ಭೂ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ನಾಯಕರೊಬ್ಬರನ್ನು ಗುಂಡಿಕ್ಕಿ ಕೊಂದಿರುವ ಘಟನೆ ಹರಿಯಾಣದ ಸೋನಿಪತ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೀಡಾದ ವ್ಯಕ್ತಿಯನ್ನು ಬಿಜೆಪಿಯ ಮುಂಡ್ಲಾನಾ ಮಂಡಲ ಅಧ್ಯಕ್ಷ ಸುರೇಂದ್ರ ಜವಾಹರ್ ಎಂದು ಗುರುತಿಸಲಾಗಿದೆ. ಬಿಜೆಪಿ ನಾಯಕನನ್ನು
ಅವರನ್ನು ಶುಕ್ರವಾರ ರಾತ್ರಿ 9:30 ರ ಸುಮಾರಿಗೆ ಜವಾಹರ್ ಗ್ರಾಮದಲ್ಲಿ ಅವರ ಗ್ರಾಮದ ಮೂವರು ಗುಂಡು ಹಾರಿಸಿ ಅವರನ್ನು ಕೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಹತ್ಯೆಗೀಡಾದ ಜವಾಹರ್ ತನ್ನನ್ನು ಕೊಂದ ಶಂಕಿತನ ಚಿಕ್ಕಮ್ಮನ ಹೆಸರಿನಲ್ಲಿ ಖರೀದಿಸಿದ್ದ ಭೂಮಿಗೆ ಸಂಬಂಧಿಸಿದ ಆಸ್ತಿ ವಿವಾದ ಈ ಘಟನೆಗೆ ಕಾರಣ ಎಂದು ಅವರು ಹೇಳಿದ್ದಾರೆ.
ಅದಾಗ್ಯೂ, ಶಂಕಿತ ಆರೋಪಿಯ ಹೆಸರನ್ನು ಅವರು ಬಹಿರಂಗಪಡಿಸಿಲ್ಲ ಎಂದು ವರದಿಗಳು ಹೇಳಿವೆ. ಆರೋಪಿಯು ಜವಾಹರ್ ಅವರನ್ನು ಭೂಮಿಗೆ ಕಾಲಿಡದಂತೆ ಈ ಹಿಂದೆ ಎಚ್ಚರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಎಚ್ಚರಿಕೆ ಮೀರಿ ಜವಾಹರ್ ಶುಕ್ರವಾರ ರಾತ್ರಿ ಭೂಮಿಯನ್ನು ತೆರವುಗೊಳಿಸಲು ಸ್ಥಳಕ್ಕೆ ಬಂದಾಗ, ಶಂಕಿತರು ಅವರನ್ನು ಎದುರಿಸಿ ಗುಂಡು ಹಾರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ತನ್ನ ಮೇಲೆ ದಾಳಿ ಮಾಡಲು ಬಂದ ದಾಳಿಕೋರರೊಂದಿಗೆ ಅಂಗಡಿಯೊಳಗೆ ಓಡುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ. ‘ನನ್ನನ್ನು ಕೊಂದರು’ ಎಂದು ಜವಾಹರ್ ಪದೇ ಪದೇ ಕೂಗುವುದು ಅದರಲ್ಲಿ ದಾಖಲಾಗಿದ್ದು, ನಂತರ ಆರೋಪಿಗಳು ಅವರನ್ನು ಹಿಡಿದು ನೇರವಾಗಿ ಗುಂಡು ಹಾರಿಸುತ್ತಾರೆ.
ಈ ವೇಳೆ ಜವಾಹರ್ ಸ್ಥಳದಲ್ಲೇ ಗಾಯಗೊಂಡು ಸಾವನ್ನಪ್ಪಿದ್ದು, ಅವರ ಚಿಕ್ಕಪ್ಪ ಮತ್ತು ಪ್ರತ್ಯಕ್ಷದರ್ಶಿ ಸುಲ್ತಾನ್ ಸಿಂಗ್ ಅಪರಾಧದ ವಿವರಗಳನ್ನು ಹಂಚಿಕೊಂಡಿದ್ದಾರೆ. ಬಿಜೆಪಿ ನಾಯಕನನ್ನು
#Sonipat भाजपा के मुंडलाना मंडल अध्यक्ष सुरेंद्र जवाहरा की गोली मारकर हत्या गांव जवाहरा में पड़ोसी ने गोली मारकर हत्या की.#CCTV@BJP4Haryana @NayabSainiBJP pic.twitter.com/I9TT9eZpZO
— Anuj Tomar (journalist) (@THAKURANUJTOMAR) March 15, 2025
ಮನ್ನು ಎಂದು ಗುರುತಿಸಲಾದ ಆರೋಪಿಯೊಂದಿಗೆ ಜವಾಹರ್ ದೀರ್ಘಕಾಲದಿಂದ ಭೂಮಿ ವಿವಾದದಲ್ಲಿದ್ದರು. ಮೂರು ಬಿಘಾ ಭೂಮಿಯ ಈ ವಿವಾದ ಈಗಾಗಲೇ ನ್ಯಾಯಾಲಯದಲ್ಲಿದೆ ಎಂದು ಪ್ರತ್ಯಕ್ಷದರ್ಶಿ ಸುಲ್ತಾನ್ ಸಿಂಗ್ ಹೇಳಿದ್ದಾರೆ. ಆರೋಪಿ ಮನ್ನುವಿಗೆ ಜವಾಹರ್ ಭೂಮಿಗಾಗಿ 5 ಲಕ್ಷ ರೂ.ಗಳನ್ನು ಪಾವತಿಸಿದ್ದಾರೆಂದು ವರದಿಯಾಗಿದೆ, ಆದರೆ ಮನ್ನು ಅವರು ಜವಾಹರ್ ಹೆಸರಿನಲ್ಲಿ ವರ್ಗಾವಣೆಯನ್ನು ಪೂರ್ಣಗೊಳಿಸಲು ಹಿಂಜರಿಯುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಆರೋಪ: ಸವರ್ಣಿಯರಿಂದ ಹಳ್ಳಿಯಾದ್ಯಂತ ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ
ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಆರೋಪ: ಸವರ್ಣಿಯರಿಂದ ಹಳ್ಳಿಯಾದ್ಯಂತ ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ

