Homeಮುಖಪುಟಉತ್ತರಪ್ರದೇಶ: ಸಾಮಾಜಿಕ ಮಾಧ್ಯಮದಲ್ಲಿ ದೇಶಭಕ್ತಿಯ ಪೋಸ್ಟ್‌; ಮುಸ್ಲಿಂ ಶಿಕ್ಷಕಿ ಅಮಾನತು; ವಿಸ್ತೃತ ವರದಿ

ಉತ್ತರಪ್ರದೇಶ: ಸಾಮಾಜಿಕ ಮಾಧ್ಯಮದಲ್ಲಿ ದೇಶಭಕ್ತಿಯ ಪೋಸ್ಟ್‌; ಮುಸ್ಲಿಂ ಶಿಕ್ಷಕಿ ಅಮಾನತು; ವಿಸ್ತೃತ ವರದಿ

- Advertisement -
- Advertisement -

ಸೋನ್‌ಭದ್ರ: ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಮುಸ್ಲಿಂ ಶಿಕ್ಷಕಿಯೊಬ್ಬರು ಹಂಚಿಕೊಂಡ ಫೇಸ್‌ಬುಕ್ ಪೋಸ್ಟ್ ವೈರಲ್ ಆದ ನಂತರ ಉತ್ತರಪ್ರದೇಶದ ಸೋನ್‌ಭದ್ರ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.

ಜೀಬಾ ಅಫ್ರೋಜ್ ಎಂದು ಗುರುತಿಸಲ್ಪಟ್ಟ ಶಿಕ್ಷಕಿ ಸಾಮಾಜಿಕ ಮಾಧ್ಯಮದಲ್ಲಿ ಕೋಮುವಾದಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನು ಕೆಲವರು “ಪ್ರಚೋದನಕಾರಿ” ಎಂದು ಕರೆದಿದ್ದಾರೆ, ಆದರೆ ಇತರರು ಈ ಪೋಸ್ಟ್ ಅನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಮತ್ತು ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಅವರನ್ನು ಅನ್ಯಾಯವಾಗಿ ಗುರಿಯಾಗಿಸಲಾಗುತ್ತಿದೆ ಎಂದು ಅಭಿಪ್ರಾಯಿಸಿದ್ದಾರೆ.

ಈ ಪ್ರಕರಣವು ಆಡಳಿತ ಮತ್ತು ಸಾರ್ವಜನಿಕರಿಂದ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಈ ಸುದ್ದಿ ಜನಪ್ರಿಯತೆ ಗಳಿಸುತ್ತಿದ್ದಂತೆ, ಮುಸ್ಲಿಂ ಸಮುದಾಯದ ಸದಸ್ಯರು ಮತ್ತು ನಾಗರಿಕ ಹಕ್ಕುಗಳ ಕಾರ್ಯಕರ್ತರು ಶಿಕ್ಷೆಯು ಪ್ರಮಾಣಾನುಗುಣವಾಗಿದೆಯೇ ಅಥವಾ ರಾಜಕೀಯ ಪ್ರೇರಿತವಾಗಿದೆಯೇ ಎಂದು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ.

ಚೋಪನ್ ಬ್ಲಾಕ್‌ನಲ್ಲಿರುವ ಮಾಲೋಘಾಟ್ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಜೀಬಾ ಅಫ್ರೋಜ್, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಈಗ ಅಳಿಸಲಾದ ಪೋಸ್ಟ್‌ನಲ್ಲಿ ಅವರು, “ಮುಸ್ಲಿಮರು ಯಾವಾಗಲೂ ದೇಶದ ನಿಷ್ಠಾವಂತರು, ಸಂಘಿಗಳು ಯಾವಾಗಲೂ ದೇಶದ್ರೋಹಿಗಳು” ಎಂದು ಬರೆದಿದ್ದರು.

