ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿ ಕೆಲವು ಜನರು ಆತಂಕಕ್ಕೀಡಾಗಿದ್ದು, ಇದರಿಂದಾಗಿ ಅಧಿಕಾರಿಗಳು ಘಟಕದಿಂದ ಕಾರ್ಮಿಕರನ್ನು ಸ್ಥಳಾಂತರಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 10.30 ರ ಸುಮಾರಿಗೆ ಜಿಲ್ಲೆಯ ಜಾವೋರಾ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು, ಅಗ್ನಿಶಾಮಕ ದಳ ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸೋರಿಕೆಯನ್ನು ನಿಲ್ಲಿಸಿದ್ದಾರೆ ಎಂದು ಅವರು ಹೇಳಿದರು.
ಜಾವೋರಾ ಪಟ್ಟಣದ ಪೋರ್ವಾಲ್ ಐಸ್ ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆ ಸಂಭವಿಸಿದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ತ್ರಿಲೋಚನ್ ಗೌಡ್ ಹೇಳಿದ್ದಾರೆ.
“ಮೊದಲ ನೋಟಕ್ಕೆ, ಇದು ಅಮೋನಿಯಾ ಸೋರಿಕೆಯಾಗಿದೆ. ಪೊಲೀಸರು ಮತ್ತು ಸ್ಥಳೀಯ ಆಡಳಿತವು ತಕ್ಷಣವೇ ನೀರನ್ನು ಸಿಂಪಡಿಸಿ, ಅನಿಲ ಸೋರಿಕೆಯನ್ನು ನಿಲ್ಲಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು” ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಹೇಳಿದರು. ಬಾಧಿತ ಕೆಲ ಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂದರು.
ಕಾರ್ಖಾನೆಯ ಪಕ್ಕದಲ್ಲಿ ಪೊಲೀಸ್ ಮಾರ್ಗವಿದೆ. ರಾತ್ರಿ ಗಸ್ತಿನಲ್ಲಿದ್ದ ಕೆಲವು ಪೊಲೀಸ್ ಸಿಬ್ಬಂದಿ ಮೊದಲು ಅನಿಲ ಸೋರಿಕೆಯಾಗಿದ ಎಂಬುದನ್ನು ಕಂಡುಕೊಂಡಿದ್ದಾರೆ. ಅನಿಲ ಸೋರಿಕೆಯನ್ನು ತಕ್ಷಣವೇ ಪತ್ತೆಹಚ್ಚಲಾಯಿತು ಮತ್ತು ಅದು ದೊಡ್ಡ ಘಟನೆಯಾಗಿರಲಿಲ್ಲ ಎಂದು ಗೌಡ್ ಹೇಳಿದರು.
ಕಾರ್ಖಾನೆಯ ಕಾರ್ಮಿಕರನ್ನು ತಕ್ಷಣವೇ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದರು.
ಅಗ್ನಿಶಾಮಕ ದಳವು ನೀರನ್ನು ಸಿಂಪಡಿಸುವ ಮೂಲಕ ಅನಿಲ ಸೋರಿಕೆಯನ್ನು ತಕ್ಷಣವೇ ನಿಯಂತ್ರಿಸಿತು, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎಸ್‌ಡಿಎಂ ಹೇಳಿದರು.
ತಮಿಳುನಾಡು ಸರ್ಕಾರ VS ರಾಜ್ಯಪಾಲ: ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದೇನು?


