ಪರಿಶಿಷ್ಟ ಜಾತಿಗೆ ಸೇರಿದ ಪಿಜ್ಜಾ ಅಂಗಡಿ ಕೆಲಸಗಾರನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಡಿಎಂಕೆ ಕಾರ್ಯಕರ್ತನ ಮಗನನ್ನು ತಿರುನಲ್ವೇಲಿ ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಜೊತೆಗೆ, ಆತನ 16 ವರ್ಷದ ಅಪ್ರಾಪ್ತ ಸ್ನೇಹಿತನನ್ನು ವಶಕ್ಕೆ ಪಡೆದಿದ್ದಾರೆ.
ಪಳಯಂಕೊಟ್ಟೈನ ಎ ಆಲ್ವಿನ್ (22) ಎಂದು ಗುರುತಿಸಲಾದ ಆರೋಪಿಯ ವಾಹನವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಲಿಪಶು ನಾರಾಯಣನ್ ಅವರ ದೂರಿನ ಆಧಾರದ ಮೇಲೆ, ಪಳಯಂಕೊಟ್ಟೈ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಬಿಟ್ಟುಬಿಡಲಾಗಿದೆ. ಆಲ್ವಿನ್ ವಿರುದ್ಧ ಕ್ರಿಮಿನಲ್ ಪ್ರಕರಣಗಳ ಇತಿಹಾಸವಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.
ನಗರದಲ್ಲಿ ಡಿಎಂಕೆಯ ಪ್ರದೇಶ ಕಾರ್ಯದರ್ಶಿ ಆಂಟನ್ ಚೆಲ್ಲಾದುರೈ, ಆಲ್ವಿನ್ ಅವರ ತಂದೆ. ವನ್ನಾರಪೆಟ್ಟೈನಲ್ಲಿರುವ ಖಾಸಗಿ ಪಿಜ್ಜಾ ಔಟ್ಲೆಟ್‌ಗೆ ಭೇಟಿ ನೀಡಿದಾಗ ಆರೋಪಿ ಮತ್ತು ಆತನ 16 ವರ್ಷದ ಸ್ನೇಹಿತ ಕುಡಿದಿದ್ದರು ಎನ್ನಲಾಗಿದೆ. ಆರ್ಡರ್ ನೀಡಿದ ನಂತರ, ಸಿಬ್ಬಂದಿ ಪಿಜ್ಜಾವನ್ನು ನೇರವಾಗಿ ತಮ್ಮ ವಾಹನಕ್ಕೆ ತರುವಂತೆ ಆಲ್ವಿನ್ ಒತ್ತಾಯಿಸಿದರು. ಸಿಬ್ಬಂದಿ ಆರ್ಡರ್ ತಲುಪಿಸಿದಾಗ, ತಡವಾಗಿದ್ದಕ್ಕೆ ಆತ ಆಕ್ರೋಶಗೊಂಡ ಎನ್ನಲಾಗಿದೆ.
ಆರ್ಡರ್ ನೀಡಿದ ನಂತರವೇ ಆಹಾರ ತಯಾರಿಕೆ ಪ್ರಾರಂಭವಾಗುತ್ತದೆ ಎಂದು ನೌಕರ ವಿವರಿಸಿದ್ದಾರೆ. ಇದು ಆಲ್ವಿನ್‌ನನ್ನು ಮತ್ತಷ್ಟು ಕೆರಳಿಸಿತು. ಕೋಪದ ಭರದಲ್ಲಿ, ಆಲ್ವಿನ್ ಮತ್ತು ಅಪ್ರಾಪ್ತ ವಯಸ್ಕ ಪಿಜ್ಜಾ ಔಟ್ಲೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಎಸ್‌ಸಿ ಯುವಕ ನಾರಾಯಣನ್ ಮೇಲೆ ಹಲ್ಲೆ ನಡೆಸಿದ್ದಾರೆ.
ನಾರಾಯಣನ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ತಿರುನಲ್ವೇಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕನ್ಯತ್ವ ಪರೀಕ್ಷೆಗೆ ಒತ್ತಾಯಿಸುವುದು ಮಹಿಳೆಯ ಘನತೆಯ ಹಕ್ಕನ್ನು ಉಲ್ಲಂಘಿಸುತ್ತದೆ: ಛತ್ತೀಸ್‌ಗಢ ಹೈಕೋರ್ಟ್


