ಇತ್ತೀಚೆಗೆ ವಿವಾದಕ್ಕೆ ಸಿಲುಕಿರುವ ಸ್ಟಾಂಡ್‌ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಅವರು ಅಧಿಕಾರಿಗಳ ಮುಂದೆ ಹಾಜರಾಗಲು ಒಂದು ವಾರದ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ, ಅವರ ಮನವಿಯನ್ನು ಮುಂಬೈ ಪೊಲೀಸರು ತಿರಸ್ಕರಿಸಿದ್ದಾರೆ.
ಕಮ್ರಾ ಅವರ ವಕೀಲರು ಮುಂಬೈನ ಖಾರ್ ಪೊಲೀಸ್ ಠಾಣೆಗೆ ವೈಯಕ್ತಿಕವಾಗಿ ಮೇಲ್ಮನವಿ ಹಾಗೂ ಉತ್ತರ ಸಲ್ಲಿಸಿದರು. ಆದರೂ, ಪೊಲೀಸರು ಅವರ ವಿನಂತಿಯನ್ನು ತಿರಸ್ಕರಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 35 ರ ಅಡಿಯಲ್ಲಿ ಖಾರ್ ಪೊಲೀಸರು ಇಂದು ಕುನಾಲ್ ಕಮ್ರಾ ಅವರಿಗೆ ಎರಡನೇ ಸಮನ್ಸ್ ಜಾರಿ ಮಾಡಲಿದ್ದಾರೆ.
ಇದಕ್ಕೂ ಮೊದಲು, ಮುಂಬೈ ಪೊಲೀಸರು ಮಂಗಳವಾರ ತನಿಖಾ ಅಧಿಕಾರಿಯ ಮುಂದೆ ಹಾಜರಾಗುವಂತೆ ಸ್ಟ್ಯಾಂಡ್-ಅಪ್ ಕಲಾವಿದರಿಗೆ ಸಮನ್ಸ್ ಕಳುಹಿಸಿದ್ದರು.
ಸ್ಟ್ಯಾಂಡ್-ಅಪ್ ಹಾಸ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಕಮ್ರಾ ಅವರ ಹೇಳಿಕೆಗಳಿಗಾಗಿ ಎಂಐಡಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದರು. ನಂತರ. ಅದನ್ನು ಹೆಚ್ಚಿನ ತನಿಖೆಗಾಗಿ ಖಾರ್ ಪೊಲೀಸರಿಗೆ ವರ್ಗಾಯಿಸಲಾಯಿತು.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಗುರಿಯಾಗಿರಿಸಿಕೊಂಡು ಕಮ್ರಾ ತಮ್ಮ ವಿವಾದಾತ್ಮಕ ‘ಗದ್ದರ್’ (ದೇಶದ್ರೋಹಿ) ಜೋಕ್‌ನೊಂದಿಗೆ ರಾಜಕೀಯ ಬಿರುಗಾಳಿಯನ್ನು ಹುಟ್ಟುಹಾಕಿದರು.
ಸ್ಟ್ಯಾಂಡ್-ಅಪ್ ಪ್ರದರ್ಶನದಲ್ಲಿ ಕಮ್ರಾ ಅವರ ಹೇಳಿಕೆಯನ್ನು ಹಲವಾರು ರಾಜಕೀಯ ನಾಯಕರು ಖಂಡಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಆದರೂ, ಮಂಗಳವಾರ ಕಮ್ರಾ ಅವರು ಮುಂಬೈನ ದಿ ಹ್ಯಾಬಿಟ್ಯಾಟ್ ಕಾಮಿಡಿ ಕ್ಲಬ್ ಅನ್ನು ಧ್ವಂಸ ಮಾಡಿದ್ದಕ್ಕಾಗಿ ಶಿವಸೇನಾ ಕಾರ್ಯಕರ್ತರನ್ನು ಅಪಹಾಸ್ಯ ಮಾಡಲು ಹೊಸ ವೀಡಿಯೊವನ್ನು ಹಂಚಿಕೊಂಡರು, ಅಲ್ಲಿ ಅವರು ಈ ಹಿಂದೆ ಪ್ರದರ್ಶನ ನೀಡಿದ್ದರು.
ಉಪಮುಖ್ಯಮಂತ್ರಿ ಅಜಿತ್ ಪವಾರ್ ಮಾತನಾಡಿ, “ನಮ್ಮ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸರ್ಕಾರದ ಪರವಾಗಿ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ನಮ್ಮ ಮುಖ್ಯಮಂತ್ರಿ ಹೇಳಿದ್ದಾರೆ” ಎಂದರು.
ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಅವರು ಏಕನಾಥ್ ಶಿಂಧೆ ವಿರುದ್ಧ ಮಾಡಿದ ಆಪಾದಿತ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರೋಧ ವ್ಯಕ್ತಪಡಿಸಿದ್ದಾರೆ. ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, “ನಾವು ಹಾಸ್ಯ ಮತ್ತು ವಿಡಂಬನೆಯನ್ನು ಪ್ರಶಂಸಿಸುತ್ತೇವೆ. ನಾವು ರಾಜಕೀಯ ವಿಡಂಬನೆಯನ್ನು ಸ್ವೀಕರಿಸುತ್ತೇವೆ. ಆದರೆ, ಅದು ದಬ್ಬಾಳಿಕೆಗೆ ಕಾರಣವಾದರೆ ನಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸ್ವೀಕರಿಸುವುದಿಲ್ಲ” ಎಂದು ಹೇಳಿದರು.
“ಈ ಕಲಾವಿದ ಪ್ರಧಾನಿ, ಮುಖ್ಯ ನ್ಯಾಯಾಧೀಶರ ವಿರುದ್ಧ ಹೇಳಿಕೆಗಳನ್ನು ನೀಡುತ್ತಾರೆ; ಅವರು ವಿವಾದ ಸೃಷ್ಟಿಸುವ ಮೂಲಕ ಖ್ಯಾತಿ ಗಳಿಸಲು ಬಯಸುತ್ತಾರೆ. ಅವರು ಏಕನಾಥ್ ಶಿಂಧೆ ಅವರನ್ನು ಗುರಿಯಾಗಿಸಿಕೊಂಡು ಕಳಪೆ ಗುಣಮಟ್ಟದ ಹಾಸ್ಯ ಪ್ರದರ್ಶಿಸಿದರು” ಎಂದು ಮುಖ್ಯಮಂತ್ರಿ ಹೇಳಿದರು.
ಸ್ಕ್ರ್ಯಾಪಿಂಗ್ ನೀತಿಯಿಂದ ವಾಹನ ಬಿಡಿಭಾಗಗಳ ಬೆಲೆ ಶೇ.30 ರಷ್ಟು ಕಡಿಮೆಯಾಗುತ್ತದೆ: ಗಡ್ಕರಿ