ಮತ್ತೊಂದು ಕಾಮೆಂಟ್ ಆಗ್ರಾದಲ್ಲಿ ಗುಲ್ಫಾಮ್ ಎಂಬ ಯುವಕನ ಹತ್ಯೆಯನ್ನು ಉಲ್ಲೇಖಿಸಿದೆ ಎಂದು ಹೇಳಲಾಗಿದ್ದು, ಆರೋಪಿಗಳನ್ನು ಖಂಡಿಸುತ್ತಾ ಜೀಬಾ ಕಠಿಣ ಶಬ್ದ ಬಳಸಿದ್ದಾರೆ ಎಂದು ವರದಿಯಾಗಿದೆ.

ಭಾರತೀಯ ಮುಸ್ಲಿಮರ ದೇಶಭಕ್ತಿಯನ್ನು ರಕ್ಷಿಸುವ ಮತ್ತು ಉಗ್ರಗಾಮಿ ಅಂಶಗಳನ್ನು ಟೀಕಿಸುವ ಉದ್ದೇಶ ಅವರ ಹೇಳಿಕೆಯ ಸ್ಪಷ್ಟ ಉದ್ದೇಶವಾಗಿದ್ದರೂ, ಇದು ಸಾರ್ವಜನಿಕರ ಒಂದು ವರ್ಗದಲ್ಲಿ, ವಿಶೇಷವಾಗಿ ಬಲಪಂಥೀಯ ಸಿದ್ಧಾಂತಗಳೊಂದಿಗೆ ಹೊಂದಿಕೊಂಡಿರುವವರಲ್ಲಿ ಆಕ್ರೋಶಕ್ಕೆ ಕಾರಣವಾಯಿತು.

ಅವರ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳನ್ನು ವಾಟ್ಸಾಪ್ ಗುಂಪುಗಳು ಮತ್ತು ಸ್ಥಳೀಯ ಸಮುದಾಯದ ಗುಂಪುಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಯಿತು, ಅವರನ್ನು ತಕ್ಷಣ ವಜಾಗೊಳಿಸಬೇಕು ಮತ್ತು ಬಂಧಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟರು. ತಕ್ಷಣ ಪ್ರತಿಕ್ರಿಯಿಸಿದ ಸೋನ್‌ಭದ್ರಾದ ಮೂಲ ಶಿಕ್ಷಣ ಅಧಿಕಾರಿ (ಬಿಇಒ) ಉತ್ತರಪ್ರದೇಶ ಸರ್ಕಾರಿ ನೌಕರರ ನಡವಳಿಕೆ ನಿಯಮಗಳು, 1956ರ ಅಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಜೀಬಾ ಅವರನ್ನು ಅಮಾನತುಗೊಳಿಸಿದರು.

ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ಬಿಇಒ ಅವರು, “ಶಿಕ್ಷಕರಾದವರು ಶಾಂತಿ ಮತ್ತು ಕಲಿಕೆಯ ವಾತಾವರಣವನ್ನು ಕಾಪಾಡಿಕೊಳ್ಳಬೇಕು. ಇಂತಹ ವಿಭಜನಕಾರಿ ಹೇಳಿಕೆಗಳು ಸೇವಾ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ವಿಚಾರಣೆ ನಡೆಯುತ್ತಿದೆ” ಎಂದಿದ್ದಾರೆ.

