ನೇಪಾಳದ ಕಠ್ಮಂಡುವಿನಲ್ಲಿ ಶುಕ್ರವಾರ ನೇಪಾಳಿ ಭದ್ರತಾ ಪಡೆಗಳು ಮತ್ತು ದೇಶದ ಈ ಹಿಂದಿನ ರಾಜಪ್ರಭುತ್ವದ ಬೆಂಬಲಿಗರ ನಡುವಿನ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಸುಮಾರು 45 ಜನರು ಗಾಯಗೊಂಡಿದ್ದಾರೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ. ದೇಶದಲ್ಲಿ ಮತ್ತೆ ರಾಜಪ್ರಭುತ್ವವನ್ನು ಪುನಃಸ್ಥಾಪಿಸಬೇಕೆಂದು ಒತ್ತಾಯಿಸಿ ದೇಶದ ಮಾಜಿ ರಾಜ ಜ್ಞಾನೇಂದ್ರ ಶಾ ಅವರ ಬೆಂಬಲಿಗರು ಈ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ನೇಪಾಳ
2008 ರಲ್ಲಿ ನೇಪಾಳದಲ್ಲಿ ರಾಜಪ್ರಭುತ್ವವನ್ನು ರದ್ದುಗೊಳಿಸಲಾಗಿತ್ತು. ಪ್ರತಿಭಟನೆಯ ಸಂದರ್ಭದಲ್ಲಿ ರಾಜಧಾನಿಯ ಟಿಂಕುನೆ ಪ್ರದೇಶದಲ್ಲಿ ಘರ್ಷಣೆಗಳು ಭುಗಿಲೆದ್ದವು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಪ್ರತಿಭಟನಾಕಾರರು ನಿಷೇಧಾಜ್ಞೆಗಳನ್ನು ವಿಧಿಸಲಾಗಿದ್ದ ಸಂಸತ್ತಿನ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದಾಗ ಪೊಲೀಸರು ಜಲಫಿರಂಗಿಗಳನ್ನು ಬಳಸಿದರು ಮತ್ತು ಅಶ್ರುವಾಯು ಶೆಲ್‌ಗಳು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಘರ್ಷಣೆಯಲ್ಲಿ ಹಲವಾರು ಕಟ್ಟಡಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಯಿತು ಎಂದು ಪೊಲೀಸ್ ಉಪ ಮಹಾನಿರ್ದೇಶಕ ದಿನೇಶ್ ಕುಮಾರ್ ಆಚಾರ್ಯ ಹೇಳಿದ್ದಾರೆ ಎಂದು ಕಠ್ಮಂಡು ಪೋಸ್ಟ್ ಉಲ್ಲೇಖಿಸಿದೆ. ಹಿಂಸಾಚಾರದಲ್ಲಿ ಸಾವನ್ನಪ್ಪಿದವರಲ್ಲಿ ಒಬ್ಬರನ್ನು ಕಠ್ಮಂಡುವಿನ 29 ವರ್ಷದ ಸಬಿನ್ ಮಹಾರ್ಜನ್ ಎಂದು ಗುರುತಿಸಲಾಗಿದೆ ಎಂದು ದೇಶದ ಗೃಹ ಸಚಿವಾಲಯ ತಿಳಿಸಿದೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ಮತ್ತೊಬ್ಬ ಮೃತನನ್ನು ಪ್ರತಿಭಟನೆಯನ್ನು ಚಿತ್ರೀಕರಿಸುತ್ತಿದ್ದ ಅವೆನ್ಯೂಸ್ ಟೆಲಿವಿಷನ್‌ನ ಛಾಯಾಗ್ರಾಹಕ ಸುರೇಶ್ ರಜಕ್ ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಸುಮಾರು ಅರ್ಧದಷ್ಟು ಜನರು ಪೊಲೀಸ್ ಸಿಬ್ಬಂದಿ ಎಂದು ಪಿಟಿಐ ವರದಿ ಮಾಡಿದೆ. ನೇಪಾಳ
#WATCH | The Nepal Army is being deployed on the streets of Kathmandu following a clash between pro-monarchists and Police today.
