ಅಮೆರಿಕದಲ್ಲಿ ಭಾರತೀಯರ ಗಡೀಪಾರು ವಿಚಾರದ ಬಗ್ಗೆ ಗಟ್ಟಿಯಾಗಿ ಧ್ವನಿಯೆತ್ತುವಂತೆ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ ಕೇಳಿದ್ದು, ಟ್ರಂಪ್ ಅವರ ಕೈಗೊಂಬೆಯಾಗದಂತೆ ಹೇಳಿದ್ದಾರೆ. ಟ್ರಂಪ್ ಕೈಗೊಂಬೆಯಾಗಬೇಡಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ಬೆದರಿಕೆಗೆ” ಒಳಗಾಗದಂತೆ ಎಎಪಿ ನಾಯಕ ಸಂಜಯ್ ಸಿಂಗ್ ಅವರು ಹೇಳಿದ್ದು, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಟ್ರಂಪ್ ಅವರ ಸ್ಫೋಟಕ ಮಾತುಕತೆಯನ್ನು ಉಲ್ಲೇಖಿಸಿದ್ದಾರೆ.
ಟ್ರಂಪ್ ಮತ್ತು ಝೆಲೆನ್ಸ್ಕಿ ನಡುವಿನ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಂಜಯ್ ಸಿಂಗ್, ಈ ಸಂಭಾಷಣೆಯಲ್ಲಿ ಟ್ರಂಪ್ ಬೆದರಿಸುತ್ತಿದ್ದಾರೆ ಎಂಬುದು ಸಾಬೀತಾಗಿದೆ. ಆದ್ದರಿಂದ ಮೋದಿ ಅವರು ಟ್ರಂಪ್ ಅವರ ಕೈಗೊಂಬೆಯಾಗುವ ಬದಲು, ಅಪರಾಧಿಗಳಂತೆ ಸಂಕೋಲೆಗಳಲ್ಲಿ ಭಾರತೀಯರನ್ನು ಭಾರತಕ್ಕೆ ಕತೆತರುವ ವಿಷಯದ ಬಗ್ಗೆ ಗಟ್ಟಿಯಾಗಿ ಧ್ವನಿಯೆತ್ತಬೇಕು ಎಂದು ಹೇಳಿದ್ದಾರೆ.
ಮಾಜಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಅವರ ಪ್ರಸಿದ್ಧ ಹೇಳಿಕೆಯಾದ ”ಅಮೆರಿಕದ ಶತ್ರುವಾಗುವುದು ಅಪಾಯಕಾರಿ, ಆದರೆ ಸ್ನೇಹಿತನಾಗಿರುವುದು ಮಾರಕ” ಎಂಬ ವಾಕ್ಯವನ್ನು ಸಂಜಯ್ ಸಿಂಗ್ ಅವರು ಟ್ವೀಟ್ ಮಾಡಿದ್ದಾರೆ. ಟ್ರಂಪ್ ಕೈಗೊಂಬೆಯಾಗಬೇಡಿ

ಈ ತಿಂಗಳ ಆರಂಭದಲ್ಲಿ ಅಮೆರಿಕವು ಭಾರತದ ಅಕ್ರಮ ವಲಸಿಗರನ್ನು ಕಾಲುಗಳಿಗೆ ಸರಪಳಿ ಮತ್ತು ಕೈಕೋಳ ಹಾಕಿ ಗಡೀಪಾರು ಮಾಡಿತ್ತು. ಈ ವಿಚಾರದ ಬಗ್ಗೆ ಸಂಸತ್ತಿನಲ್ಲಿ ತೀವ್ರ ವಾಗ್ವಾದ ನಡೆದಿತ್ತು. ಟ್ರಂಪ್ ಅಧಿಕಾರಕ್ಕೆ ಏರಿದ ನಂತರ ಅಮೆರಿಕದಲ್ಲಿ ಅಕ್ರಮ ವಲಸೆಯ ವಿರುದ್ಧ ಅಲ್ಲಿನ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇಲ್ಲಿಯವರೆಗೆ 300 ಕ್ಕೂ ಹೆಚ್ಚು ಭಾರತೀಯರನ್ನು ಮೂರು ಅಮೆರಿಕದ ಮಿಲಿಟರಿ ವಿಮಾನಗಳಲ್ಲಿ ಗಡೀಪಾರು ಮಾಡಲಾಗಿದೆ.
ಇತ್ತಿಚೆಗೆ ಅಮೆರಿಕದ ವೈಟ್‌ಹೌಸ್‌ನಲ್ಲಿ ನಡೆದ ಸಭೆಯಲ್ಲಿ ಝೆಲೆನ್ಸ್ಕಿ, ಟ್ರಂಪ್ ಮತ್ತು ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನಡುವೆ ತೀವ್ರ ವಾಗ್ವಾದದ ನಡೆದಿದೆ. ಈ ವಿಡಿಯೊ ವೈರಲ್ ಆಗಿದ್ದು, ರಷ್ಯಾದೊಂದಿಗಿನ ಯುದ್ಧದಲ್ಲಿ ಉಕ್ರೇನ್‌ಗೆ ಅಮೆರಿಕ ನೀಡಿದ ಬೆಂಬಲಕ್ಕೆ ಕೃತಜ್ಞತೆ ತೋರಿಸಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್ ಅವರು ಝೆಲೆನ್ಸ್ಕಿಯನ್ನು ಟೀಕಿಸಿದ್ದಾರೆ. ಆದರೆ ಝೆಲೆನ್ಸ್ಕಿ ಇದನ್ನು ನಿರಾಕರಿಸಿ ಅವರ ಜೊತೆಗೆ ವಾಗ್ವಾದ ನಡೆಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಎಸ್ಸಿಎಸ್‌ಪಿ/ಟಿಎಸ್‌ಪಿ ಹಣದ ದುರ್ಬಳಕೆ ಯಾವುದೆ ಕಾರಣಕ್ಕೂ ಒಪ್ಪಲ್ಲ – ದಲಿತ ಹಕ್ಕುಗಳ ಹೋರಾಟಗಾರ ಎ. ನರಸಿಂಹ ಮೂರ್ತಿ
ಎಸ್ಸಿಎಸ್‌ಪಿ/ಟಿಎಸ್‌ಪಿ ಹಣದ ದುರ್ಬಳಕೆ ಯಾವುದೆ ಕಾರಣಕ್ಕೂ ಒಪ್ಪಲ್ಲ – ದಲಿತ ಹಕ್ಕುಗಳ ಹೋರಾಟಗಾರ ಎ. ನರಸಿಂಹ ಮೂರ್ತಿ

