ಕುಸಿತ ಸಂಭವಿಸಿದ ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆ (ಎಸ್‌ಎಲ್‌ಬಿಸಿ) ಸುರಂಗದೊಳಗೆ ಮಂಗಳವಾರ (ಮಾ.25) ಎರಡನೇ ಶವ ಪತ್ತೆಯಾಗಿದೆ.
ದುರಂತಕ್ಕೂ ಮುನ್ನ ಕಾರ್ಮಿಕರು ನಿರ್ವಹಣಾ ಕೆಲಸ ಮಾಡುತ್ತಿದ್ದ ಕನ್ವೇಯರ್ ಬೆಲ್ಟ್‌ನಿಂದ 50 ಮೀಟರ್ ದೂರದಲ್ಲಿ ಶವ ಕಂಡು ಬಂದಿದೆ. ಅದು ಯಾರದ್ದು ಎಂದು ಇನ್ನೂ ಗೊತ್ತಾಗಿಲ್ಲ.
ಫೆಬ್ರವರಿ 22ರಂದು ಸುರಂಗದೊಳಗೆ ಕುಸಿತ ಸಂಭವಿಸಿ ಎಂಟು ಕಾರ್ಮಿಕರು ಸಿಲುಕಿಕೊಂಡಿದ್ದು, ಈ ಪೈಕಿ ಒಬ್ಬರ ಕಾರ್ಮಿಕ ಗುರುಪ್ರೀತ್ ಸಿಂಗ್ ಎಂಬವರ ಮೃತದೇಹವನ್ನು ಮಾರ್ಚ್ 9 ರಂದು ಹೊರತೆಗೆಯಲಾಗಿದೆ. ಇದೀಗ ಒಂದು ತಿಂಗಳು ಬಳಿಕ ಎರಡನೇ ಶವ ಪತ್ತೆಯಾಗಿದೆ. ರಕ್ಷಣಾ ಕಾರ್ಯಾಚರಣೆ ಈಗಲೂ ಮುಂದುವರಿದಿದ್ದು, ಉಳಿದ ಆರು ಕಾರ್ಮಿಕರ ಭವಿಷ್ಯ ಅನಿಶ್ಚಿತವಾಗಿಯೇ ಉಳಿದಿದೆ.
ದುರಂತ ಸಂಭವಿಸಿ 32ನೇ ದಿನವಾದ ಇಂದೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ರಕ್ಷಣಾ ತಂಡಗಳು ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಅವಿಶ್ರಾಂತವಾಗಿ ಶ್ರಮಿಸುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಂದು ಪತ್ತೆಯಾಗಿರುವ ಮೃತ ದೇಹವನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದು, ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಿಲ್ಲ.
ಮುಂದಿನ ದಿನಗಳಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಗತಿ ಸಾಧಿಸುವ ಭರವಸೆಯನ್ನು ಅಧಿಕಾರಿಗಳು ಹೊಂದಿದ್ದಾರೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಎಸ್‌ಸಿಸಿಎಲ್, ಅನ್ವಿ ರೊಬೊಟಿಕ್ಸ್ ಮತ್ತು ಇತರ ತಂಡಗಳು ಸೇರಿದಂತೆ ಬಹು ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ.
ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ರೈಲಿನಿಂದ ಜಿಗಿದ ಮಹಿಳೆ


