ಆಗ್ರಾ: ಆಗ್ರಾದ ನಾಗ್ಲಾ ತಾಲ್ಫಿ ಪ್ರದೇಶದಲ್ಲಿ ಮದುವೆ ಮೆರವಣಿಗೆಯ ವೇಳೆ ಸುಮಾರು 40 “ಮೇಲ್ಜಾತಿಯ” ಜನರ ಗುಂಪಿನಿಂದ ದಲಿತ ವರನ ಮೇಲೆ ಹಲ್ಲೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಈ ಘಟನೆ ಆಗ್ರಾ ಜಿಲ್ಲೆಯ ಖಂಡೌಲಿ ಪ್ರದೇಶದ ಗರ್ಹಿ ರಮ್ಮಿ ಗ್ರಾಮದಲ್ಲಿ ನಡೆದಿದೆ. 22 ವರ್ಷದ ವರ ರೋಹಿತ್ ಕುಮಾರ್ ಎಂಬಾತನನ್ನು ಕುದುರೆಯಿಂದ ಎಳೆದು, ನಿಂದಿಸಿ, ಥಳಿಸಿ, ಅವನ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ.
ಈ ಘಟನೆಯಿಂದ ಮದುವೆ ತಂಡದ ಹಲವಾರು ಸದಸ್ಯರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
ಆರೋಪಿಗಳು ದೊಣ್ಣೆಗಳು ಮತ್ತು ಹರಿತವಾದ ವಸ್ತುಗಳೊಂದಿಗೆ ಮನೆಗಳಿಂದ ಹೊರಬಂದಿದ್ದು, ವರನ ಕುಟುಂಬ ಮತ್ತು ಅತಿಥಿಗಳಲ್ಲಿ ಭಯಭೀತಿ ಮೂಡಿಸಿದೆ. ಕೆಲವು ಅತಿಥಿಗಳು ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ದಾಳಿಯ ನಂತರ ಸಂಗೀತ ಮತ್ತು ದೀಪಗಳನ್ನು ತ್ವರಿತವಾಗಿ ಆಫ್ ಮಾಡಿ ಭಯದಿಂದ ಮದುವೆ ಮಂಟಪಕ್ಕೆ ಧಾವಿಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಇಲ್ಲಿಯವರೆಗೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.
ನಾಗ್ಲಾ ತಾಲ್ಫಿ ನಿವಾಸಿ ಅನಿತಾ ನೀಡಿದ ದೂರಿನ ಪ್ರಕಾರ, ಬುಧವಾರ ಸಂಜೆ ಮಥುರಾದಿಂದ ಅವರ ಮಗಳ ಮದುವೆ ಮೆರವಣಿಗೆ ಬಂದಾಗ ಈ ಘಟನೆ ನಡೆದಿದೆ. ನಂತರ ಮದುವೆ ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಮದುವೆ ಮನೆಯಲ್ಲಿ ನಡೆಯಬೇಕಿತ್ತು ಎಂದು ದೂರಿನಲ್ಲಿ ಹೇಳಿದೆ.
ಡಿಜೆ ಸಂಗೀತದೊಂದಿಗೆ ಮೆರವಣಿಗೆ ರಸ್ತೆಯಲ್ಲಿ ಸಾಗುತ್ತಿದ್ದಂತೆ, “ಮೇಲ್ಜಾತಿಯ” ಸುಮಾರು 40 ಜನರ ಗುಂಪು ಕೋಲು ಮತ್ತು ಲಾಠಿಗಳೊಂದಿಗೆ ಬಂದು ವರ ಮತ್ತು ಇತರ ಹಲವರ ಮೇಲೆ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದಾಳಿಕೋರರು ವರ ಮತ್ತು ಮದುವೆಯ ಕಡೆಯ ಹಲವಾರು ಸದಸ್ಯರನ್ನು ಥಳಿಸಿದ್ದಾರೆ. ಹಲ್ಲೆಯಿಂದಾಗಿ, ಮದುವೆ ಸ್ಥಳದಲ್ಲಿ ಯಾವುದೇ ಆಚರಣೆಗಳನ್ನು ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಇಡೀ ಸಮಾರಂಭವನ್ನು ಸ್ಥಳಾಂತರಿಸಿ, ನಮ್ಮ ಮನೆಯಲ್ಲಿ ನಡೆಸಬೇಕಾಯಿತು ಎಂದು ಅನಿತಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ದಾಳಿಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಪಿ.ಕೆ. ರೈ ಹೇಳಿದ್ದಾರೆ.
ವಧುವಿನ ತಾಯಿ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್ ಸೆಕ್ಷನ್ 191-3 (ಆಯುಧಗಳಿಂದ ಗಲಭೆ), 190 (ಕಾನೂನುಬಾಹಿರ ಸಭೆ), 115-1 (ಗಾಯ ಉಂಟುಮಾಡುವುದು), 127 (ಅಕ್ರಮವಾಗಿ ಬಂಧಿಸುವುದು), 74 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲವಂತ), 352 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಜಿತ್ ತೋಮರ್, ಅಜಯ್ ತೋಮರ್, ಸೌರಭ್ ತೋಮರ್ ಮತ್ತು ಪ್ರದೀಪ್ ತೋಮರ್ ಮತ್ತು ಅವರ ಸಹಾಯಕರು ಮತ್ತು 20 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ” ಎಂದು ಎಸ್‌ಎಚ್‌ಒ ಆನಂದ್ ವೀರ್ ತಿಳಿಸಿದ್ದಾರೆ.
ದಾಳಿಗೆ ಸಂಬಂಧಿಸಿದಂತೆ ಅಜಿತ್ ತೋಮರ್, ಅಜಯ್ ತೋಮರ್, ಸೌರಭ್ ತೋಮರ್ ಮತ್ತು ಪ್ರದೀಪ್ ತೋಮರ್ ಮತ್ತು ಅವರ ಸಹಾಯಕರು ಸೇರಿದಂತೆ 29 ಮಂದಿಗಳ ವಿರುದ್ಧ ದೂರು ನೀಡಲಾಗಿದೆ. ಇದರಲ್ಲಿ 20 ಅಪರಿಚಿತ ವ್ಯಕ್ತಿಗಳು ಸೇರಿದ್ದಾರೆ ಎಂದು ಅವರು ಹೇಳಿದರು.
ಮಾಂಸಾಹಾರಿಗಳು “ಕೊಳಕರು” ಎಂದು ಕರೆದಿದ್ದಕ್ಕೆ ಅಪಾರ್ಟ್‌ಮೆಂಟ್ ನಲ್ಲಿ ಉದ್ವಿಗ್ನತೆ: ವೀಡಿಯೋ ವೈರಲ್


