ಮಹಾ ಶಿವರಾತ್ರಿಯ ಹಬ್ಬದ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕ್ಯಾಂಟೀನ್‌ನಲ್ಲಿ ಮಾಂಸಹಾರ ಬಡಿಸಲಾಗುತ್ತಿದೆ ಎಂದು ಆರೋಪಿಸಿ ಎಬಿವಿಪಿಯ ದುಷ್ಕರ್ಮಿಗಳು ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಬುಧವಾರ ದೆಹಲಿಯ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಘಟನೆಯ ವಿಡಿಯೊ ವೈರಲ್ ಆಗಿದ್ದು, ಅದರಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಹೊಡೆದಾಟ ದಾಖಲಾಗಿದೆ. ಮಹಾ ಶಿವರಾತ್ರಿಯಂದು
ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಮತ್ತು ಎಬಿವಿಪಿ ಘರ್ಷಣೆಗೆ ಪ್ರಚೋದನೆ ನೀಡಿವೆ ಎಂದು ಪರಸ್ಪರ ಆರೋಪಿಸಿಕೊಂಡಿವೆ. ಎಸ್‌ಎಫ್‌ಐ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜೊತೆಗೆ ಸಂಯೋಜಿತವಾಗಿದ್ದು, ಎಬಿವಿಪಿಯು ಆರೆಸ್ಸೆಸ್‌ನ ವಿದ್ಯಾರ್ಥಿ ವಿಭಾಗವಾಗಿದೆ.
ABVP attacks women students in SAU!
Showing their cowardice, anti-women attitude and sheer hooliganism ABVP attacked women students in SAU. We condemn the ABVP's actions in the most fierce terms and extend solidarity to the courageous students of SAU.#sfi #sfidelhi #sau pic.twitter.com/mWH5VIs846
— SFI Delhi (@SfiDelhi) February 26, 2025
ಮಹಾ ಶಿವರಾತ್ರಿಯಂದು ಕ್ಯಾಂಟೀನ್‌ನಲ್ಲಿ ಮಾಂಸ ಬಡಿಸಬಾರದು ಎಂಬ ತನ್ನ “ಕಠಿಣ ಮತ್ತು ಪ್ರಜಾಪ್ರಭುತ್ವ ವಿರೋಧಿ ಬೇಡಿಕೆ”ಯನ್ನು ಪಾಲಿಸದ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ಎಸ್‌ಎಫ್‌ಐ ಹೇಳಿಕೊಂಡಿದೆ. ಎಸ್‌ಎಫ್‌ಐ ಸದಸ್ಯರು ಮಾಂಸಾಹಾರವನ್ನು ಬಲವಂತವಾಗಿ ಬಡಿಸಿ ವಿದ್ಯಾರ್ಥಿಗಳ ಉಪವಾಸ ಮುರಿಯಲು ಪ್ರಯತ್ನಿಸಿದರು ಎಂದು ಎಬಿವಿಪಿ ಆರೋಪಿಸಿದೆ.
