ಕೇಂದ್ರ ಸರ್ಕಾರದ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಮುಸ್ಲಿಂ ಸಂಘಟನೆಗಳು ಮಾರ್ಚ್ 9ರ ಭಾನುವಾರ ಮಂಗಳೂರಿನಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದೆ. ಪ್ರಸ್ತುತ ಜಾಥಾವನ್ನು ಎರಡು ಪ್ರಬಲ ಸುನ್ನೀ ಮುಸ್ಲಿಂ ಗುಂಪುಗಳಾದ ಎಪಿ ಮತ್ತು ಇಕೆ ವಿಭಾಗವು ಒಗ್ಗಟ್ಟಾಗಿ ಮುನ್ನಡೆಸಲಿದೆ. ಮಂಗಳೂರು
ಎರಡು ಪ್ರಬಲ ಸುನ್ನೀ ಮುಸ್ಲಿಂ ಗುಂಪುಗಳ ಖಾಝಿಗಳಾದ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಪ್ರತಿಭಟನಾ ಜಾಥಾದಲ್ಲಿ ಎರಡೂ ವಿಭಾಗಗಳ ವಿವಿಧ ಸಂಘಟನೆಗಳ ಕಾರ್ಯರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಆಯೋಜಕರು ಹೇಳಿದ್ದಾರೆ. ಮಂಗಳೂರು
ಬೆಳಿಗ್ಗೆ 9.30ಕ್ಕೆ ಮಂಗಳೂರಿನ ಹಂಪನಕಟ್ಟೆಯಿಂದ ಪ್ರಾರಂಭಗೊಳ್ಳುವ ಕಾಲ್ನಡಿಗೆ ಜಾಥಾ ಕ್ಲಾಕ್ ಟವರ್‌ವರೆಗೆ ಸಾಗಲಿದೆ. ಎರಡೂ ವಿಭಾಗಗಳ ಧಾರ್ಮಿಕ ವಿದ್ವಾಂಸರು, ಸಂಘಟನಾ ಪ್ರಮುಖರು ಜಾಥಾದ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಧಾರ್ಮಿಕ ವಿದ್ವಾಂಸ, ಪತ್ರಕರ್ತ ಕೆ.ಎಂ. ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, “ಸಾಮಾಜಿಕ ಅಗತ್ಯಗಳಿಗಾಗಿ ಮುಸ್ಲಿಂ ಸಮುದಾಯವು ಅಲ್ಲಾಹನ ಹೆಸರಿನಲ್ಲಿ ಸಮರ್ಪಿಸಿರುವ ಸ್ವತ್ತುಗಳನ್ನು ಸಂರಕ್ಷಿಸಲು ಬ್ರಿಟಿಷರ ಕಾಲದಿಂದಲೂ ವಕ್ಫ್ ಬೋರ್ಡ್ ವ್ಯವಸ್ಥೆ ಜಾರಿಯಲ್ಲಿದೆ. ಆ ಮೂಲಕ ವಕ್ಫ್ ಸ್ವತ್ತುಗಳನ್ನು ಸಂರಕ್ಷಿಸಲು ಮತ್ತು ಬಳಸಲು ವ್ಯವಸ್ಥೆ ಮಾಡಲಾಗುತ್ತಿದೆ. ಇದೀಗ ಕೇಂದ್ರ ಸರ್ಕಾರವು ಹೊಸ ತಿದ್ದುಪಡಿ ಮಸೂದೆಯ ಮೂಲಕ ವಕ್ಫ್ ಸ್ವತ್ತುಗಳನ್ನು ಕಬಳಿಸುವ ಸಂಚು ನಡೆಸುತ್ತಿದೆ” ಎಂದು ಹೇಳಿದ್ದಾರೆ.
ಪ್ರಸ್ತುತ ಮಸೂದೆಯು ಮುಸ್ಲಿಮರಲ್ಲಿ ತೀವ್ರವಾದ ಆತಂಕವನ್ನು ಉಂಟು ಮಾಡಿದ್ದು, ಆದ್ದರಿಂದ ಈ ಮಸೂದೆಯನ್ನು ಕೂಡಲೇ ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳಬೇಕೆಂದು ಈ ಜಾಥಾದ ಮೂಲಕ ಆಗ್ರಹಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಬೇಡಿಕೆ ಈಡೇರದಿದ್ದರೆ ಸಾಮೂಹಿಕ ರಾಜೀನಾಮೆ: ರಾಜ್ಯ ಸರ್ಕಾರಕ್ಕೆ ಶುಶ್ರೂಷಾಧಿಕಾರಿಗಳ ಎಚ್ಚರಿಕೆ



Why confront?
Why not confer and solve the problem/s?
Talk talk is always preferred to war war?