ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಗೋಪಾಲ್ ಶರ್ಮಾ ಅವರು ಕಾಂಗ್ರೆಸ್ ಮುಖ್ಯ ಸಚೇತಕ ರಫೀಕ್ ಖಾನ್ ಅವರನ್ನು ಪದೇ ಪದೇ “ಪಾಕಿಸ್ತಾನಿ” ಎಂದು ಉಲ್ಲೇಖಿಸಿರುವ ಘಟನೆ ಶುಕ್ರವಾರ ನಡೆದಿದೆ. ಇದರ ನಂತರ ಸದನದಲ್ಲಿ ಕೋಲಾಹಲ ಉಂಟಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ವಿಧಾನಸಭೆಯಲ್ಲೆ
ನಗರಾಭಿವೃದ್ಧಿ, ವಸತಿ ಮತ್ತು ಸ್ಥಳೀಯ ಸ್ಥಂಸ್ಥೆ ಇಲಾಖೆಗಳಿಗೆ ನೀಡುವ ಅನುದಾನದ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಗೋಪಾಲ್ ಅವರು ಈ ಪದವನ್ನು ಬಳಸಿದ್ದಾರೆ. ವಿಧಾನಸಭೆಯಲ್ಲೆ
ನಗರಾಭಿವೃದ್ಧಿಯಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಕಾರ್ಯಕ್ಷಮತೆಯನ್ನು ಪ್ರಸ್ತುತ ಬಿಜೆಪಿ ಸರ್ಕಾರದ ಕಾರ್ಯಕ್ಷಮತೆಗೆ ಹೋಲಿಸಿದ ರಫೀಕ್ ಖಾನ್ ಅವರು, ಪರೋಕ್ಷವಾಗಿ ಗೋಪಾಲ್ ಶರ್ಮಾ ಅವರನ್ನು ಉಲ್ಲೇಖಿಸಿ, ಸ್ಪೀಕರ್ ಸಂದೀಪ್ ಶರ್ಮಾ ಅವರಿಗೆ “ಸ್ವಲ್ಪ ಜ್ಞಾನ ನೀಡಿ” ಎಂದು ಕೇಳಿದರು.
ಈ ವೇಳೆ ಬಿಜೆಪಿ ಶಾಸಕ ಗೋಪಾಲ್ ಶರ್ಮಾ ಅವರು ರಫೀಕ್ ಖಾನ್ ಅವರನ್ನು “ಪಾಕಿಸ್ತಾನಿ” ಎಂದು ಕರೆದಿದ್ದು, ಇದನ್ನು ವಿರೋಧಿಸಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು.
आज राजस्थान विधानसभा में यूडीएच की अनुदान मॉंग पर चर्चा में हिस्सा लेते हुए अपनी बात रखी।#RajasthanVidhansabha @INCIndia #MLARafeekKhanInc #मुख्यसचेतक #कॉंग्रेस_विधायक_दल #राजस्थान_विधानसभा pic.twitter.com/vzhDkTaCK0
— Rafeek Khan (@RafeekKhanInc) March 7, 2025
ಗೋಪಾಲ್ ಅವರ ವರ್ತನೆಗೆ ರಫೀಕ್ ಖಾನ್ ಆಕ್ಷೇಪ ವ್ಯಕ್ತಪಡಿಸಿದ್ದು, ಘರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಘರ್ಷಣೆಯ ನಡುವೆ, ಬಿಜೆಪಿ ನಾಯಕರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉಲ್ಲೇಖಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್, ರಾಜ್ಯ ವಿಧಾನಸಭೆಯಲ್ಲಿ ಸದಸ್ಯರಲ್ಲದವರನ್ನು ಹೆಸರಿಸಲು ಸಾಧ್ಯವಿಲ್ಲ ಎಂದು ನೆನಪಿಸಿದ ನಂತರ ಅವರ ಹೇಳಿಕೆಗಳನ್ನು ಹಿಂಪಡೆದುಕೊಂಡಿದ್ದಾರೆ.
ವಿರೋಧ ಪಕ್ಷದ ನಾಯಕ ಟಿಕಾ ರಾಮ್ ಜಲ್ಲಿ ಸೇರಿದಂತೆ ಇತರ ಕಾಂಗ್ರೆಸ್ ಶಾಸಕರು ಕೂಡಾ ಗೋಪಾಲ್ ಶರ್ಮಾ ಅವರ ಹೇಳಿಕೆಗಳನ್ನು ಟೀಕಿಸಿದ್ದಾರೆ. ಈ ವೇಳೆ ಸ್ಪೀಕರ್ ಮಧ್ಯಪ್ರವೇಶಿಸಿ ಸದನದಲ್ಲಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಕೇಳಿಕೊಂಡಿದ್ದಾರೆ.
ಇದರ ನಂತರ ಘಟನೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿದ ಜುಲ್ಲಿ, ಗೋಪಾಲ್ ಶರ್ಮಾ ಅವರ ಹೇಳಿಕೆಗಳನ್ನು “ಅಸಹನೀಯ ಮತ್ತು ಖಂಡನೀಯ” ಎಂದು ಕರೆದಿದ್ದಾರೆ.
“ಬಿಜೆಪಿ ನಾಯಕರು ದಿನದಿಂದ ದಿನಕ್ಕೆ ತಮ್ಮ ಹೇಳಿಕೆಗಳ ಮಟ್ಟವನ್ನು ಕಡಿಮೆ ಮಾಡಲು ಸ್ಪರ್ಧೆಗೆ ಇಳಿದಿದ್ದಾರೆ. ಅವರು ವಿಧಾನಸಭೆಯಲ್ಲಿ ನೀಡುವ ಭಾಷಣಗಳು ಮತ್ತು ಬೀದಿಯಲ್ಲಿ ನೀಡುವ ಭಾಷಣಗಳ ನಡುವೆ ಯಾವುದೇ ವ್ಯತ್ಯಾಸವನ್ನು ಕಾಣುತ್ತಿಲ್ಲ.” ಎಂದು ಜುಲ್ಲಿ ಹೇಳಿದ್ದಾರೆ.
ಕಳೆದ ವರ್ಷ ಮಾರ್ಚ್ 6 ರಂದು, ಜೈಪುರ ಮುನ್ಸಿಪಲ್ ಕಾರ್ಪೊರೇಷನ್‌ನ ಮಂಡಳಿ ಸಭೆಯಲ್ಲಿ ಗೋಪಾಲ್ ಶರ್ಮಾ ಅವರು ರಫೀಕ್ ಖಾನ್ ಅವರೊಂದಿಗೆ ಘರ್ಷಣೆ ನಡೆಸಿದ್ದರು. ಈ ಘರ್ಷಣೆಯ ಸಂದರ್ಭದಲ್ಲಿ ಜೈಪುರವನ್ನು “ಮಿನಿ-ಪಾಕಿಸ್ತಾನ” ಆಗಲು ಬಿಡುವುದಿಲ್ಲ ಎಂದು ಅವರು ಹೇಳಿದ್ದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಎನ್ಇಪಿ, ಕ್ಷೇತ್ರ ಪುನರ್ವಿಂಗಡನೆ, ವಕ್ಫ್ ಕುರಿತು ಚರ್ಚಿಸಲು ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಸಭೆ
ಎನ್ಇಪಿ, ಕ್ಷೇತ್ರ ಪುನರ್ವಿಂಗಡನೆ, ವಕ್ಫ್ ಕುರಿತು ಚರ್ಚಿಸಲು ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಸಭೆ


Many of the legislatures don’t how to behave in the assembly or parliament. So many uneducated are better than these rulers.