ದಿನದ ಹಿಂದೆ, ಶಿವರಾತ್ರಿ ಹಬ್ಬದ ದಿನದಂದು ಕ್ಯಾಂಟೀನ್‌ನಲ್ಲಿ ಸಸ್ಯಾಹಾರಿ ಆಹಾರವನ್ನು ಮಾತ್ರ ನೀಡಬೇಕೆಂದು ಎಬಿವಿಪಿ ಸದಸ್ಯರು ವಿನಂತಿಸಿದ್ದರು ಎಂದು ಎರಡನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ವಿಶ್ವವಿದ್ಯಾಲಯದಲ್ಲಿ ಎರಡು ಮೆಸ್‌ಗಳಿವೆ. ಅವುಗಳಲ್ಲಿ ಒಂದು ಕ್ಯಾಂಟೀನ್‌ನಲ್ಲಿ ಇಂದು ಮೀನಿನ ಕರಿಯನ್ನು ನೀಡಲಾಗುತ್ತಿತ್ತು. ಎಬಿವಿಪಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾದ ಕೆಲವು ವಿದ್ಯಾರ್ಥಿಗಳು ಪ್ರವೇಶಿಸಿ ಮೀನಿನ ಕರಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಈ ವೇಳೆ ಮೆಸ್ ಸಮಿತಿಯ ಭಾಗವಾಗಿರುವ ಒಬ್ಬ ವಿದ್ಯಾರ್ಥಿನಿ ಅದನ್ನು ಆಕ್ಷೇಪಿಸಿದ್ದು, ಈ ವೇಳೆ ಎಬಿವಿಪಿ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.” ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತರು ವಿದ್ಯಾರ್ಥಿಗಳ ಡೀನ್ ಕಚೇರಿಗೆ ದೂರು ನೀಡಿದಾಗ, ಅಧಿಕಾರಿಗಳು ಈ ವಿಷಯವನ್ನು ವಿಲೇವಾರಿ ಮಾಡುವ ಬದಲು ಹಲ್ಲೆಗೊಳಗಾದ ವಿದ್ಯಾರ್ಥಿಗಳ ಮೇಲೆ ಪರೋಕ್ಷವಾಗಿ ಹೊಣೆಯನ್ನು ಹೊರಿಸುವ ಮೂಲಕ ಅದನ್ನು ಅವರ ತಲೆಗೆ ಹೊರಿಸಲು ಪ್ರಯತ್ನಿಸಿದರು ಎಂದು ಎಸ್‌ಎಫ್‌ಐ ಆರೋಪಿಸಿದೆ.
Shocking! On Mahashivratri, SFI goons at SAU forcibly tried to break students’ fast by forcing non-veg on them, abusing, and assaulting them!
Religious freedom is a constitutional right! Why is it under attack on campus? Will the so-called secular brigade stay silent now?
ABVP… pic.twitter.com/qZYDFx3sMi
— ABVP (@ABVPVoice) February 26, 2025
ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯ ತಿಳಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಆದಾಗ್ಯೂ, ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಾರ್ಥಕ್ ಶರ್ಮಾ ಅವರು ವಿದ್ಯಾರ್ಥಿಗಳಿಗೆ ತಮ್ಮ ನಂಬಿಕೆಗಳನ್ನು ಅನುಸರಿಸುವ ಹಕ್ಕಿದೆ ಎಂದು ಹೇಳಿದ್ದಾರೆ. “ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯು ಸ್ವತಃ ಮೆಸ್‌ನಲ್ಲಿ ಸಾತ್ವಿಕ ಆಹಾರವನ್ನು ವ್ಯವಸ್ಥೆ ಮಾಡಿತ್ತು. ಆದರೆ ಈ ವೇಳೆ ಮಾಂಸಾಹಾರವನ್ನು ಬಲವಂತವಾಗಿ ಬಡಿಸಲು ಪ್ರಯತ್ನಿಸುವುದು ಅಸಂವೇದನಾಶೀಲ ಮಾತ್ರವಲ್ಲ, ಸೈದ್ಧಾಂತಿಕ ಭಯೋತ್ಪಾದನೆಯೂ ಆಗಿದೆ” ಎಂದು ಅವರು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಇಂಟರ್ನೆಟ್ ಸ್ಥಗಿತ | ಮಿಲಿಟರಿ ಆಡಳಿತದ ಮ್ಯಾನ್ಮಾರ್ 1ನೇ, ಭಾರತ 2ನೇ ಸ್ಥಾನ!
ಇಂಟರ್ನೆಟ್ ಸ್ಥಗಿತ | ಮಿಲಿಟರಿ ಆಡಳಿತದ ಮ್ಯಾನ್ಮಾರ್ 1ನೇ, ಭಾರತ 2ನೇ ಸ್ಥಾನ!

