ಮುಂದಿನ ವಾರ ಸಂಸತ್ತಿನಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ 2025 ಅನ್ನು ಮಂಡಿಸುವ ಕೇಂದ್ರ ಸರ್ಕಾರದ ಉದ್ದೇಶವನ್ನು ಸೂಚಿಸುತ್ತಾ, ಗೃಹ ಸಚಿವ ಅಮಿತ್ ಶಾ ಅವರು ಈ ಮಸೂದೆಯನ್ನು ಸಂಸತ್ತಿನ ಪ್ರಸ್ತುತ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಶುಕ್ರವಾರ ಹೇಳಿದ್ದಾರೆ. ನಡೆಯುತ್ತಿರುವ ಅಧಿವೇಶನದಲ್ಲಿ
ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಮಸೂದೆಯನ್ನು ತೀವ್ರವಾಗಿ ವಿರೋಧಿಸುವುದಾಗಿ ಹೇಳಿರುವುದರಿಂದ ಮಸೂದೆಯ ಮಂಡನೆಯು ಸದನದಲ್ಲಿ ತೀವ್ರ ಸಂಘರ್ಷ ನಡೆಯುವ ನಿರೀಕ್ಷೆಯಿದೆ. ನಡೆಯುತ್ತಿರುವ ಅಧಿವೇಶನದಲ್ಲಿ
ಪ್ರಸ್ತುತ ಬಜೆಟ್ ಅಧಿವೇಶನ ಏಪ್ರಿಲ್ 4 ರಂದು ಮುಕ್ತಾಯಗೊಳ್ಳಲಿದ್ದರೂ, “ಈ ಅಧಿವೇಶನದೊಳಗೆ ನಾವು ವಕ್ಫ್ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುತ್ತೇವೆ” ಎಂದು ಅಮಿತ್ ಶಾ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಪ್ರತಿಪಾದಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಮಸೂದೆಯು ವಕ್ಫ್ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಹಲವಾರು ಮುಸ್ಲಿಂ ಸಂಘಟನೆಗಳ ಆರೋಪಿಸಿದ್ದು, ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ಅಮಿತ್ ಶಾ ಅವರು ಹೇಳಿಕೆ ನೀಡಿದ್ದಾರೆ.
ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ ಎಂದು ಹೇಳಿದ್ದು, “ಮಸೂದೆಯು ಸಂವಿಧಾನದ ವ್ಯಾಪ್ತಿಯಲ್ಲಿಲ್ಲ ಎಂದಾದರೆ, ಅದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದು” ಎಂದು ಹೇಳಿದ್ದಾರೆ.
ಪ್ರಸ್ತಾವಿತ ಮಸೂದೆಯ ಬಗ್ಗೆ ಇರುವ ಆತಂಕಗಳನ್ನು ಅಲ್ಲಗೆಳೆದ ಅವರು, “ವಿರೋಧ ಪಕ್ಷಗಳು ಮುಸ್ಲಿಮರನ್ನು ದಾರಿ ತಪ್ಪಿಸುತ್ತಿವೆ. ಮುಸ್ಲಿಮರ ಯಾವುದೇ ಹಕ್ಕುಗಳನ್ನು ಹತ್ತಿಕ್ಕಲಾಗುವುದಿಲ್ಲ. ವಕ್ಫ್ ಮಸೂದೆಯ ಮೂಲ ಕಾಯ್ದೆಯು ತುಷ್ಟೀಕರಣದ ರಾಜಕೀಯಕ್ಕೆ ಆದ್ಯತೆ ನೀಡಿ ಜಾರಿಗೆ ತರಲಾಗಿರುವುದರಿಂದ ಸರ್ಕಾರವು ಅಸ್ತಿತ್ವದಲ್ಲಿರುವ ಕಾನೂನಿಗೆ ತಿದ್ದುಪಡಿ ತರಬೇಕಾಯಿತು” ಎಂದು ಅಮಿತ್ ಶಾ ಹೇಳಿದ್ದಾರೆ.
‘ತುಷ್ಟೀಕರಣ’ದ ಕುರಿತು ವಿರೋಧ ಪಕ್ಷದ ಮೇಲೆ ದಾಳಿ ಮಾಡಿದ ಅಮಿತ್ ಶಾ, ವಕ್ಫ್ (ತಿದ್ದುಪಡಿ) ಮಸೂದೆಯು ಸಾಂವಿಧಾನಿಕವಾಗಿದ್ದು, ಆದರೆ ಕಾಂಗ್ರೆಸ್ ಪಕ್ಷವೂ ತನ್ನ ರಾಜಕೀಯ ಲಾಭಕ್ಕಾಗಿ ಕಾನೂನನ್ನು ತಿರುಚಿದೆ ಎಂದು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ಗಾಂಧಿ’ ಹೆಸರಿಟ್ಟಿರುವ ‘ಮನರೇಗಾ ಯೋಜನೆ’ ಮೋದಿ ಸರ್ಕಾರಕ್ಕೆ ಇಷ್ಟವಾಗುವುದಿಲ್ಲ: ಎಂ.ಕೆ. ಸ್ಟಾಲಿನ್
‘ಗಾಂಧಿ’ ಹೆಸರಿಟ್ಟಿರುವ ‘ಮನರೇಗಾ ಯೋಜನೆ’ ಮೋದಿ ಸರ್ಕಾರಕ್ಕೆ ಇಷ್ಟವಾಗುವುದಿಲ್ಲ: ಎಂ.ಕೆ. ಸ್ಟಾಲಿನ್

