ಶೈವ, ವೈಷ್ಣವ ಪಂಥಗಳು ಮತ್ತು ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ವಿವಾದಕ್ಕೀಡಾಗಿರುವ ಹಿರಿಯ ನಾಯಕ ಹಾಗೂ ತಮಿಳುನಾಡು ಸಚಿವ ಕೆ. ಪೊನ್ಮುಡಿ ಅವರನ್ನು ಡಿಎಂಕೆ ಪಕ್ಷದ ಪ್ರಮುಖ ಹುದ್ದೆಯಿಂದ ಶುಕ್ರವಾರ (ಏ.11) ವಜಾಗೊಳಿಸಲಾಗಿದೆ.
ಪೊನ್ಮುಡಿ ಅವರನ್ನು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಡಿಎಂಕೆ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಆದೇಶ ಹೊರಡಿಸಿದ್ದಾರೆ. ಆದರೆ, ಯಾವ ಕಾರಣಕ್ಕೆ ವಜಾಗೊಳಿಸಲಾಗಿದೆ ಎಂದು ಕಾರಣ ತಿಳಿಸಿಲ್ಲ.
தலைமைக் கழக அறிவிப்பு!
கழக துணைப் பொதுச்செயலாளர் க.பொன்முடி அவர்கள் அவர் வகித்து வரும் துணைப் பொதுச்செயலாளர் பொறுப்பிலிருந்து விடுவிக்கப்படுகிறார். pic.twitter.com/A8OkV7CwDE
— DMK (@arivalayam) April 11, 2025
ಪೊನ್ಮುಡಿ ಅವರ ಹೇಳಿಕೆಯನ್ನು ಡಿಎಂಕೆ ನಾಯಕಿ ಹಾಗೂ ಸಂಸದೆ ಕನಿಮೋಳಿ ಖಂಡಿಸಿದ್ದರು. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ಸಂಬಂಧ ಪೋಸ್ಟ್ ಹಾಕಿದ್ದ ಅವರು, “ಸಚಿವ ಪೊನ್ಮುಡಿ ಅವರ ಹೇಳಿಕೆ ಸ್ವೀಕಾರಾರ್ಹವಲ್ಲ. ಪೊನ್ಮುಡಿ ಯಾವುದೇ ಕಾರಣಕ್ಕಾಗಿ ಮಾತನಾಡಿದ್ದರೂ, ಅಂತಹ ಅಸಭ್ಯ ಪದಗಳು ಖಂಡನೀಯ” ಎಂದು ಬರೆದುಕೊಂಡಿದ್ದರು.
அமைச்சர் பொன்முடி அவர்களின் சமீபத்திய பேச்சு ஏற்றுக்கொள்ள முடியாதது. எந்த காரணத்திற்காகப் பேசப் பட்டிருந்தாலும் இப்படிப்பட்ட கொச்சையான பேச்சுகள் கண்டிக்கத்தக்கது.
— Kanimozhi (கனிமொழி) (@KanimozhiDMK) April 11, 2025
ಸಚಿವ ಪೊನ್ಮುಡಿ ಹೇಳಿಕೆಯನ್ನು ತಮಿಳುನಾಡು ಬಿಜೆಪಿ ಖಂಡಿಸಿತ್ತು. ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿತ್ತು.
“ಸಚಿವ ಪೊನ್ಮುಡಿ ತಮ್ಮ ಹುದ್ದೆಯಲ್ಲಿ ಮುಂದುವರಿಯುತ್ತಿರುವುದು ನಾಚಿಕೆಗೇಡಿನ ಸಂಗತಿ.. ಸಿಎಂ ಸ್ಟಾಲಿನ್, ಪೊನ್ಮುಡಿ ಅವರ ಬಂಧನಕ್ಕೆ ಆದೇಶಿಸುತ್ತೀರಾ?” ಎಂದು ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷ ನಾರಾಯಣನ್ ತಿರುಪತಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದರು.
அமைச்சர் பொன்முடி இன்னும் பதவியில் நீடிப்பது வெட்கக்கேடு. @KanimozhiDMK அவர்களே, விமர்சிப்பீர்களா? முதல்வர் @mkstalin அவர்களே, @KPonmudiMLA யை கைது செய்ய உத்தரவிடுவீர்களா? pic.twitter.com/qhXWJCbqEs
— Narayanan Thirupathy (@narayanantbjp) April 11, 2025
ಪೊನ್ಮುಡಿಯನ್ನು ಟೀಕಿಸಿ ಕನಿಮೋಳಿ ಮಾಡಿದ ಪೋಸ್ಟ್ ಅನ್ನು ತಿರುಪತಿ ಸ್ವಾಗತಿಸಿದ್ದರು.
ಪೊನ್ಮುಡಿ ಅವರು ಈ ಹಿಂದೆ ಉತ್ತರ ಭಾರತೀಯರನ್ನು ಪಾನಿ ಪುರಿ ಮಾರಾಟದೊಂದಿಗೆ ಲಿಂಕ್ ಮಾಡಿ ನೀಡಿದ್ದ ಹೇಳಿಕೆ ವಿವಾದಕ್ಕೀಡಾಗಿತ್ತು.
ತಹವ್ವುರ್ ರಾಣಾ ಭಾರತಕ್ಕೆ, 18 ದಿನ ಎನ್‌ಐಎ ಕಸ್ಟಡಿಗೆ ನೀಡಿದ ಕೋರ್ಟ್