The protesters are demanding the restoration of the monarchy. Curfew has been imposed in Tinkune, Sinamangal and Koteshwor areas of Kathmandu. pic.twitter.com/4GxEB2qcH2
— ANI (@ANI) March 28, 2025
ಹಿಂಸಾಚಾರದ ನಂತರ ಕಠ್ಮಂಡುವಿನಲ್ಲಿ ನೇಪಾಳಿ ಸೈನ್ಯವನ್ನು ನಿಯೋಜಿಸಲಾಗಿದೆ. ಕೋಟೆಶ್ವರ್ ಮತ್ತು ಟಿಂಕುನೆ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಜನರ ಸಂಚಾರವನ್ನು ನಿರ್ಬಂಧಿಸುವ ಮೂಲಕ ಜಿಲ್ಲಾಡಳಿತವು ಐದು ಗಂಟೆಗಳ ಕರ್ಫ್ಯೂ ವಿಧಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
“ಇಂತಹ ಹಿಂಸಾಚಾರದ ಕೃತ್ಯಗಳಿಗೆ ಸಂಘಟಕರೇ ಜವಾಬ್ದಾರರು” ಎಂದು ದೇಶದ ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ ಎಂದು ಪಿಟಿಐ ಉಲ್ಲೇಖಿಸಿದೆ. ಕಾನೂನನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು ಅಶಾಂತಿಯ ಬಗ್ಗೆ ಚರ್ಚಿಸಲು ಕ್ಯಾಬಿನೆಟ್‌ನ ತುರ್ತು ಸಭೆಯನ್ನು ಕರೆದಿದ್ದಾರೆ.
2008 ರಲ್ಲಿ, ನೇಪಾಳವು ತನ್ನ 240 ವರ್ಷಗಳಷ್ಟು ಹಳೆಯದಾದ ರಾಜಪ್ರಭುತ್ವವನ್ನು ರದ್ದುಗೊಳಿಸಿ ಜಾತ್ಯತೀತ, ಫೆಡರಲ್ ಮತ್ತು ಪ್ರಜಾಪ್ರಭುತ್ವ ಗಣರಾಜ್ಯವಾಗಿ ಪರಿವರ್ತನೆಗೊಂಡಿತು. ಫೆಬ್ರವರಿ 19 ರಂದು ಪ್ರಜಾಪ್ರಭುತ್ವ ದಿನದಂದು ವಿಡಿಯೋ ಸಂದೇಶದಲ್ಲಿ ಮಾತನಾಡಿದ್ದ ಮಾಜಿ ರಾಜ ಜ್ಞಾನೇಂದ್ರ ಶಾ ರಾಜಪ್ರಭುತ್ವ ಮರುಸ್ಥಾಪನೆಗೆ ಸಾರ್ವಜನಿಕ ಬೆಂಬಲಕ್ಕಾಗಿ ಮನವಿ ಮಾಡಿದ್ದರು. ಇದರ ನಂತರ, ಇತ್ತೀಚಿನ ವಾರಗಳಲ್ಲಿ ರಾಜಪ್ರಭುತ್ವದ ಪುನಃಸ್ಥಾಪನೆಗೆ ಹೊಸದಾಗಿ ಬೇಡಿಕೆಗಳು ಬಂದಿವೆ ಎಂದು ಪಿಟಿಐ ವರದಿ ಮಾಡಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಆರ್‌ಜಿ ಕರ್ ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿಲ್ಲ: ನ್ಯಾಯಾಲಯಕ್ಕೆ ಸಿಬಿಐ ವರ
ಆರ್‌ಜಿ ಕರ್ ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿಲ್ಲ: ನ್ಯಾಯಾಲಯಕ್ಕೆ ಸಿಬಿಐ ವರದಿ