ಘಟನೆಯ ಬಗ್ಗೆ ತನಿಖೆ ನಡೆಸಲು ತನಿಖಾ ಅಧಿಕಾರಿಯನ್ನು ನೇಮಿಸಲಾಗಿದೆ. 15 ದಿನಗಳಲ್ಲಿ ವಿವರವಾದ ವರದಿಯನ್ನು ಸಲ್ಲಿಸಲು ಅಧಿಕಾರಿಯನ್ನು ಕೇಳಲಾಗಿದೆ. ಸುದ್ದಿ ಹರಡುತ್ತಿದ್ದಂತೆ ಮುಸ್ಲಿಂ ಸಮುದಾಯದ ಅನೇಕ ಸದಸ್ಯರು ಈ ಕುರಿತು ತಮ್ಮ ಕಳವಳ ವ್ಯಕ್ತಪಡಿಸಿದರು ಮತ್ತು ಈ ರೀತಿ ಒಬ್ಬ ವ್ಯಕ್ತಿ ತಮ್ಮ ರಾಜಕೀಯ ಅಭಿಪ್ರಾಯವನ್ನು ವ್ಯಕ್ತಪಡಿಸುವುದರಿಂದ ಅಮಾನತುಗೊಳಗಾಗಬೇಕೆ ಎಂದು ಪ್ರಶ್ನಿಸಿದರು.

ಈ ಪ್ರದೇಶದ ನಿವೃತ್ತ ಶಿಕ್ಷಕ ಮೊಹಮ್ಮದ್ ಸೈಫುದ್ದೀನ್ ಅವರು, “ಜನರು ಮುಸ್ಲಿಮರನ್ನು ಯಾವಾಗಲೂ ರಾಷ್ಟ್ರವಿರೋಧಿಗಳು ಎಂದು ಕರೆಯುತ್ತಾರೆ ಮತ್ತು ಆಗ ಯಾರೂ ಸೊಲ್ಲು ಎತ್ತುವುದಿಲ್ಲ. ಆದರೆ ಮುಸ್ಲಿಮರು ತಮ್ಮ ದೇಶಭಕ್ತಿಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಕ್ಷಣ, ಅವರನ್ನು ಕೋಮುವಾದಿ ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. ಈಗ ಮುಸ್ಲಿಮರು ನಿಷ್ಠಾವಂತ ನಾಗರಿಕರು ಎಂದು ಹೇಳುವುದು ಅಪರಾಧವೇ?” ಎಂದಿದ್ದಾರೆ.

“ಅವರ ಕಾಮೆಂಟ್ ಪ್ರಬಲವಾಗಿರಬಹುದು, ಆದರೆ ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುವ ಎಲ್ಲಾ ದ್ವೇಷ ಭಾಷಣಗಳ ಬಗ್ಗೆ ಇದೇ ರೀತಿ ನಡೆದುಕೊಳ್ಳಲಾಗುತ್ತದೆಯೇ ಏನು? ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ” ಎಂದು ಅವರು ಪ್ರಶ್ನಿಸಿದರು.

ಕಳೆದ ಕೆಲವು ವರ್ಷಗಳಿಂದ, ಮುಸ್ಲಿಂ ವೃತ್ತಿಪರರು ಅದರಲ್ಲೂ ವಿಶೇಷವಾಗಿ ಶಿಕ್ಷಕರು ಮತ್ತು ಪತ್ರಕರ್ತರು ತಮ್ಮ ಸಾಮಾಜಿಕ ಮಾಧ್ಯಮ ಚಟುವಟಿಕೆಗಳಿಗಾಗಿ ಶಿಕ್ಷೆಯನ್ನು ಎದುರಿಸಿದ ಹಲವಾರು ಪ್ರಕರಣಗಳು ನಡೆದಿವೆ. ಆದರೆ ಇತರರಿಂದ ಇದೇ ರೀತಿಯ ಕಾಮೆಂಟ್‌ಗಳನ್ನು ನಿರ್ಲಕ್ಷಿಸಲಾಗಿದೆ.

