ಸೂರತ್-ಕೋಲ್ಕತ್ತಾ ವಿಮಾನದಲ್ಲಿದ್ದ ಪ್ರಯಾಣಿಕನೊಬ್ಬ ಗುರುವಾರ ಟೇಕ್ ಆಫ್ ಆಗುವ ಮುನ್ನ ವಿಮಾನದ ಶೌಚಾಲಯದೊಳಗೆ ಬೀಡಿ ಸೇದುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಅಶೋಕ್ ಬಿಶ್ವಾಸ್ ಎಂದು ಗುರುತಿಸಲಾದ ಪ್ರಯಾಣಿಕ ಪಶ್ಚಿಮ ಬಂಗಾಳದ ಮೂಲದವನಾಗಿದ್ದು, ಕೆಲಸೂರತ್-ಕೋಲ್ಕತ್ತಾ ವಿಮಾನಸದ ನಿಮಿತ್ತ ಗುಜರಾತ್‌ನ ನವಸಾರಿಯಲ್ಲಿ ವಾಸಿಸುತ್ತಿದ್ದಾರೆ.
ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ತಪಾಸಣೆಯ ಹೊರತಾಗಿಯೂ, ಬಿಶ್ವಾಸ್ ಬೀಡಿ ಮತ್ತು ಬೆಂಕಿಕಡ್ಡಿಯನ್ನು ವಿಮಾನಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ತಾಂತ್ರಿಕ ಸಮಸ್ಯೆಗಳಿಂದಾಗಿ ವಿಳಂಬವಾದ ಕಾರಣ, ವಿಮಾನವು ಇನ್ನೂ ಟೇಕ್ ಆಫ್ ಆಗಿರಲಿಲ್ಲ. ಆದರೆ, ಗಗನ ಸಖಿಯೊಬ್ಬರು ಶೌಚಾಲಯದಿಂದ ಹೊಗೆಯ ವಾಸನೆ ಬರುತ್ತಿರುವುದನ್ನು ಗಮನಿಸಿ, ಅವರು ತಕ್ಷಣ ವಿಮಾನ ನಿಲ್ದಾಣದ ಹಿರಿಯ ಕಾರ್ಯನಿರ್ವಾಹಕರಿಗೆ ಮಾಹಿತಿ ನೀಡಿದರು.
ಸಿಬ್ಬಂದಿ ದೂರಿನ ಬಳಿಕ ಪರಿಶೀಲಿಸಿದಾಗ, ಬಿಶ್ವಾಸ್ ಅವರ ಬ್ಯಾಗ್‌ನಲ್ಲಿ ಬೀಡಿ ಮತ್ತು ಬೆಂಕಿಕಡ್ಡಿ ಪೆಟ್ಟಿಗೆ ಕಂಡುಬಂದಿದೆ. ನಂತರ, ಪ್ರಯಾಣಿಕನ್ನು ವಿಮಾನದಿಂದ ಕೆಳಗಿಳಿಸಲಾಯಿತು. ವಿಮಾನಯಾನ ಸಂಸ್ಥೆಯು ಘಟನೆಯನ್ನು ಡುಮಸ್ ಪೊಲೀಸರಿಗೆ ವರದಿ ಮಾಡಿತು, ಅವರು ಪ್ರಯಾಣಿಕನನ್ನು ಬಂಧಿಸಿದರು.
ಪೊಲೀಸ್ ಅಧಿಕಾರಿಗಳ ಪ್ರಕಾರ, ವಿಮಾನವು ಸಂಜೆ 4.35 ಕ್ಕೆ ಹೊರಡಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ವಿಳಂಬವಾಯಿತು. ಸಂಜೆ 5.30 ರ ಸುಮಾರಿಗೆ, ಗಗನಸಖಿ ಹೊಗೆಯ ವಾಸನೆಯನ್ನು ಗಮನಿಸಿ ತನ್ನ ಹಿರಿಯ ಅಧಿಕಾರಿಗೆ ಮಾಹಿತಿ ನೀಡಿದರು. ಹೆಚ್ಚಿನ ತಪಾಸಣೆ ನಡೆಸಿದಾಗ, 15ಎ ನಲ್ಲಿ ಕುಳಿತಿದ್ದ ಬಿಶ್ವಾಸ್ ನಿಷೇಧಿತ ವಸ್ತುಗಳನ್ನು ಹೊತ್ತೊಯ್ಯುತ್ತಿರುವುದು ಕಂಡುಬಂದಿದೆ.
ಇತರ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡಿದ್ದಕ್ಕಾಗಿ ಪೊಲೀಸರು ಪ್ರಯಾಣಿಕನ ವಿರುದ್ಧ ಬಿಎನ್‌ಎಸ್ ಸೆಕ್ಷನ್ 125 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಮಾನಯಾನ ಸಂಸ್ಥೆಯಿಂದ ಯಾವುದೇ ಅಧಿಕೃತ ಹೇಳಿಕೆ ನೀಡಲಾಗಿಲ್ಲವಾದರೂ, ಅದರ ಹಿರಿಯ ಕಾರ್ಯನಿರ್ವಾಹಕರು ಅಧಿಕಾರಿಗಳಿಗೆ ಔಪಚಾರಿಕ ದೂರು ದಾಖಲಿಸಿದ್ದಾರೆ.
ಛತ್ತೀಸ್‌ಗಢ| ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 16 ನಕ್ಸಲರು ಸಾವು


