ನಿಂದನಿಯ ಪದ ಬಳಕೆ ಮಾಡಿದ ಎಐ ಚಾಟ್ ಬಾಟ್ ಗ್ರೋಕ್ ವಿಚಾರವಾಗಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಸಾಮಾಜಿಕ ಮಾಧ್ಯಮ ಎಕ್ಸ್‌ನೊಂದಿಗೆ ಸಂಪರ್ಕದಲ್ಲಿದೆ ಎಂದು ವರದಿಯಾಗಿದೆ. ಗ್ರೋಕ್ ಇತ್ತೀಚೆಗೆ ಹಿಂದಿ ಭಾಷೆ ಮತ್ತು ನಿಂದನೆಗಳನ್ನು ಬಳಸಿದೆ ಎಂದು ಆರೋಪಿಸಲಾಗಿದ್ದು, ಈ ಕುರಿತ ಸಮಸ್ಯೆಯನ್ನು ಕೇಂದ್ರದ ಸಚಿವಾಲಯ ಪರಿಶೀಲಿಸಲಿದೆ ಎಂದು ಮೂಲಗಳು ತಿಳಿಸಿವೆ.
ಸಚಿವಾಲಯವು ಈ ವಿಷಯವನ್ನು ಮತ್ತು ನಿಂದನೀಯ ಭಾಷೆಯ ಬಳಕೆಗೆ ಕಾರಣವಾದ ಅಂಶಗಳನ್ನು ಪರಿಶೀಲಿಸುತ್ತದೆ ಎಂದು ಸಚಿವಾಲಯದ ಮೂಲಗಳು ಹೇಳಿದ್ದಾಗಿ ವರದಿ ಹೇಳಿವೆ. “ನಾವು ಎಕ್ಸ್ ಸಂಪರ್ಕದಲ್ಲಿದ್ದು, ಅದು ಏಕೆ ನಡೆಯುತ್ತಿದೆ ಮತ್ತು ಸಮಸ್ಯೆಗಳೇನು ಎಂಬುದನ್ನು ಕಂಡುಹಿಡಿಯಲು ನಾವು ಎಕ್ಸ್‌ನೊಂದಿಗೆ ಮಾತನಾಡುತ್ತಿದ್ದೇವೆ. ಅವರು ಕೂಡಾ ನಮ್ಮೊಂದಿಗೆ ತೊಡಗಿಸಿಕೊಂಡಿದ್ದಾರೆ” ಎಂದು ಮೂಲಗಳು ತಿಳಿಸಿವೆ. ಐಟಿ ಸಚಿವಾಲಯವು ಈ ವಿಷಯವನ್ನು ಪರಿಶೀಲಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಎಲೋನ್ ಮಸ್ಕ್ ಮಾಲಿಕತ್ವದ ಎಕ್ಸ್‌ನಲ್ಲಿನ ಪ್ರಬಲ ಎಐ ಚಾಟ್‌ಬಾಟ್ ಆಗಿರುವ ಗ್ರೋಕ್, ಬಳಕೆದಾರರ ಪ್ರಚೋದನೆಯ ನಂತರ ಹಿಂದಿಯಲ್ಲಿ ಪ್ರತಿಕ್ರಿಯೆ ನೀಡುತ್ತಾ ನಿಂದನೆ ಮತ್ತು ಆಡುಭಾಷೆಯನ್ನು ಬಳಸಿದೆ ಎಂದು ಇತ್ತೀಚೆಗೆ ನೆಟ್ಟಿಗರು ಆರೋಪಿಸಿದ್ದರು. ನಿಂದನೀಯ ಪದ ಬಳಕೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಿಜೆಪಿ ಪರ ಸಂಘಟನೆಯ ದುಷ್ಕರ್ಮಿಗಳಿಂದ ಬೆದರಿಕೆ | ಔರಂಗಜೇಬ್ ಸಮಾಧಿಗೆ ಬಿಗಿಭದ್ರತೆ
ಬಿಜೆಪಿ ಪರ ಸಂಘಟನೆಯ ದುಷ್ಕರ್ಮಿಗಳಿಂದ ಬೆದರಿಕೆ | ಔರಂಗಜೇಬ್ ಸಮಾಧಿಗೆ ಬಿಗಿಭದ್ರತೆ

