ಶಿಕ್ಷಣ ಸಚಿವ ಬ್ರತ್ಯ ಬಸು ಅವರ ರಾಜೀನಾಮೆಗೆ ಒತ್ತಾಯಿಸಿ ಸೋಮವಾರ ಪಶ್ಚಿಮ ಬಂಗಾಳದಾದ್ಯಂತ ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಲ್ಲಿ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕ ಎಸ್‌ಎಫ್‌ಐ ಕರೆ ನೀಡಿದ್ದ ಮುಷ್ಕರದ ಸಂದರ್ಭದಲ್ಲಿ ವಿವಿಧ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಮತ್ತು ತೃಣಮೂಲ ಕಾಂಗ್ರೆಸ್ ಛಾತ್ರ ಪರಿಷತ್ (ಟಿಎಂಸಿಪಿ) ಕಾರ್ಯಕರ್ತರ ನಡುವೆ ಘರ್ಷಣೆಗಳು ಭುಗಿಲೆದ್ದವು. ಪಶ್ಚಿಮ ಬಂಗಾಳ
ಪಶ್ಚಿಮ ಮೇದಿನಿಪುರ ಜಿಲ್ಲೆಯ ಮೇದಿನಿಪುರ ಪಟ್ಟಣ, ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿ, ಕೂಚ್ ಬೆಹಾರ್ ಜಿಲ್ಲೆ ಮತ್ತು ಪುರ್ಬಾ ಮೇದಿನಿಪುರ ಜಿಲ್ಲೆಯ ಪನ್ಸ್ಕುರಾದಲ್ಲಿ ಟಿಎಂಸಿಯ ವಿದ್ಯಾರ್ಥಿ ಘಟಕದ ಸದಸ್ಯರು ಮತ್ತು ಎಐಡಿಎಸ್‌ಒ ಮತ್ತು ಎಸ್‌ಎಫ್‌ಐನ ಎಡಪಂಥೀಯ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿವೆ ಎಂದು ವರದಿಯಾಗಿವೆ.
ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ)ನ ಸದಸ್ಯರು ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾದ ಒಂದು ದಿನದ ಮುಷ್ಕರವನ್ನು ಕೋಲ್ಕತ್ತಾದ ಜಾದವ್‌ಪುರ ಮತ್ತು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ನಡೆಸಿದ್ದಾರೆ.
Kolkata, West Bengal: AIDSO and SFI students are protesting at Jadavpur University, demanding student union elections, which haven't been held for years. They are peacefully sitting at the gate, not blocking roads, and will continue their protest until the government acts pic.twitter.com/Afs5TzpPGX
— IANS (@ians_india) March 3, 2025
ಕಲ್ಕತ್ತಾ ವಿಶ್ವವಿದ್ಯಾಲಯ, ರವೀಂದ್ರ ಭಾರತಿ ವಿಶ್ವವಿದ್ಯಾಲಯ, ಉತ್ತರ ಬಂಗಾಳ ವಿಶ್ವವಿದ್ಯಾಲಯ ಮತ್ತು ಬರ್ದ್ವಾನ್ ವಿಶ್ವವಿದ್ಯಾಲಯದಂತಹ ಇತರ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳಲ್ಲಿ ಸೆಮಿಸ್ಟರ್ ಪರೀಕ್ಷೆಗಳು ನಡೆದರೂ ಕೆಲವು ತರಗತಿಗಳು ನಡೆಯದ ಕಾರಣ ಮುಷ್ಕರವು ಭಾಗಶಃ ಪರಿಣಾಮ ಬೀರಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಾಗ್ಯೂ, ಜಾದವ್‌ಪುರ ವಿಶ್ವವಿದ್ಯಾಲಯ ಮತ್ತು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಂತಲ್ಲದೆ ಈ ಕ್ಯಾಂಪಸ್‌ಗಳಲ್ಲಿ ಮುಷ್ಕರದಲ್ಲಿ ಕಡಿಮೆ ಎಸ್‌ಎಫ್‌ಐ ಕಾರ್ಯಕರ್ತರು ಕಾಣಿಸಿಕೊಂಡರು ಎಂದು ವರದಿಯಾಗಿದೆ. ಆಡಳಿತಾರೂಢ ಟಿಎಂಸಿಯ ವಿದ್ಯಾರ್ಥಿ ವಿಭಾಗವಾದ ತೃಣಮೂಲ ಛಾತ್ರ ಪರಿಷತ್‌ನ ಕಾರ್ಯಕರ್ತರು ಸಹ ಕ್ಯಾಂಪಸ್‌ಗಳಲ್ಲಿ ಕಾಣಿಸಿಕೊಂಡರು ಎಂದು ವರದಿಯಾಗಿದೆ. ಪಶ್ಚಿಮ ಬಂಗಾಳ
ಎಸ್‌ಎಫ್‌ಐ ಕಾರ್ಯಕರ್ತರು ರಸ್ತೆ ಸಂಚಾರಕ್ಕೆ ಯಾವುದೇ ಅಡ್ಡಿ ಉಂಟುಮಾಡದ ಕಾರಣ ಮುಷ್ಕರವು ಇಲ್ಲಿಯವರೆಗೆ ವಾಹನ ಸಂಚಾರದ ಮೇಲೆ ಪರಿಣಾಮ ಬೀರಲಿಲ್ಲ. ಪಶ್ಚಿಮ ಬಂಗಾಳ ಮಂಡಳಿಯ 12 ನೇ ತರಗತಿ ಪರೀಕ್ಷೆಗಳು ಸಹ ಸೋಮವಾರ ಪ್ರಾರಂಭವಾಗಿವೆ. ವಿಧ್ಯಾರ್ಥಿಗಳು ಬೆಳಿಗ್ಗೆಯಿಂದಲೇ ರಾಜ್ಯಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಸರಾಗವಾಗಿ ತೆರಳಿದ್ದಾರೆ.
#WATCH | Siliguri | A clash broke out between members of Trinamool Chhatra Parishad and All India Democratic Students' Organisation (AIDSO) workers during a students' strike called by SFI in all universities across West Bengal. The strike is called against the recent Jadavpur… pic.twitter.com/gB2RAu3Zxy
— ANI (@ANI) March 3, 2025
ಮಾರ್ಚ್ 1 ರಂದು ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ನಡೆದ ಗಲಾಟೆಯ ಸಂದರ್ಭದಲ್ಲಿ ಸಚಿವ ಬಸು ಅವರ ಬೆಂಗಾವಲು ಪಡೆಯಲ್ಲಿದ್ದ ಕಾರಿಗೆ ಸಿಲುಸಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ವಿದ್ಯಾರ್ಥಿ ಸಂಘ ಚುನಾವಣೆ ನಡೆಸುವ ಬಗ್ಗೆ ಚರ್ಚೆ ನಡೆಸುವಂತೆ ಒತ್ತಾಯಿಸಿ ಎಡಪಂಥೀಯ ವಿದ್ಯಾರ್ಥಿಗಳು ಸಚಿವರನ್ನು ಕ್ಯಾಂಪಸ್‌ನಿಂದ ಹೊರಹೋಗದಂತೆ ತಡೆಯಲು ಪ್ರಯತ್ನಿಸಿದ್ದರು. ಈ ವೇಳೆ ಪ್ರತಿಭಟನಾಕಾರರು ಬಸು ಅವರ ಕಾರಿನ ವಿಂಡ್‌ಶೀಲ್ಡ್‌ಗೆ ಹಾನಿ ಮಾಡಿದ್ದರಿಂದ ಬಸು ಅವರಿಗೆ ಗಾಯಗಳಾಗಿವೆ.
ಟಿಎಂಸಿ ಬೆಂಬಲಿತ ಶಿಕ್ಷಕರ ಸಂಘವಾದ ಪಶ್ಚಿಮ ಬಂಗಾಳ ಕಾಲೇಜು ಮತ್ತು ವಿಶ್ವವಿದ್ಯಾಲಯ ಪ್ರಾಧ್ಯಾಪಕರ ಸಂಘದ (WBCUPA) ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ ನಂತರ ಬಸು ಆವರಣದಿಂದ ಹೊರಡುವಾಗ ಈ ಘಟನೆ ಸಂಭವಿಸಿತ್ತು.
