ತಮಿಳು ಚಲನಚಿತ್ರಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಹಿಂದಿಗೆ ಡಬ್ ಮಾಡಲು ಅವಕಾಶ ನೀಡುವಾಗ ಹಿಂದಿ ಹೇರಿಕೆಯನ್ನು ತಮಿಳುನಾಡು ಜನರು ಯಾಕೆ ವಿರೋಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದ ನಟ, ರಾಜಕಾರಣಿ ಪವನ್ ಕಲ್ಯಾಣ್ ಅವರಿಗೆ ಡಿಎಂಕೆ ತಿರುಗೇಟು ನೀಡಿದ್ದು, ಪವನ್ ಕಲ್ಯಾಣ್ ಹುಟ್ಟುವ ಮೊದಲೆ ತಮಿಳುನಾಡು ಹಿಂದಿ ವಿರುದ್ಧ ಕಾನೂನು ತಂದು, ದ್ವಿಭಾಷ ಸೂತ್ರವನ್ನು ಅಳವಡಿಕೊಂಡಿದ್ದೆವು ಎಂದು ಹೇಳಿದೆ.
ಡಿಎಂಕೆ ವಕ್ತಾರ ಡಾ. ಸೈಯದ್ ಹಫೀಜುಲ್ಲಾ ಅವರು ಪವನ್ ಕಲ್ಯಾಣ್ ಅವರ ಹೇಳಿಕೆಗೆ ತಿರುಗೇಟು ನೀಡಿ, ಭಾಷಾ ನೀತಿಗಳ ಕುರಿತು ಮತ್ತು ತಮಿಳುನಾಡಿನ ನಿಲುವಿನ ಕುರಿತು ಅವರಿಗೆ “ಟೊಳ್ಳು ತಿಳುವಳಿಕೆ” ಇದೆ ಎಂದು ಬಣ್ಣಿಸಿದ್ದಾರೆ. ತಮಿಳುನಾಡು ಹಿಂದಿ ಅಥವಾ ಇತರ ಯಾವುದೇ ಭಾಷೆಯನ್ನು ಕಲಿಯುವ ವ್ಯಕ್ತಿಗಳನ್ನು ಎಂದಿಗೂ ವಿರೋಧಿಸಿಲ್ಲ, ಆದರೆ ತನ್ನ ಜನರ ಮೇಲೆ ಹಿಂದಿ ಅಥವಾ ಯಾವುದೇ ಭಾಷೆಯನ್ನು ಹೇರುವುದನ್ನು ವಿರೋಧಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ಪಕ್ಷವಾದ ಜನಸೇನಾ ಸ್ಥಾಪನೆಯ ದಿನದಂದು ಮಾತನಾಡಿದ ಪವನ್ ಕಲ್ಯಾಣ್, ತಮಿಳುನಾಡಿನ ನಿಲುವಿನಲ್ಲಿ ವಿರೋಧಾಭಾಸವಿದೆ ಎಂದು ಹೇಳಿದ್ದರು. “ತಮಿಳುನಾಡು ಹಿಂದಿ ಭಾಷೆಯನ್ನು ನಿರಂತರವಾಗಿ ತಿರಸ್ಕರಿಸುತ್ತಿದೆ. ತಮಗೆ ಅದು ಬೇಡ ಎಂದು ಹೇಳುತ್ತಿದೆ. ಆದರೆ, ನನ್ನ ಮನಸ್ಸಿನಲ್ಲಿ ಒಂದು ಆಲೋಚನೆ ಸುಳಿಯಿತು – ಹಾಗಿದ್ದಲ್ಲಿ, ಅವರು ತಮಿಳು ಚಲನಚಿತ್ರಗಳನ್ನು ಹಿಂದಿಯಲ್ಲಿ ಏಕೆ ಡಬ್ ಮಾಡುತ್ತಾರೆ?” ಎಂದು ಕೇಳಿದ್ದಾರೆ.
“ಅವರು ಉತ್ತರ ಪ್ರದೇಶ, ಬಿಹಾರ ಮತ್ತು ಛತ್ತೀಸ್‌ಗಢದಂತಹ ಹಿಂದಿ ಮಾತನಾಡುವ ರಾಜ್ಯಗಳ ಹಣ ಬೇಕಾಗಿದೆ ಮತ್ತು ಬಿಹಾರದ ಕಾರ್ಮಿಕರನ್ನು ಅವರು ಅವಲಂಬಿಸಿದ್ದಾರೆ. ಆದರೂ, ಅವರು ಹಿಂದಿಯನ್ನು ತಿರಸ್ಕರಿಸುವುದಾಗಿ ಹೇಳಿಕೊಳ್ಳುತ್ತಾರೆ. ಇದು ಹೇಗೆ ನ್ಯಾಯ?” ಅವರು ಹೇಳಿದ್ದಾರೆ. ಪವನ್ ಕಲ್ಯಾಣ್ ಹುಟ್ಟುವ ಮೊದಲೆ
#WATCH | Chennai, Tamil Nadu: On the statement of Andhra Pradesh DCM Pawan Kalyan, DMK leader TKS Elangovan says, "We have been opposing Hindi since 1938…We had passed legislation in the state assembly that Tamil Nadu will always follow the two-language formula because of the… pic.twitter.com/bHvjKZgDF1
— ANI (@ANI) March 15, 2025
ತಮ್ಮ ಸ್ವಂತ ಅನುಭವಗಳನ್ನು ನೆನಪಿಸಿಕೊಂಡ ಪವನ್ ಕಲ್ಯಾಣ್ ಅವರು ತಮಿಳುನಾಡಿನ ಚೆನ್ನೈನಲ್ಲಿ ತಾನು ಅಧ್ಯಯನ ಮಾಡುತ್ತಿದ್ದಾಗ ತಾರತಮ್ಯವನ್ನು ಎದುರಿಸಿದ್ದೇನೆ ಎಂದು ಅನುಭವ ಹಂಚಿಕೊಂಡಿದ್ದಾರೆ. “ಕೋಪ ಬಂದಾಲೆಲ್ಲಾ ಭಾರತವೇನು ಕತ್ತರಿಸುವ ಕೇಕ್ ತುಂಡೆ? ಯಾರಾದರೂ ಭಾರತದ ಸಮಗ್ರತೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರೆ, ಅದನ್ನು ರಕ್ಷಿಸಲು ನನ್ನಂತಹ ಕೋಟ್ಯಂತರ ಜನರು ಎದ್ದು ನಿಲ್ಲುತ್ತಾರೆ.” ಎಂದು ಹೇಳಿದ್ದಾರೆ.
ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್, ಹಿಂದಿ ಹೇರಿಕೆ ವಿರುದ್ಧ ತಮಿಳುನಾಡಿನಲ್ಲಿ ದೀರ್ಘಕಾಲದ ವಿರೋಧವಿದೆ ಎಂದು ನೆನಪಿಸಿಕೊಂಡಿದ್ದಾರೆ.
“ನಾವು 1938 ರಿಂದ ಹಿಂದಿಯನ್ನು ವಿರೋಧಿಸುತ್ತಿದ್ದೇವೆ… ನಟರ ಹೇಳಿಕಯಿಂದ ಅಲ್ಲ, ಶಿಕ್ಷಣ ತಜ್ಞರ ಸಲಹೆಗಳ ಆಧಾರದ ಮೇಲೆ ತಮಿಳುನಾಡು ಯಾವಾಗಲೂ ದ್ವಿಭಾಷಾ ಸೂತ್ರವನ್ನು ಅನುಸರಿಸುತ್ತದೆ ಎಂದು ನಾವು ರಾಜ್ಯ ವಿಧಾನಸಭೆಯಲ್ಲಿ ಕಾನೂನು ಅಂಗೀಕರಿಸಿದ್ದೇವೆ. ಈ ಮಸೂದೆಯನ್ನು 1968 ರಲ್ಲಿ ಅಂಗೀಕರಿಸಲಾಯಿತು, ಆಗ ಪವನ್ ಕಲ್ಯಾಣ್ ಜನಿಸಿಯೆ ಇರಲಿಲ್ಲ.” ಎಂದು ಹೇಳಿದ್ದಾರೆ.
Technology allows us to watch movies beyond language barriers. https://t.co/mT03mJARqM pic.twitter.com/w3qRgcSsCY
— Kanimozhi (கனிமொழி) (@KanimozhiDMK) March 15, 2025
“ಅವರಿಗೆ ತಮಿಳುನಾಡಿನ ರಾಜಕೀಯ ತಿಳಿದಿಲ್ಲ. ಜನರನ್ನು ತರಬೇತಿ ಮಾಡಲು ಮಾತೃಭಾಷೆಯಲ್ಲಿ ನೀಡುವ ಶಿಕ್ಷಣವು ಅತ್ಯುತ್ತಮ ಮಾರ್ಗವೆಂದು ನಾವು ನಂಬುತ್ತೇವೆ, ಆದ್ದರಿಂದ ನಾವು ಹಿಂದಿಯನ್ನು ವಿರೋಧಿಸುತ್ತಿರುವುದು ಇದೇ ಮೊದಲಲ್ಲ. ಪವನ್ ಕಲ್ಯಾಣ್ ಅವರ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ. ಬಿಜೆಪಿ ಸರ್ಕಾರದಿಂದ ಏನಾದರೂ ಪಡೆಯಲು ಬೇಕಾಗಿ ಹೇಗಾದರೂ ಮಾಡಿ ಬಿಜೆಪಿಯನ್ನು ಬೆಂಬಲಿಸಲು ಬಯಸುತ್ತಾರೆ” ಎಂದು ಅವರು ಹೇಳಿದ್ದಾರೆ.
ಡಿಎಂಕೆ ಸಂಸದೆ ಕನಿಮೋಳಿ ಅವರು ಪವನ್ ಕಲ್ಯಾಣ್ ಈ ಹಿಂದೆ ಹಿಂದಿ ಹೇರಿಕೆಯನ್ನು ಈ ಟೀಕಿಸಿದ್ದ ಅವರ ಟ್ವೀಟ್‌ಗಳನ್ನು ಮರುಹಂಚಿಕೊಂಡಿದ್ದಾರೆ. ಈ ಟ್ವೀಟ್ ಅಲ್ಲಿ ಅವರು, ತಂತ್ರಜ್ಞಾನವು ಈಗ ಭಾಷೆಯ ಅಡೆತಡೆಗಳನ್ನು ಮೀರಿ ಚಲನಚಿತ್ರಗಳನ್ನು ಆನಂದಿಸಲು ನಮಗೆ ಅವಕಾಶ ಮಾಡಿಕೊಟ್ಟಿದೆ ಎಂದು ಕನಿಮೋಳಿ ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಿಜೆಪಿ ನಾಯಕನನ್ನು ಬೆನ್ನಟ್ಟಿ ಗುಂಡಿಕ್ಕಿ ಹತ್ಯೆ; ವಿಡಿಯೊ ವೈರಲ್