2022ರಲ್ಲಿ ಬರೇಲಿಯ ಮುಸ್ಲಿಂ ಶಿಕ್ಷಕರು ಆಡಳಿತ ಸರ್ಕಾರವನ್ನು ಟೀಕಿಸುವ ಪೋಸ್ಟ್ ಅನ್ನು ಲೈಕ್ ಮಾಡಿದ್ದಕ್ಕಾಗಿ ಅಮಾನತುಗೊಳಿಸಲಾಯಿತು ಮತ್ತು ಕಾನ್ಪುರದ ಮತ್ತೊಂದು ಪ್ರಕರಣದಲ್ಲಿ ಕೋಮು ಘರ್ಷಣೆಯ ಸಮಯದಲ್ಲಿ ಶಾಂತಿಗಾಗಿ ಕರೆ ನೀಡುವ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಕ್ಕಾಗಿ ಮುಸ್ಲಿಂ ಪತ್ರಕರ್ತೆಯನ್ನು ಬಂಧಿಸಲಾಯಿತು.

“ನಮ್ಮನ್ನು ಗೋಡೆಗೆ ತಳ್ಳಲಾಗುತ್ತಿದೆ” ಎಂದು ವಾರಣಾಸಿಯ ಕಾಲೇಜು ಉಪನ್ಯಾಸಕಿ ಫಾತಿಮಾ ರಿಜ್ವಿ ಹೇಳಿದರು. “ಶಿಕ್ಷಕರು, ವೈದ್ಯರು, ಪತ್ರಕರ್ತರು – ಎಲ್ಲರೂ ಮುಸ್ಲಿಮರಾಗಿದ್ದರೆ ಅವರಿಗೆ ಈ ರೀತಿ ಶಿಕ್ಷೆ ವಿಧಿಸಲಾಗುತ್ತಿದೆ. ಇದು ಯಾವ ರೀತಿಯ ನ್ಯಾಯ?” ಎಂದು ಅವರು ಪ್ರಶ್ನಿಸಿದರು.

ಕಾನೂನು ತಜ್ಞರು ಹೇಳುವಂತೆ ಈ ಪ್ರಕರಣವು ವಾಕ್ ಸ್ವಾತಂತ್ರ್ಯ ಮತ್ತು ಸರ್ಕಾರಿ ಸೇವೆಯೊಂದಿಗೆ ಬರುವ ಜವಾಬ್ದಾರಿಯ ಬಗ್ಗೆ ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಲಕ್ನೋ ಹೈಕೋರ್ಟ್‌ನ ವಕೀಲರಾದ ವಕೀಲ ಇರ್ಫಾನ್ ಹೈದರ್ ಅವರು, “ಶಿಕ್ಷಕರ ಹೇಳಿಕೆಯು ರಾಜಕೀಯ ಸ್ವರೂಪದ್ದಾಗಿದೆ, ಹಿಂಸೆಗೆ ಪ್ರಚೋದನೆಯಲ್ಲ. ಸಂವಿಧಾನವು ರಾಜಕೀಯ ಅಭಿವ್ಯಕ್ತಿಗೆ ಅವಕಾಶ ನೀಡುತ್ತದೆ. ಆದಾಗ್ಯೂ, ಸರ್ಕಾರಿ ನೌಕರರ ನಡವಳಿಕೆಯ ನಿಯಮಗಳು ಸಾರ್ವಜನಿಕ ಸ್ಥಳಗಳಲ್ಲಿ ತಟಸ್ಥತೆಯನ್ನು ಬಯಸುತ್ತವೆ.” ಎಂದಿದ್ದಾರೆ.

“ಆದರೆ ನಾವು ನ್ಯಾಯಯುತವಾಗಿರೋಣ. ತಟಸ್ಥತೆಯನ್ನು ನಿರೀಕ್ಷಿಸಿದರೆ, ಅದನ್ನು ಎಲ್ಲರ ಮೇಲೂ ಸಮಾನವಾಗಿ ಜಾರಿಗೊಳಿಸಬೇಕು. ನೂರಾರು ಸರ್ಕಾರಿ ನೌಕರರು ಪ್ರತಿದಿನ ಸರ್ಕಾರದ ಪರ ಮತ್ತು ಅಲ್ಪಸಂಖ್ಯಾತ ವಿರೋಧಿ ಸಂದೇಶಗಳನ್ನು ಪೋಸ್ಟ್ ಮಾಡುತ್ತಾರೆ ಮತ್ತು ಯಾವುದೇ ಕ್ರಮವನ್ನು ಎದುರಿಸುವುದಿಲ್ಲ” ಎಂದು ಅವರು ಪ್ರಶ್ನಿಸಿದರು.