“ಶನಿವಾರ ಜಾದವ್‌ಪುರ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಡಬ್ಲ್ಯುಬಿಸಿಯುಪಿಎ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಟಿಎಂಸಿ ಬೆಂಬಲಿಗರು ಬಸು ಅವರ ಸಮ್ಮುಖದಲ್ಲಿ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯವನ್ನು ಪ್ರಚೋದಿಸಿದ್ದರು” ಎಂದು ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಶುವಜಿತ್ ಸರ್ಕಾರ್ ಆರೋಪಿಸಿದ್ದಾರೆ.
ಮಾರ್ಚ್ 1 ರಂದು ಜಾದವ್‌ಪುರ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಘಟನೆಗಳ ಬಗ್ಗೆ ಮಾತನಾಡಿದ ಸರ್ಕಾರ್, “ವಿದ್ಯಾರ್ಥಿಗಳು ಉಪಕುಲಪತಿಗಳ ಸಮ್ಮುಖದಲ್ಲಿ ಶಿಕ್ಷಣ ಸಚಿವರೊಂದಿಗೆ ಚರ್ಚೆ ನಡೆಸಲು ಮಾತ್ರ ಬಯಸಿದ್ದರು. ಆದರೆ ಅವರು ಅವರೊಂದಿಗೆ ಸರಿಯಾಗಿ ವರ್ತಿಸದೆ, ಕ್ಯಾಂಪಸ್‌ನಿಂದ ಹೊರಹೋಗಲು ಪ್ರಯತ್ನಿಸಿದರು” ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಸಚಿವರೊಂದಿಗೆ ಸಭೆ ನಡೆಸುವಂತೆ ಒತ್ತಾಯಿಸಿದರೂ, ಅವರು ಬಲಪಂಥೀಯ ಟಿಎಂಸಿ ಮತ್ತು ಹೊರಗಿನವರೊಂದಿಗೆ ತಮ್ಮ ಕಾರನ್ನು ಹತ್ತಿದರು. ಈ ವೇಳೆ ಅವರ ಚಾಲಕ ವಾಹನದ ಬಳಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸದೆ ವಾಹನವನ್ನು ವೇಗಗೊಳಿಸಿದರು. ಹಾಗಾಗಿ ಅವರ ಕಾರು ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗೊಳಿಸಿತು, ಅವರಲ್ಲಿ ಒಬ್ಬನಿಗೆ ಗಂಭೀರ ಗಾಯಗಳಾಗಿದ್ದು, ಅವರು ಹಿಂತಿರುಗಿ ನೋಡದೆ ವೇಗವಾಗಿ ಓಡಿಹೋದರು ಎಂದು ಸರ್ಕಾರ್ ಆರೋಪಿಸಿದ್ದಾರೆ.
“ಇಬ್ಬರು ವಿದ್ಯಾರ್ಥಿಗಳ ಗಾಯಗಳಿಗೆ ಬಸು ಕಾರಣ. ಹಾಗಾಗಿ ಅವರು ರಾಜ್ಯ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಬೇಕು. ಜೊತೆಗೆ ಜಾದವ್‌ಪುರ ವಿಶ್ವವಿದ್ಯಾಲಯದ ಆವರಣದಲ್ಲಿ ಬೆಂಕಿ ಹಚ್ಚಿದ್ದಕ್ಕಾಗಿ ಅವರ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಸೋಮವಾರದಿಂದ ಪ್ರಾರಂಭವಾದ ಹೈಯರ್ ಸೆಕೆಂಡರಿ ಪರೀಕ್ಷೆಗಳ ಸುಗಮ ನಿರ್ವಹಣೆಗೆ ಎಸ್‌ಎಫ್‌ಐ ತನ್ನ ಸಹಾಯವನ್ನು ನೀಡಲಿದೆ. ಅಭ್ಯರ್ಥಿಗಳಿಗೆ ಸಹಾಯ ಮಾಡಲು ಪರೀಕ್ಷಾ ಕೇಂದ್ರಗಳ ಬಳಿ ಶಿಬಿರಗಳನ್ನು ಆಯೋಜಿಸಲಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಹೋಳಿ ಸಮಯದಲ್ಲಿ ಮುಸ್ಲಿಮರ ಪ್ರವೇಶ ನಿಷೇಧಕ್ಕೆ ಹಿಂದೂ ಪುರೋಹಿತರ ಆದೇಶ

