ಸಾಮೂಹಿಕ ವಿವಾಹ ಆಯೋಜಿಸಿದ್ದ ಆಯೋಜಕರು ಮದುವೆ ದಿನದಂದೆ ಮದುವೆಯ ಹಣದೊಂದಿಗೆ ಪರಾರಿಯಾಗಿರುವ ಅಘಾತಕಾರಿ ಘಟನೆ ರಾಜಸ್ಥಾನದ ರಾಜ್‌ಕೋಟ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಋಷಿವಂಶಿ ಸಮಾಜದ ಹೆಸರಿನಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ಎಲ್ಲಾ ಜಾತಿಗಳ 28 ಯುವತಿಯರ ಸಾಮೂಹಿಕ ವಿವಾಹ ನಡೆಸುವುದಾಗಿ ನಿರ್ಧರಿಸಲಾಗಿತ್ತು ಎಂದು ವರದಿಯಾಗಿದೆ. ರಾಜಸ್ಥಾನ
ಸಮಾರಂಭವು ಸುಗಮವಾಗಿ ನಡೆಯುತ್ತದೆ ಎಂದು ನಂಬಿ ಪ್ರತಿ ಕುಟುಂಬಗಳು ವಧು-ವರರ ಪರವಾಗಿ ಸುಮಾರು 40,000 ರೂ.ಗಳನ್ನು ಪಾವತಿಸಿದ್ದರು. ಆಯೋಜಕರು ನಾಪತ್ತೆಯಾಗಿರುವ ಸುದ್ದಿ ಸಿಗುತ್ತಿದ್ದಂತೆ ಗೊಂದಲವೇರ್ಪಟ್ಟಿದ್ದು, ಈ ವೇಳೆ ರಾಜ್‌ಕೋಟ್ ಪೊಲೀಸರು ಮಧ್ಯಪ್ರವೇಶಿಸಿ, ವಿವಾಹಗಳನ್ನು ಶಾಸ್ತ್ರೋಕ್ತವಾಗಿ ನಡೆಸುವಂತೆ ನೋಡಿಕೊಂಡರು ಎಂದು ವರದಿ ಹೇಳಿದೆ. ರಾಜಸ್ಥಾನ
ರಾಜ್‌ಕೋಟ್‌ನಲ್ಲಿ ಋಷಿವಂಶಿ ಸಮಾಜದ ಹೆಸರಿನಲ್ಲಿ ಆಯೋಜಿಸಲಾಗಿದ್ದ ಎಲ್ಲಾ ಜಾತಿಗಳ 28 ಹುಡುಗಿಯರ ಸಾಮೂಹಿಕ ವಿವಾಹ ಸಮಾರಂಭಕ್ಕೆ ವಧು-ವರದ ಕಡೆಯವರು 15,000 ರೂ.ಗಳಿಂದ 40,000 ರೂ.ಗಳವರೆಗೆ ಹಣವನ್ನು ಪಾವತಿಸಿದ್ದರು. ಮದುವೆಯ ದಿನ ಕುಟುಂಬಗಳು ಮಧಾಪರ್ ಬಳಿಯ ಮದುವೆಯ ಸ್ಥಳಕ್ಕೆ ಆಗಮಿಸಿದಾಗ ಯಾವುದೇ ವ್ಯವಸ್ಥೆಗಳು ಕಂಡುಬಂದಿರಲಿಲ್ಲ.
ರಾಜ್‌ಕೋಟ್ ಮತ್ತು ಹತ್ತಿರದ ಜಿಲ್ಲೆಗಳಿಂದ ಬಂದಿದ್ದ ಕುಟುಂಬಗಳು ತಾವು ಮೋಸ ಹೋಗಿರುವುದನ್ನು ತಿಳಿಯುತ್ತಿದ್ದಂತೆ ಆತಂಕಕ್ಕೆ ಒಳಗಾಗಿ ಕಣ್ಣೀರು ಹಾಕಿದ್ದಾರೆ. ಇದರ ನಂತರ ವಧುಗಳು ಹಿಂತಿರುಗಲು ಸಿದ್ಧರಾಗುತ್ತಿದ್ದಂತೆ, ಪೊಲೀಸರು ಸ್ಥಳಕ್ಕೆ ತಲುಪಿ, ಸ್ಥಗಿತಗೊಂಡ ವಿವಾಹಗಳನ್ನು ನಡೆಸಿಕೊಟ್ಟಿದ್ದಾರೆ.
