ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಬಳ್ಳಾರಿ ಜಿಲ್ಲೆಯ ಸಂಡೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 2,100 ಕೋಳಿಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿವೆ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ಶನಿವಾರ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಸಂಡೂರು
ಕೆಲವು ಕೋಳಿಗಳು ಸಾರಿಗೆ ಕೇಂದ್ರದಲ್ಲಿ ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿ ಹೇಳಿದೆ. “ಕೇಂದ್ರದಲ್ಲಿ ಸುಮಾರು 20 ರಿಂದ 30 ಕೋಳಿಗಳು ಸತ್ತಿದ್ದವು ಅಥವಾ ಸಾಯುವ ಹಂತದಲ್ಲಿದ್ದವು. ಪ್ರತಿದಿನ ಸುಮಾರು 100 ರಿಂದ 200 ಪಕ್ಷಿಗಳು ಸಾಯುತ್ತಿದ್ದವು” ಎಂದು ಅವರು ಹೇಳಿದ್ದಾರೆ. ಸಂಡೂರು
“ಸತ್ತ ಕೋಳಿಗಳ ಮಾದರಿಗಳನ್ನು ನಾವು ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಅಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಅವು ಹಕ್ಕಿ ಜ್ವರದಿಂದ ಸಾವನ್ನಪ್ಪಿವೆ ಎಂದು ದೃಢಪಡಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಒಂದು ವಾರದಲ್ಲಿ 2,100 ಕೋಳಿಗಳು ಸಾವನ್ನಪ್ಪಿವೆ. ಇವುಗಳಲ್ಲಿ 1,100 ಪಕ್ಷಿಗಳ ಸಾವಿಗೆ ಕಾರಣವನ್ನು ನಾವು ದೃಢಪಡಿಸಿದ ನಂತರ ಸಾವನ್ನಪ್ಪಿವೆ. ಸೋಂಕು ತಡೆಗಟ್ಟಲು ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ.” ಎಂದು ಅವರು ಹೇಳಿದ್ದಾರೆ.
ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸಾರಿಗೆ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿ ಹೇಳಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಉತ್ತರಾಖಂಡ ಹಿಮಪಾತ : ಗಾಯಗೊಂಡಿದ್ದ ನಾಲ್ವರು ಕಾರ್ಮಿಕರ ಸಾವು, ಇನ್ನೂ ಐವರು ನಾಪತ್ತೆ
ಉತ್ತರಾಖಂಡ ಹಿಮಪಾತ : ಗಾಯಗೊಂಡಿದ್ದ ನಾಲ್ವರು ಕಾರ್ಮಿಕರ ಸಾವು, ಇನ್ನೂ ಐವರು ನಾಪತ್ತೆ