ಸೋನ್‌ಭದ್ರ ಮತ್ತು ನೆರೆಯ ಜಿಲ್ಲೆಗಳ ಸಾರ್ವಜನಿಕರು ತೀವ್ರವಾಗಿ ವಿಭಜಿಸಲ್ಪಟ್ಟಂತೆ ಕಂಡುಬಂದರು. ಕೆಲವು ಸ್ಥಳೀಯರು ಶಿಕ್ಷಕಿಯು ಒಂದು ಗೆರೆಯನ್ನು ದಾಟಿದ್ದಾರೆ ಎಂದು ಹೇಳಿದರೆ, ಇತರರ ಈ ಆಕ್ರೋಶವು ಪೂರ್ವಾಗ್ರಹದಿಂದ ಹೆಚ್ಚು ಉತ್ತೇಜನಗೊಂಡಿದೆ ಎಂದು ಹೇಳಿದರು.  “ಅವರು ಅಂತಹ ಹೇಳಿಕೆ ನೀಡಬಾರದಿತ್ತು. ಶಿಕ್ಷಕರು ಮಾದರಿ ವ್ಯಕ್ತಿಗಳು.” ಎಂದು ಚೋಪನ್ ನಿವಾಸಿ ರಮೇಶ್ ಯಾದವ್ ಹೇಳಿದರು.

ಆದಾಗ್ಯೂ, ಹೆಸರು ಬಹಿರಂಗಪಡಿಸಲು ಬಯಸದ ಶಾಲಾ ಸಹೋದ್ಯೋಗಿಯೊಬ್ಬರು ಅವರನ್ನು ಸಮರ್ಥಿಸಿಕೊಂಡು ಹೀಗೆ ಹೇಳಿದರು: “ಜೀಬಾ ಮೇಡಂ ನಮ್ಮ ಬ್ಲಾಕ್‌ನಲ್ಲಿರುವ ಅತ್ಯಂತ ದಯಾಳು ಶಿಕ್ಷಕರಲ್ಲಿ ಒಬ್ಬರು. ಯಾರನ್ನೋ ಅಪರಾಧಿ ಮಾಡುವುದು ಅವರ ಉದ್ದೇಶವಾಗಿರಲಿಲ್ಲ. ಯಾವುದೇ ಭಯೋತ್ಪಾದಕ ದಾಳಿಯ ನಂತರ ನಡೆಯುವ ಸಾಮಾನ್ಯ ಆರೋಪದ ವಿರುದ್ಧ ಮುಸ್ಲಿಮರನ್ನು ರಕ್ಷಿಸಲು ಅವರು ಬಯಸಿದ್ದರು” ಎಂದಿದ್ದಾರೆ. ಈ ಪ್ರಕರಣವು ಸೃಷ್ಟಿಸಿರುವ ಬಿರುಗಾಳಿಯ ಹೊರತಾಗಿಯೂ, ಮುಖ್ಯವಾಹಿನಿಯ ರಾಜಕೀಯ ನಾಯಕರಿಂದ ಯಾವುದೇ ಹೇಳಿಕೆ ಬಂದಿಲ್ಲ.

ಆದಾಗ್ಯೂ, ಕೆಲವು ಸ್ಥಳೀಯ ಮುಸ್ಲಿಂ ನಾಯಕರು ಮಾತನಾಡಿದ್ದಾರೆ. “ಮುಸ್ಲಿಮರನ್ನು ಶಾಶ್ವತವಾಗಿ ಶಂಕಿತರಂತೆ ಪರಿಗಣಿಸುವುದನ್ನು ನಿಲ್ಲಿಸುವ ಸಮಯ ಇದು. ನಾವು ಭಯೋತ್ಪಾದನೆಯನ್ನು ಖಂಡಿಸುತ್ತೇವೆ, ಆದರೆ ಪೂರ್ವಾಗ್ರಹದ ವಿರುದ್ಧ ಮಾತನಾಡಿದಾಗ ನಮ್ಮನ್ನು ಮೌನಗೊಳಿಸಬೇಡಿ” ಎಂದು ಜಾಮಾ ಮಸೀದಿ ಸೋನ್‌ಭದ್ರದ ಮೌಲಾನಾ ಖಾರಿ ಸಲ್ಮಾನ್ ಹೇಳಿದರು.

ಈ ಪ್ರಕರಣವು ಮುಸ್ಲಿಮರ ಧ್ವನಿಯನ್ನು ಶಿಕ್ಷಿಸಿದ ಅಥವಾ ಮೌನಗೊಳಿಸಿದ ಹಿಂದಿನ ಅನೇಕ ಘಟನೆಗಳನ್ನು ನೆನಪಿಸುತ್ತದೆ. 2021ರಲ್ಲಿ ಅಲಿಗಢದ ಮುಸ್ಲಿಂ ಶಾಲಾ ಶಿಕ್ಷಕಿಯೊಬ್ಬರು ಪ್ರವಾದಿ ಮುಹಮ್ಮದ್ (ಸ) ಅವರನ್ನು ಉಲ್ಲೇಖಿಸುವ ಕೋಮು ಸಾಮರಸ್ಯದ ಕುರಿತಾದ ಕವಿತೆಯನ್ನು ವಾಚಿಸಿದ್ದಕ್ಕಾಗಿ ತಮ್ಮ ಕೆಲಸವನ್ನು ಕಳೆದುಕೊಂಡರು. ಅವರು “ಇಸ್ಲಾಂ ಅನ್ನು ಹರಡುತ್ತಿದ್ದಾರೆ” ಎಂದು ಹೇಳಿಕೊಂಡು ಬಲಪಂಥೀಯ ಗುಂಪು ದೂರು ದಾಖಲಿಸಿತ್ತು.

ಮತ್ತೊಂದು ಪ್ರಕರಣದಲ್ಲಿ ಗಾಜಿಯಾಬಾದ್‌ನ ಮುಸ್ಲಿಂ ಪ್ರಾಂಶುಪಾಲರೊಬ್ಬರು ಮಕ್ಕಳು ರಾಷ್ಟ್ರಗೀತೆ ಹಾಡುವ ಮತ್ತು ಅಲ್ಲಾಮಾ ಇಕ್ಬಾಲ್ ಅವರ ಕವಿತೆಯ ಕೆಲವು ಸಾಲುಗಳನ್ನು ಪಠಿಸುವ ಕಾರ್ಯಕ್ರಮವನ್ನು ಆಯೋಜಿಸಿದ ನಂತರ ಅವರನ್ನು ವರ್ಗಾಯಿಸಲಾಯಿತು. ಬಲಪಂಥೀಯ ಗುಂಪುಗಳು ಅವರನ್ನು “ಇಸ್ಲಾಮಿಕ್ ಪ್ರಚಾರಕ” ಎಂದು ಆರೋಪಿಸಿದರು. “ಸ್ಪಷ್ಟವಾದ ದ್ವಿಮುಖ ನೀತಿ ಇದೆ” ಎಂದು ದೆಹಲಿ ಮೂಲದ ರಾಜಕೀಯ ವಿಶ್ಲೇಷಕ ಪ್ರೊ. ಅನೀಸ್ಯೂರ್ ರೆಹಮಾನ್ ಹೇಳುತ್ತಾರೆ.

