ಸಂಯುಕ್ತ ಕಿಸಾನ್ ಮೋರ್ಚಾ (SKM ರಾಜಕೀಯೇತರ) ಘೋಷಿಸಿದ್ದ ಶಂಭು ಪೊಲೀಸ್ ಠಾಣೆಯ ಹೊರಗೆ ಮಂಗಳವಾರ ಯೋಜಿಸಿದ ಪ್ರತಿಭಟನೆಯ ಮುನ್ನಾದಿನ ಪಂಜಾಬ್ ಪೊಲೀಸರು, ಜಗಜಿತ್ ಸಿಂಗ್ ದಲ್ಲೆವಾಲ್ ಸೇರಿದಂತೆ ಹಿರಿಯ ರೈತ ಮುಖಂಡರು ಮತ್ತು ಹೋರಾಟಗಾರರನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು TNIE ವರದಿ ಮಾಡಿದೆ. ಮಾರ್ಚ್ 19 ರಂದು ಶಂಭು ಮತ್ತು ಖಾನೌರಿ ಗಡಿಗಳಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ರೈತರು ಗಾಯಗೊಂಡಿದ್ದಾರೆ ಎಂದು ಆರೋಪಿಸಿ ಈ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಗೆ ಸಿದ್ದರಾದ
ಸೋಮವಾರ ಮುಂಜಾನೆ ಪೊಲೀಸ್ ತಂಡವೊಂದು ಫರೀದ್‌ಕೋಟ್‌ನಲ್ಲಿರುವ ದಲ್ಲೆವಾಲ್ ಅವರ ಗ್ರಾಮವನ್ನು ತಲುಪಿದೆ ಎಂದು ಮೂಲಗಳು ತಿಳಿಸಿವೆ. ಕನಿಷ್ಠ ಮೂರರಿಂದ ನಾಲ್ಕು ದಿನಗಳ ಕಾಲ ಮನೆಯೊಳಗೆ ಇರಲು ಅವರು ಕೇಳಿಕೊಂಡಿದ್ದಾರೆ. ಇದರ ನಂತರ, ಪೊಲೀಸ್ ಕ್ರಮವನ್ನು ಟೀಕಿಸಿ ತನ್ನ ಬಂಧನದ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ.
Faridkot, Punjab: Heavy police has been deployed outside farmer leader Jagjit Singh Dallewal’s residence pic.twitter.com/YGsSTBpgg7
— IANS (@ians_india) May 5, 2025
ಖನೌರಿ ಮತ್ತು ಶಂಭುವಿನಿಂದ ಪೊಲೀಸರು ರೈತರನ್ನು ಬಲವಂತವಾಗಿ ಹೊರಹಾಕಿದಾಗ, ಅವರು ಪೊಲೀಸರಿಂದ ತೊಂದರೆಗೆ ಒಳಗಾಗಿದ್ದಾರೆ ಮತ್ತು ಟ್ರ್ಯಾಕ್ಟರ್‌ಗಳು ಸೇರಿದಂತೆ ಅವರ ಹಲವಾರು ವಸ್ತುಗಳು ಕಾಣೆಯಾಗಿವೆ ಎಂದು ದಲ್ಲೆವಾಲ್ ಆರೋಪಿಸಿದ್ದಾರೆ. ಇದರ ನಂತರ ಸರ್ಕಾರ ಪರಿಹಾರವನ್ನು ಭರವಸೆ ನೀಡಿತು.
