ಬೆಂಗಳೂರಿನ ‘ನಮ್ಮ ಮೆಟ್ರೋ’ ದರ ಏರಿಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಆಟೋಮೊಬೈಲ್ ಎಂಜಿನಿಯರ್ ಸನತ್ ಕುಮಾರ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ. ಬೆಂಗಳೂರು ಮೆಟ್ರೋ
ಅರ್ಜಿಯಲ್ಲಿನ ಖಂಡನೆಗಳನ್ನು ಪರಿಶೀಲಿಸಿ ಅರ್ಜಿಯನ್ನು ಪರಿಗಣಿಸಿದ್ದ ಪೀಠವು, ಪ್ರಸ್ತುತ ದರ ಏರಿಕೆಯ ವಿಷಯಕ್ಕೆ ಸಂಬಂಧಿಸಿದಂತೆ, ಕಾಯ್ದೆಯ ಸೆಕ್ಷನ್ 33 ರ ಅಡಿಯಲ್ಲಿ ಮೆಟ್ರೋ ಆಡಳಿತವು ಕಾಲಕಾಲಕ್ಕೆ ದರವನ್ನು ನಿಗದಿಪಡಿಸಲು ಅಧಿಕಾರ ಹೊಂದಿದೆ. ಇದನ್ನು ದರ ನಿಗದಿ ಸಮಿತಿಯ ಶಿಫಾರಸ್ಸಿನ ಮೇಲೆ ಮಾಡಲಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ. ಬೆಂಗಳೂರು ಮೆಟ್ರೋ
“ಮೆಟ್ರೋ ರೈಲು ಕಾರ್ಯಾಚರಣೆಗಾಗಿ ರೈಲ್ವೆ ಆಡಳಿತದ ದರ ನಿಗದಿಯು ಶಾಸನಬದ್ಧ ಪ್ರಕ್ರಿಯೆಯಾಗಿದೆ. ದರ ನಿಗದಿ ಸಮಿತಿಗೆ ಇದರ ಕಾರ್ಯವನ್ನು ವಹಿಸಲಾಗಿದೆ. ದರ ನಿಗದಿಯು ತಜ್ಞರ ಪ್ರಕ್ರಿಯೆಯಾಗಿದೆ. ಅಂತಹ ಅಂಶಗಳನ್ನು ಪರಿಶೀಲಿಸುವುದು ನ್ಯಾಯಾಲಯದ ಕೆಲಸವಲ್ಲ. ಅದನ್ನು ದರ ನಿಗದಿ ಸಮಿತಿಯಿಂದ ಪರಿಗಣಿಸುವುದು ಉತ್ತಮ. ಶಾಸನಬದ್ಧ ಉಲ್ಲಂಘನೆಯನ್ನು ಸೂಚಿಸದ ಹೊರತು ನ್ಯಾಯಾಲಯವು ಅಂತಹ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ” ಎಂದು ಪೀಠವೂ ಹೇಳಿದೆ.
ಅರ್ಜಿದಾರರ ಪರ ವಾದಿಸಿದ ವಕೀಲರು, ದರ ಹೆಚ್ಚಳವನ್ನು ಶೇಕಡಾ 71 ರಷ್ಟು ಹೆಚ್ಚಿಸಲಾಗಿದೆ. ಇದು ಪ್ರಾಮಿಸರಿ ಎಸ್ಟೋಪೆಲ್ ತತ್ವಗಳು ಮತ್ತು ಕಾನೂನುಬದ್ಧ ನಿರೀಕ್ಷೆಗೆ ವಿರುದ್ಧವಾಗಿದೆ ಎಂದು ವಾದಿಸಿದರು. ಇದಲ್ಲದೆ ಅವರು (ಬೆಂಗಳೂರು ಮೆಟ್ರೋ ರೈಲ್ವೆ ನಿಗಮ) ನಿಲ್ದಾಣವಾರು ದರಗಳನ್ನು ನಿಗದಿಪಡಿಸಬೇಕಿತ್ತು. ಆದರೆ ಅವರು ಅದರ ಬದಲಿಗೆ ಅದನ್ನು ಹಂತವಾರು ನಿಗದಿಪಡಿಸಿದ್ದಾರೆ. ಇದರಲ್ಲಿ ಒಂದು ಹಂತದಲ್ಲಿ 2 ರಿಂದ 3 ನಿಲ್ದಾಣಗಳನ್ನು ಒಳಗೊಂಡಿದೆ ಎಂದು ವಾದಿಸಲಾಯಿತು.
“ಪ್ರಾಮಿಸರಿ ಎಸ್ಟೊಪೆಲ್ ಉಲ್ಲಂಘನೆ ಅಥವಾ ಕಾನೂನುಬದ್ಧ ನಿರೀಕ್ಷೆಯ ನಿರಾಕರಣೆಯ ಬಗ್ಗೆ ಅರ್ಜಿದಾರರ ವಾದವನ್ನು ತಿರಸ್ಕರಿಸಿದ ನ್ಯಾಯಾಲಯವು,” ಯಾವುದೇ ಸಮಯದಲ್ಲೂ ದರವನ್ನು ಹೆಚ್ಚಿಸುವುದಿಲ್ಲ ಎಂದು ಯಾವುದೇ ಭರವಸೆ ನೀಡಲಾಗಿಲ್ಲ. ಕಾನೂನುಬದ್ಧ ನಿರೀಕ್ಷೆಯ ಪರಿಕಲ್ಪನೆಯನ್ನು ಇದರಲ್ಲಿ ಅನ್ವಯಿಸಲಾಗುವುದಿಲ್ಲ. ಇದರ ಸಂದರ್ಭಗಳು ಕಾನೂನುಬದ್ಧ ನಿರೀಕ್ಷೆಯ ಉಲ್ಲಂಘನೆಯಾಗಿದೆ ಎಂದು ಸೂಚಿಸುವುದಿಲ್ಲ ಎಂದು ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ದೆಹಲಿ ಗಲಭೆ ಪ್ರಕರಣ | ಬಿಜೆಪಿ ನಾಯಕ ಕಪಿಲ್ ಮಿಶ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ
ದೆಹಲಿ ಗಲಭೆ ಪ್ರಕರಣ | ಬಿಜೆಪಿ ನಾಯಕ ಕಪಿಲ್ ಮಿಶ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