“ಒಂದು ಸಮುದಾಯದ ದೇಶಭಕ್ತಿ ಯಾವಾಗಲೂ ಪ್ರಶ್ನಾರ್ಹವಾಗಿರುತ್ತದೆ ಮತ್ತು ಅವರ ನೋವನ್ನು ವಿರಳವಾಗಿ ಒಪ್ಪಿಕೊಳ್ಳಲಾಗುತ್ತದೆ. ಅದು ನಮ್ಮ ಸಂವಿಧಾನವು ಭರವಸೆ ನೀಡುವ ಭಾರತದ ಕಲ್ಪನೆಯಲ್ಲ. ಸದ್ಯಕ್ಕೆ, ಜೀಬಾ ಅಫ್ರೋಜ್ ಅವರನ್ನು ಅಮಾನತುಗೊಳಿಸಲಾಗಿದೆ. ವಿಚಾರಣೆ ಮುಂದುವರೆದಿದ್ದು, ಶಿಕ್ಷಕಿಯಾಗಿ ಅವರ ಭವಿಷ್ಯ ಅತಂತ್ರದಲ್ಲಿದೆ” ಎಂದಿದ್ದಾರೆ.

12 ವರ್ಷಗಳಿಗೂ ಹೆಚ್ಚು ಕಾಲ ಶಾಲೆಯಲ್ಲಿ ಉತ್ತಮ ದಾಖಲೆಯೊಂದಿಗೆ ಸೇವೆ ಸಲ್ಲಿಸಿರುವ ಅವರು ಆಘಾತಕ್ಕೊಳಗಾಗಿದ್ದಾರೆ ಮತ್ತು ಭಾವನಾತ್ಮಕವಾಗಿ ಘಾಸಿಗೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಹೆಸರು ಬಹಿರಂಗಪಡಿಸಲು ಇಚ್ಛಿಸದ ಅವರ ಪತಿ, “ಅವರು ಮುಸ್ಲಿಮರ ಶಾಂತಿ ಮತ್ತು ಗೌರವಕ್ಕಾಗಿ ಮಾತನಾಡಲು ಬಯಸಿದ್ದರು. ಈಗ ನಮ್ಮ ಮಕ್ಕಳು ಆಘಾತಕ್ಕೊಳಗಾಗಿದ್ದಾರೆ” ಎಂದಿದ್ದಾರೆ.

ಈ ಘಟನೆಯು ಕೇವಲ ಒಬ್ಬ ಶಿಕ್ಷಕಿಯ ಕುರಿತು ಮಾತ್ರ ಅಲ್ಲ, ಬದಲಾಗಿ ಭಾರತದಲ್ಲಿ ಕೋಮು ಸಂಬಂಧಗಳ ದೊಡ್ಡ ಸ್ಥಿತಿ ಮತ್ತು ವಾಕ್ ಸ್ವಾತಂತ್ರ್ಯದ ಕುರಿತು ಕಳವಳವನ್ನು ಒಳಗೊಂಡಿದೆ. ಎರಡೂ ಕಡೆಗಳಲ್ಲಿ ಧ್ವನಿಗಳು ಜೋರಾಗುತ್ತಿದ್ದಂತೆ ಶಿಕ್ಷೆಯ ಭಯವಿಲ್ಲದೆ ಮುಸ್ಲಿಮರು ತಮ್ಮ ನೋವು ಮತ್ತು ದೇಶಭಕ್ತಿಯನ್ನು ವ್ಯಕ್ತಪಡಿಸಲು ಸ್ಥಳಾವಕಾಶವಿದೆ ಎಂಬುದು ಸ್ಪಷ್ಟವಾಗುತ್ತದೆ.

