ಮುಂದಿನ 30 ವರ್ಷಗಳ ಕಾಲ ನಡೆಸುವ ಯಾವುದೇ ಕ್ಷೇತ್ರ ಪುನರ್ವಿಂಗಡಣೆಯನ್ನು 1971ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ನಡೆಸಬೇಕು ಎಂದು ತಮಿಳುನಾಡು ಸರ್ಕಾರವು ಬಯಸುತ್ತಿದೆ. ಆದರೆ ಎನ್‌ಡಿಎ ಸರ್ಕಾರದ ಪ್ರಮುಖ ಮಿತ್ರ ಪಕ್ಷವಾದ ಆಂಧ್ರಪ್ರದೇಶದ ಆಡಳಿತಾರೂಢ ತೆಲುಗು ದೇಶಂ ಪಕ್ಷ (ಟಿಡಿಪಿ)ವು ಇದಕ್ಕೆ ವ್ಯತಿರಿಕ್ತವಾಗಿದ್ದು, ತಮಿಳುನಾಡು ಸರ್ಕಾರದ ವಾದದಂತೆ ಮಾಡಿದರೆ ತನ್ನ ರಾಜ್ಯವನ್ನು ಅನಾನುಕೂಲಕ್ಕೆ ಸಿಲುಕಿಸುತ್ತದೆ ಎಂದು ವಾದಿಸುತ್ತಿದೆ. ಕ್ಷೇತ್ರ ಪುನರ್ವಿಂಗಡನೆಗೆ
ಬುಧವಾರ ನಡೆದ ಸರ್ವಪಕ್ಷ ಸಭೆಯಲ್ಲಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಸಂಸತ್ತಿನಲ್ಲಿ ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚಳವಾದರೆ, 1971 ರ ಜನಗಣತಿಯ ಆಧಾರವಾಗಿ ಮಾಡಬೇಕು. ಅದಕ್ಕಾಗಿ ಸೂಕ್ತವಾದ ಸಾಂವಿಧಾನಿಕ ತಿದ್ದುಪಡಿ ಮಾಡಬೇಕು ಎಂದು ಹೇಳುವ ನಿರ್ಣಯವನ್ನು ಮಂಡಿಸಿದ್ದಾರೆ.
ಅಲ್ಲದೆ, 2026 ರಿಂದ 30 ವರ್ಷಗಳ ಕಾಲ ಲೋಕಸಭಾ ಸ್ಥಾನಗಳ ಪುನರ್ವಿಂಗಡಣೆಗೆ 1971 ರ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳಬೇಕು ಮತ್ತು ಪ್ರಧಾನಿ ಈ ಬಗ್ಗೆ ಸಂಸತ್ತಿಗೆ ಭರವಸೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಸೀಟು ಕಡಿತವನ್ನು ತಡೆಯಲು ದಕ್ಷಿಣದ ಎಲ್ಲಾ ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಕ್ರಿಯಾ ಸಮಿತಿಯನ್ನು ಸ್ಟಾಲಿನ್ ಇದೇ ವೇಳೆ ಪ್ರಸ್ತಾಪಿಸಿದ್ದಾರೆ.
ಆದರೆ ಸ್ಟಾಲಿನ್ ಅವರ ವಾದವನ್ನು ನಿರಾಕರಿಸಿರುವ ಟಿಡಿಪಿ ಸಂಸದ ಮತ್ತು ಸಂಸದೀಯ ಪಕ್ಷದ ನಾಯಕ ಲಾವು ಶ್ರೀ ಕೃಷ್ಣ ದೇವರಾಯಲು, 2014 ರಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶವಾಗಿ ವಿಭಜನೆಯಾಗುವುದರಿಂದ ಆಂಧ್ರಪ್ರದೇಶವು ಈ ವಿಚಾರದಲ್ಲಿ ಹಲವು ಅಂಶಗಳಲ್ಲಿ ಸೋಲುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಕ್ಷೇತ್ರ ಪುನರ್ವಿಂಗಡನೆಗೆ
ದಕ್ಷಿಣ ರಾಜ್ಯಗಳ ಆತಂಕಗಳನ್ನು ಪರಿಹರಿಸಲು ಪ್ರಸ್ತುತ ಕ್ಷೇತ್ರ ಪುನರ್ವಿಂಗಡಣೆಯ ಸೂತ್ರವನ್ನು ಪುನರ್ರಚಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದರೂ, ಅದು ಇತ್ತೀಚಿನ ಜನಸಂಖ್ಯಾ ಅಂಕಿಅಂಶಗಳನ್ನು ಆಧರಿಸಿರಬೇಕು ಎಂದು ಹೇಳಿದ್ದಾರೆ.
“ಕ್ಷೇತ್ರ ಪುನರ್ವಿಂಗಡನೆಯು ಹೊಸ ಜನಗಣತಿಯನ್ನು ಆಧರಿಸಿರಬೇಕು. ಯಾಕೆಂದರೆ ನಮ್ಮ ಎಲ್ಲಾ ಕಲ್ಯಾಣ ಯೋಜನೆಗಳು ಹಳೆಯ ಜನಗಣತಿ ಮತ್ತು ಪರಸ್ಪರ ಸಂಬಂಧವಿಲ್ಲದ ಡೇಟಾವನ್ನು ಆಧರಿಸಿವೆ” ಎಂದು ಅವರು ಹೇಳಿದ್ದಾರೆ.
ಕ್ಷೇತ್ರ ಪುನರ್ವಿಂಗಡನೆಯಲ್ಲಿ ದಕ್ಷಿಣ ರಾಜ್ಯಗಳು ಸೀಟುಗಳನ್ನು ಕಳೆದುಕೊಳ್ಳುವುದಿಲ್ಲ ಎಂಬ ಗೃಹ ಸಚಿವ ಅಮಿತ್ ಶಾ ಅವರ ಭರವಸೆಯನ್ನು ಸ್ವಾಗತಿಸಿದ ದೇವರಾಯಲು, ಜನಸಂಖ್ಯಾ ನಿಯಂತ್ರಣಕ್ಕೆ ಸ್ವಲ್ಪ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದ್ದಾರೆ. ಜನಸಂಖ್ಯೆ ನಿಯಂತ್ರಣ ಮಾಡಿದ ರಾಜ್ಯಗಳು ನಿರಾಶೆಗೊಂಡಿವೆ ತಾನು ಎಂದು ಭಾವಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ವಿಕಟನ್ ವೆಬ್‌ಸೈಟ್ ಪುನಃಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ
ವಿಕಟನ್ ವೆಬ್‌ಸೈಟ್ ಪುನಃಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ

