ಕೆಲಸಕ್ಕೆ ಹೋಗುವುದಕ್ಕಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಗುರಿತಪ್ಪಿದ ಗುಂಡು ತಗುಲಿ ಭಾರತೀಯ ವಿದ್ಯಾರ್ಥಿನಿ ಕೆನಡಾದಲ್ಲಿ ಸಾವನ್ನಪ್ಪಿದ್ದಾಳೆ. ಕಾರಿನಲ್ಲಿ ಹಾದು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಗುಂಡು ಹಾರಿಸಿದ್ದಾರೆ. ವಿದ್ಯಾರ್ಥಿನಿಯನ್ನು ಒಂಟಾರಿಯೊದ ಹ್ಯಾಮಿಲ್ಟನ್‌ನಲ್ಲಿರುವ ಮೊಹಾಕ್ ಕಾಲೇಜಿನಲ್ಲಿ ಓದುತ್ತಿದ್ದ ಹರ್ಸಿಮ್ರತ್ ರಾಂಧವಾ ಎಂದು ಗುರುತಿಸಲಾಗಿದೆ.
ಬುಧವಾರ ನಡೆದ ಕೊಲೆಯ ಬಗ್ಗೆ ಹ್ಯಾಮಿಲ್ಟನ್ ಪೊಲೀಸರು ತನಿಖೆ ನಡೆಸುತ್ತಿದ್ದು, 21 ವರ್ಷದ ಯುವತಿ ಮುಗ್ಧ ಪ್ರೇಕ್ಷಕ ಎಂದು ಹೇಳಿದ್ದಾರೆ. “ಒಂಟಾರಿಯೊದ ಹ್ಯಾಮಿಲ್ಟನ್‌ನಲ್ಲಿ ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ರಾಂಧವಾ ಅವರ ದುರಂತ ಸಾವಿನಿಂದ ನಾವು ತೀವ್ರ ದುಃಖಿತರಾಗಿದ್ದೇವೆ” ಎಂದು ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಹೇಳಿದ್ದಾರೆ.
Hamilton Police are investigating after an innocent bystander was tragically killed by a stray bullet while standing at a bus stop on Upper James in #HamOnt. Read More: https://t.co/TApLRQpxt9
— Hamilton Police (@HamiltonPolice) April 18, 2025
“ಸ್ಥಳೀಯ ಪೊಲೀಸರ ಪ್ರಕಾರ, ಯುವತಿ ಅಮಾಯಕ ಬಲಿಪಶುವಾಗಿದ್ದು, ಎರಡು ವಾಹನಗಳನ್ನು ಒಳಗೊಂಡ ಗುಂಡಿನ ದಾಳಿಯ ಸಂದರ್ಭದಲ್ಲಿ ದಾರಿತಪ್ಪಿ ಗುಂಡೇಟಿನಿಂದ ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಕೊಲೆ ತನಿಖೆ ನಡೆಯುತ್ತಿದೆ. ನಾವು ಅವರ ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ಅಗತ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಮೃತ ಕುಟುಂಬದೊಂದಿಗೆ ಇವೆ” ಎಂದು ಅವರು ಹೇಳಿದರು.
ಹ್ಯಾಮಿಲ್ಟನ್‌ನ ಅಪ್ಪರ್ ಜೇಮ್ಸ್ ಮತ್ತು ಸೌತ್ ಬೆಂಡ್ ರೋಡ್ ಸ್ಟ್ರೀಟ್ಸ್ ಬಳಿ ಗುಂಡಿನ ದಾಳಿ ನಡೆದ ಬಗ್ಗೆ ವರದಿಗಳು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಂಧವಾ ಅವರ ಎದೆಗೆ ಗುಂಡೇಟಿನಿಂದ ಗಾಯವಾಗಿದ್ದು, ಪೊಲೀಸರು ಅವರನ್ನು ಆಸ್ಪತ್ರೆಗೆ ಸಾಗಿಸಿದ ನಂತರ ಅವರು ಸಾವನ್ನಪ್ಪಿದರು.
ಯುದ್ಧ ಕೊನೆಗೊಳಿಸುವ ಒಪ್ಪಂದಕ್ಕೆ ಸಿದ್ದ, ಕದನ ವಿರಾಮದ ಒಪ್ಪಂದಕ್ಕೆ ಸಿದ್ಧವಿಲ್ಲ: ಹಮಾಸ್


