್ರಪತಿ ಶಿವಾಜಿಯ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಮರಾಠಾ ರಾಜ ಛತ್ರಪತಿ ಸಂಭಾಜಿ ಅವರ ಕುರಿತಾದ ಕಾಲ್ಪನಿಕ ಕತೆಯನ್ನು ಒಳಗೊಂಡ, ವಿಕ್ಕಿ ಕೌಶಲ್ ಅಭಿನಯದ ಹಿಂದಿ ಚಲನಚಿತ್ರ ‘ಛಾವಾ’ವನ್ನು ವೀಕ್ಷಿಸಿದ ದುಷ್ಕರ್ಮಿಗಳ ಗುಂಪೊಂದು ಈ ಕೃತ್ಯ ಎಸಗಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕೃತ್ಯದ ಅನೇಕ ವೀಡಿಯೊಗಳು ಕಾಣಿಸಿಕೊಂಡಿದ್ದು, ಕೆಲವು ಯುವಕರು ನಾಮಫಲಕಗಳ ಮೇಲೆ ಕಪ್ಪು ಸ್ಪ್ರೇ ಹಚ್ಚಿ ಮರಾಠಾ ಸಾಮ್ರಾಜ್ಯದ ಸ್ಥಾಪಕ ಶಿವಾಜಿಯ ಚಿತ್ರಗಳನ್ನು ಅಂಟಿಸಿರುವುದನ್ನು ತೋರಿಸಲಾಗಿದೆ. ಶಿವಾಜಿಯ ಮಗ ಸಂಭಾಜಿ ಮರಾಠ ಸಾಮ್ರಾಜ್ಯದ ಎರಡನೇ ರಾಜ. ಸಿನಿಮಾ ವೀಕ್ಷಿಸಿ
ಪೊಲೀಸ್ ತಂಡಗಳು ಮತ್ತು ಸ್ಥಳೀಯ ಸಂಸ್ಥೆಯ ಅಧಿಕಾರಿಗಳನ್ನು ತಕ್ಷಣ ಸ್ಥಳಕ್ಕೆ ಕಳುಹಿಸಲಾಗಿದೆ ಮತ್ತು ವಿರೂಪಗೊಂಡ ನಾಮಫಲಕಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದು, ಅಪರಾಧಿಗಳನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮತ್ತಷ್ಟು ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ವರದಿ ಹೇಳಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ತೆಲಂಗಾಣ | ಶ್ರೀಶೈಲಂ ಕಾಲುವೆಯ ಸುರಂಗ ಕುಸಿತ : ಅವಶೇಷಗಳಡಿ 7 ಕಾರ್ಮಿಕರು ಸಿಲುಕಿರುವ ಶಂಕೆ
ತೆಲಂಗಾಣ | ಶ್ರೀಶೈಲಂ ಕಾಲುವೆಯ ಸುರಂಗ ಕುಸಿತ : ಅವಶೇಷಗಳಡಿ 7 ಕಾರ್ಮಿಕರು ಸಿಲುಕಿರುವ ಶಂಕೆ