“ಸಾಮೂಹಿಕ ವಿವಾಹದ ಹೆಸರಿನಲ್ಲಿ ಇದು ಎಂದಿಗೂ ಸಂಭವಿಸಬಾರದು” ಎಂದು ರಾಜ್‌ಕೋಟ್‌ನಿಂದ ತನ್ನ ಮಗನ ಮದುವೆಗೆ ಆಗಮಿಸಿದ ವಿಠ್ಠಲಭಾಯಿ ವಿಷಾದಿಸಿದ್ದಾರೆ. “ಆಯೋಜಕರು ನಮ್ಮಿಂದ 40,000 ರೂ.ಗಳನ್ನು ತೆಗೆದುಕೊಂಡು ಕಣ್ಮರೆಯಾಗಿದ್ದಾರೆ. ಆದರೆ ಯಾವುದೇ ವ್ಯವಸ್ಥೆಗಳು ಕಂಡುಬಂದಿಲ್ಲ. ಇದರಿಂದಾಗಿ ಜನರು ಸಿಲುಕಿಕೊಂಡರು. ವಂಚನೆ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
“ಆಯೋಜಕರು ಎರಡೂ ಕಡೆಯಿಂದ 15,000 ರೂ.ಗಳನ್ನು ತೆಗೆದುಕೊಂಡು, ವರದಕ್ಷಿಣೆಯೊಂದಿಗೆ ಅದ್ಧೂರಿ ವಿವಾಹವನ್ನು ಮಾಡುವುದಾಗಿ ಭರವಸೆ ನೀಡಿದ್ದರು” ಎಂದು ತಮ್ಮ ಸೋದರ ಮಾವನ ಮಗಳ ಮದುವೆಗೆ ಹಾಜರಾದ ಶಿಲ್ಪಾಬೆನ್ ಬಗ್ಥಾರಿಯಾ ಹೇಳಿದ್ದಾರೆ.
“ಬೆಳಿಗ್ಗೆ 6 ಗಂಟೆಯೊಳಗೆ ಎಲ್ಲವೂ ಸಿದ್ಧವಾಗಲಿದೆ ಎಂದು ಅವರು ನಮಗೆ ಹೇಳಿದ್ದರು. ಆದರೆ ನಾವು ಬಂದಾಗ, ಯಾವುದೇ ವ್ಯವಸ್ಥೆಗಳು ಇರಲಿಲ್ಲ, ಸಂಘಟಕರು ಇರಲಿಲ್ಲ ಮತ್ತು ಮದುವೆ ನಡೆಸಬೇಕಾಗಿದ್ದ ಬ್ರಾಹ್ಮಣರು ಸಹ ಹೊರಟು ಹೋಗಿದ್ದರು” ಎಂದು ಅವರು ನಿರಾಶೆಯನ್ನು ವಿವರಿಸಿದ್ದಾರೆ.
ವಿವಾಹ ಸ್ಥಳದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ರಾಜ್‌ಕೋಟ್ ಎಸಿಪಿ ರಾಧಿಕಾ ಭರೈ ನೇತೃತ್ವದ ಪೊಲೀಸ್ ಬೆಂಗಾವಲು ಪಡೆ ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಧಾವಿಸಿದೆ. ಆ ಹೊತ್ತಿಗೆ, ಕೆಲವು ವರರು ಈಗಾಗಲೇ ಹತಾಶೆಯಿಂದ ಹೊರಟುಹೋಗಿದ್ದರು, ಇದು ತೊಂದರೆಯನ್ನು ಮತ್ತಷ್ಟು ಹೆಚ್ಚಿಸಿತ್ತು.
ನಂತರ, ಪೊಲೀಸರು ಪರಿಸ್ಥಿತಿಯನ್ನು ಕೈಗೆತ್ತಿಕೊಂಡು ಮದುವೆಗಳು ನಡೆಯುವಂತೆ ನೋಡಿಕೊಳ್ಳಲು ಮುಂದಾದರು. ಈ ವೇಳೆ ಅವರು ಹೊರಟುಹೋದ ವರರನ್ನು ಸಂಪರ್ಕಿಸಿ, ಮದುವೆ ನಡೆಸುವುದಾಗಿ ಮತ್ತು ಹಿಂತಿರುಗುವಂತೆ ಒತ್ತಾಯಿಸಿದ್ದಾರೆ. “ಆಯೋಜಕರು ಕಣ್ಮರೆಯಾಗಿರುವುದರಿಂದ, ಪೊಲೀಸರು ಮದುವೆಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಮುಂದಾದರು” ಎಂದು ರಾಜ್‌ಕೋಟ್ ನಗರದ ಎಸಿಪಿ ರಾಧಿಕಾ ಭರೈ ಹೇಳಿದ್ದಾರೆ. “ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು” ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮೈಸೂರು | ಮುಸ್ಲಿಮರ ಬಗ್ಗೆ ಅವಹೇಳನಕಾರಿ ಹೇಳಿಕೆ : ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್
ಮೈಸೂರು | ಮುಸ್ಲಿಮರ ಬಗ್ಗೆ ಅವಹೇಳನಕಾರಿ ಹೇಳಿಕೆ : ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್