ಕಾಣೆಯಾದ ವಸ್ತುಗಳನ್ನು ಅಂತಿಮವಾಗಿ “ಎಎಪಿ ನಾಯಕರು ಮತ್ತು ಪೊಲೀಸ್ ಸಿಬ್ಬಂದಿಯ ಆಪ್ತ ಸಹಚರರ ಬಳಿ ಪತ್ತೆಹಚ್ಚಲಾಗಿದೆ” ಎಂದು ಅವರು ಹೇಳಿದ್ದಾರೆ. “ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಪೊಲೀಸರು ರೈತರ ಕಾಣೆಯಾದ ವಸ್ತುಗಳನ್ನು ಪತ್ತೆಹಚ್ಚಿದವರ ವಿರುದ್ಧವೆ ಪ್ರಕರಣ ದಾಖಲಿಸಲು ಪ್ರಾರಂಭಿಸಿದರು” ಎಂದು ಅವರು ಹೇಳಿದ್ದಾರೆ. ಅದಕ್ಕಾಗಿಯೇ “ನಾವು ಮೇ 6 ರಂದು ಪೊಲೀಸರ ವರ್ತನೆಯ ವಿರುದ್ಧ ಆಂದೋಲನವನ್ನು ಯೋಜಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಸರ್ಕಾರವು ನಮ್ಮ ಆಂದೋಲನವನ್ನು ಹಳಿತಪ್ಪಿಸಲು ಪ್ರಯತ್ನಿಸಿದೆ ಎಂದು ರೈತ ಮುಖಂಡರು ಹೇಳಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ (ದೋಬಾ) ಅಧ್ಯಕ್ಷ ಮಂಜಿತ್ ಸಿಂಗ್ ರೈ ಮತ್ತು ಇತರ ಪದಾಧಿಕಾರಿಗಳಾದ ದವೀಂದರ್ ಸಿಂಗ್ ಸಂಧ್ವಾನ್ ಮತ್ತು ಸತ್ನಮ್ ಸಿಂಗ್ ಸಾಹ್ನಿ ಅವರನ್ನು ಸಹ ಗೃಹಬಂಧನದಲ್ಲಿ ಇರಿಸಲಾಯಿತು ಎಂದು ವರದಿಯಾಗಿದೆ. ಬಲದೇವ್ ಸಿಂಗ್ ಸಿರ್ಸಾ ಅವರಂತಹ ನಾಯಕರೂ ಸಹ ಗೃಹಬಂಧನದಲ್ಲಿದ್ದಾರೆ ಎಂದು ಅದು ಹೇಳಿದೆ.
ರೈತ ಮುಖಂಡರ ಬಂಧನಗಳ ನಂತರ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, “ರಸ್ತೆಗಳು ಅಥವಾ ರೈಲುಮಾರ್ಗಗಳನ್ನು ನಿರ್ಬಂಧಿಸುವುದು ಅಥವಾ ಸಾರ್ವಜನಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುವುದು ಮತ್ತು ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸುವುದನ್ನು ಒಳಗೊಂಡಂತೆ ಯಾವುದೇ ಘೋಷಣೆಗಳು, ಪ್ರತಿಭಟನೆಗಳು ಅಥವಾ ಮುಷ್ಕರಗಳನ್ನು ಸಾರ್ವಜನಿಕರ ವಿರುದ್ಧದ ಕೃತ್ಯಗಳೆಂದು ಪರಿಗಣಿಸಲಾಗುತ್ತದೆ” ಎಂದು ಹೇಳಿದ್ದಾರೆ.
In view of the farmers’ protest call to surround Shambhu Border police station on May 6, the Punjab govt has once again begun detaining and placing farmers under house arrest. Today, Punjab Police detained farmer leader Jagjit Singh Dallewal. pic.twitter.com/VAapMKLUvD
— Gagandeep Singh (@Gagan4344) May 5, 2025
ಎಲ್ಲಾ ಸಂಘಟನೆಗಳು, ಒಕ್ಕೂಟಗಳು ಮತ್ತು ಗುಂಪುಗಳು ಇದನ್ನು ಪರಗಣಿಸುವಂತೆ ಸೂಚಿಸಲಾಗಿದೆ. ವಿರೋಧ ವ್ಯಕ್ತಪಡಿಸಲು ಇತರ ಮಾರ್ಗಗಳಿವೆ, ಆದರೆ ಜನರಿಗೆ ತೊಂದರೆ ಮಾಡುವುದು ಸರಿಯಲ್ಲ. ಜನರಿಗೆ ತೊಂದರೆ ಮಾಡಿದರೆ ಕಠಿಣ ಕಾನೂನು ಕ್ರಮಕ್ಕೆ ಸಿದ್ಧರಾಗಿರಿ. ಪಂಜಾಬ್‌ನ ಶ್ರಮಶೀಲ ಜನರ ಹಿತದೃಷ್ಟಿಯಿಂದ ಇದನ್ನು ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಪ್ರತಿಭಟನೆಗೆ ಸಿದ್ದರಾದ