ತನಿಖೆಯು ಶಿಕ್ಷಕಿಯ ಸೇವಾ ನಿಯಮಗಳ ಉಲ್ಲಂಘನೆಯನ್ನು ಸ್ಪಷ್ಟಪಡಿಸಬಹುದು ಅಥವಾ ದೃಢೀಕರಿಸಬಹುದು, ಆದರೆ ನಿಜವಾದ ಪ್ರಶ್ನೆಗೆ ಉತ್ತರಿಸಲಾಗುವುದಿಲ್ಲ. ಭಾರತೀಯ ಮುಸ್ಲಿಮರೆಲ್ಲರಿಗೂ ರಾಷ್ಟ್ರವಿರೋಧಿ ಎಂದು ಹಣೆಪಟ್ಟಿ ಕಟ್ಟದೆ ಅವರ ಪರವಾಗಿ ಉಳಿದವರು ಮಾತನಾಡಬಹುದೇ?
ಸದ್ಯಕ್ಕೆ, ಜೀಬಾ ಅವರ ಪೋಸ್ಟ್ ಆಕ್ರಮಣಕಾರಿಯಾಗಿರಲಿ ಅಥವಾ ರಕ್ಷಣಾತ್ಮಕವಾಗಿರಲಿ ನಡೆಯಬೇಕಾದ ಸಂಭಾಷಣೆಯನ್ನು ಹುಟ್ಟುಹಾಕಿವೆ. ಇಲ್ಲಿ ಚರ್ಚಿಸಬೇಕಾಗಿರುವುದು ಇಂತಹ ವಿಷಯದಲ್ಲಿ ಶಿಕ್ಷೆಯ ವಿಧಿಸುವ ಕುರಿತು ಅಲ್ಲ, ಬದಲಾಗಿ ಪಹಲ್ಗಾಮ್ ದಾಳಿಯಂತಹ ಸಂದರ್ಭದಲ್ಲಿ ಮುಸ್ಲಿಮರು ಕೇಳುವ ಪ್ರಶ್ನೆಗಳ ಬಗ್ಗೆ ಯಾವುದೇ ಪೂರ್ವಾಗ್ರಹವಿಲ್ಲದೆ ಉತ್ತರ ನೀಡುವಂತಹ ವಾತಾವರಣ ಸೃಷ್ಟಿಸಬೇಕಾಗಿದೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ.

ಬಿಜೆಪಿ ಟ್ರೋಲ್‌ ಪಡೆಯ ದಾಳಿಗೆ ತುತ್ತಾದ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಸೈನಿಕನ ಪತ್ನಿ; ಸೌಹಾರ್ದತೆಗೆ ಕರೆ ಕೊಟ್ಟಿದ್ದೇ ಅಪರಾಧ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...

ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಹೈಕಮಾಂಡ್ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ!

ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಜಿಲ್ಲಾ ಪುನರ್‌ರಚನೆಗೆ ಕೊನೆಗೂ ಚಾಲನೆ ದೊರೆತಿದ್ದು, ರಾಜ್ಯದ 35 ಸಾಂಸ್ಥಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ (DCC) ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ....

ತ್ರಿಪುರ| ಬಿಜೆಪಿ ಬೇಡಿಕೆಗೆ ಸ್ಪಂದಿಸಿದ ಇಸಿಐ; ಗ್ರಾಮ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿಕೆ

ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ), ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಗ್ರಾಮ ಸಮಿತಿ...

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...

‘ಎಸ್‌ಐಆರ್ ಪ್ರಜಾಪ್ರಭುತ್ವಕ್ಕೆ ವಂಚನೆ’: 2025ಕ್ಕೆ ಹೋಲಿಸಿದರೆ ದೆಹಲಿಯ 58.60 ಲಕ್ಷ ಮತದಾರರ ಹೆಸರುಗಳು ಮಾಯ: ನಾಗರೀಕ ಸಂಘಟನೆಗಳ ಆಕ್ರೋಶ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತದಾರರ ಪಟ್ಟಿಯ ಶುದ್ಧೀಕರಣದ ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ನಾಗರಿಕರ ಮತದಾನದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ...