ಉತ್ತರ ಪ್ರದೇಶದ ಅಲಿಗಢ್‌ನ ಸ್ಥಳೀಯ ಮಸೀದಿಯೊಂದರಲ್ಲಿ ಸ್ವಯಂಪ್ರೇರಿತ ನಮಾಜ್ ಮಾಡಿದ್ದ ಹಿಂದೂ ವ್ಯಾಪಾರಿಯೊಬ್ಬರ ನಡೆಗೆ ಬಿಜೆಪಿಯ ಬಲಪಂಥೀಯ ದುಷ್ಕರ್ಮಿಗಳ ಗುಂಪು ವಿರೋಧ ವ್ಯಕ್ತಪಡಿದೆ. ನಮಾಜ್ ಮಾಡಿರುವ ವ್ಯಾಪಾರಿಯು ಔಪಚಾರಿಕವಾಗಿ ”ಶುದ್ದೀಕರಣ” ಆಗಬೇಕು ಎಂದು ದುಷ್ಕರ್ಮಿಗಳ ಸಂಘಟನೆ ಒತ್ತಾಯಿಸಿವೆ. ಮಸೀದಿಯಲ್ಲಿ ನಮಾಜ್
ಹಲವಾರು ಸಮುದಾಯಗಳು ವಾಸಿಸುವ ಮಾಮೂ ಭಂಜಾ ಪ್ರದೇಶದವರಾಗಿರುವ ಸುನಿಲ್ ರಜನಿ ಅವರು ಗುರುವಾರ ಸಂಜೆ ತಮ್ಮ ಮುಸ್ಲಿಂ ಗೆಳೆಯರೊಂದಿಗೆ ಮಸೀದಿಯಲ್ಲಿ ನಮಾಜ್ ಮಾಡಿದ್ದರು. ಅವರ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
दुकान का व्यापार बढ़े इसलिए हिन्दू व्यापारी ने पढ़ी मस्जिद में नमाज
अलीगढ़ में इलेक्ट्रॉनिक कारोबारी सुनील राजानी ने अलविदा जुमे पर मस्जिद में जाकर नमाज पढ़ी। Video वायरल होते ही बाकी हिंदू व्यापारी उसे लेकर मंदिर में पहुंच गए। वहां शुद्धिकरण कराया। *व्यापारी सुनील का कहना था कि… pic.twitter.com/PZksuSAQju
— UP POLICE NEWS_5 (@UPPolice_News5) March 29, 2025
ಅದಾಗ್ಯೂ, ಬಿಜೆಪಿಯ ಯುವ ಮೋರ್ಚಾ(ಬಿಜೆವೈಎಂ)ದ ಸ್ಥಳೀಯ ನಾಯಕ ಮೋನು ಅಗರ್ವಾಲ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, “ರಜನಿ ಅವರ ನಡೆಯು ಧರ್ಮಕ್ಕೆ ಅಪಚಾರ ಎಸಗುವ ಕೃತ್ಯ ಎಂದು ಪರಿಗಣಿಸಲಾಗಿದೆ. ಅವರು ಈ ಬಗ್ಗೆ ಸಾರ್ವಜನಿಕ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಅಷ್ಟೆ ಅಲ್ಲದೆ, ರಜನಿ ಅವರು ದೇವಸ್ಥಾನದಲ್ಲಿ “ಶುದ್ಧಿಕರಣ” ಕೂಡಾ ನಡೆಸಬೇಕೆಂದು ಮೋನು ಅಗರ್ವಾಲ್ ಒತ್ತಾಯಿಸಿದ್ದಾರೆ. ಮಸೀದಿಯಲ್ಲಿ ನಮಾಜ್
ಅಷ್ಟೆ ಅಲ್ಲದೆ, ರಜನಿ ಅವರು ಮಸೀದಿಯಿಂದ ಹೊರಬಂದ ನಂತರ ಕೆಲವು ಬಿಜೆಪಿ ಪರ ಬಲಪಂಥೀಯ ದುಷ್ಕರ್ಮಿಗಳ ಸಂಘಟನೆ ಸದಸ್ಯರು ಅವರ ನಡೆಯು ”ಪ್ರಚೋದನೆ” ಉಂಟು ಮಾಡುತ್ತದೆ ಎಂದು ಆರೋಪಿಸಿದ್ದು, ಅವರಿಗೆ ‘ಗಂಗಾಜಲ’ ಸಿಂಪಡಿಸುವ ಮೂಲಕ ತಕ್ಷಣದ “ಸ್ವಯಂ ಶುದ್ಧೀಕರಣ”ಕ್ಕೆ ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಅದಾಗ್ಯೂ, ಈ ವಿಷಯದ ಬಗ್ಗೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ವರದಿಗಳು ಉಲ್ಲೇಖಿವೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ನೇಪಾಳ | ರಾಜಪ್ರಭುತ್ವ ಮರುಸ್ಥಾಪನೆಗಾಗಿ ಪ್ರತಿಭಟನೆ; ಇಬ್ಬರು ಸಾವು, 45 ಜನರಿಗೆ ಗಾಯ
ನೇಪಾಳ | ರಾಜಪ್ರಭುತ್ವ ಮರುಸ್ಥಾಪನೆಗಾಗಿ ಪ್ರತಿಭಟನೆ; ಇಬ್ಬರು ಸಾವು, 45 ಜನರಿಗೆ ಗಾಯ

