ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಆಡಳಿತರೂಢ ಮೈತ್ರಿಕೂಟವು ಕಳೆದ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಭರವಸೆ ನೀಡಿದಂತೆ, ಲಡ್ಕಿ ಬಹಿನ್ ಯೋಜನೆಯಡಿ ಮಹಿಳೆಯರಿಗೆ ಮಾಸಿಕ ಆರ್ಥಿಕ ಸಹಾಯವನ್ನು 2,100 ರೂ.ಗಳಿಗೆ ಹೆಚ್ಚಿಸಲು ಸಾಧ್ಯವಿಲ್ಲ ಎಂದು ರಾಜ್ಯದ ಸಚಿವ ಸಂಜಯ್ ಶಿರ್ಸಾತ್ ಸೋಮವಾರ, ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಚುನಾವಣೆಯಲ್ಲಿ ಮಹಿಳೆಯರಿಗೆ
ಆದಾಗ್ಯೂ, ಪ್ರಸ್ತುತ ತಿಂಗಳಿಗೆ 1,500 ರೂ.ಗಳ ಮೊತ್ತವನ್ನು ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಯೋಜನೆಗೆ ಸಂಬಂಧಿಸಿದ ಚುನಾವಣಾ ಭರವಸೆಯನ್ನು ಸರ್ಕಾರವು ಈಡೇರಿಸಲು ಸಾಧ್ಯವಾಗುವುದಿಲ್ಲ ಎಂದು ಸಚಿವರು ಸಾರ್ವಜನಿಕವಾಗಿ ಒಪ್ಪಿಕೊಂಡಿರುವುದು ಇದೇ ಮೊದಲು.
“ಮಾಸಿಕ 1,500 ರೂ.ಗಳನ್ನು 2,100 ರೂ.ಗಳಿಗೆ ಹೆಚ್ಚಿಸಲಾಗುವುದಿಲ್ಲ ಎಂಬುದು ವಾಸ್ತವ” ಎಂದು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಗುಂಪಿನ ಸದಸ್ಯ ಶಿರ್ಸಾತ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. “ಈ ಯೋಜನೆಯನ್ನು ನಿಲ್ಲಿಸಲಾಗುತ್ತದೆ ಅಥವಾ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ ಎಂದು ಹೇಳುತ್ತಾ ಸಮಸ್ಯೆ ಸೃಷ್ಟಿಸಲಾಗುತ್ತದೆ. ಅದರೆ, ಲಡ್ಕಿ ಬಹಿನ್ ಯೋಜನೆಯಡಿಯಲ್ಲಿನ ಬದ್ಧತೆಯನ್ನು ಈಡೇರಿಸಲಾಗುತ್ತದೆ.” ಎಂದು ಅವರು ಹೇಳಿದ್ದಾರೆ.
ತಮ್ಮ ಸಚಿವಾಲಯವು ಸುಮಾರು 3,000 ಕೋಟಿ ರೂಪಾಯಿಗಳ ಬಾಕಿ ಉಳಿಸಿಕೊಂಡಿದೆ ಎಂದು ಸಚಿವ ಶಿರ್ಸತ್ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ನನ್ನ ಇಲಾಖೆಯ ಅಗತ್ಯಗಳನ್ನು ಸಹಾನುಭೂತಿಯಿಂದ ಪರಿಗಣಿಸಲು ಮತ್ತು ನಿಯಮಗಳ ಪ್ರಕಾರ ಸರಿಯಾದ ಹಣವನ್ನು ಬಿಡುಗಡೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ನಾನು ಸುಮಾರು ಒಂದು ತಿಂಗಳ ಹಿಂದೆ ಮುಖ್ಯಮಂತ್ರಿ [ದೇವೇಂದ್ರ ಫಡ್ನವಿಸ್] ಅವರನ್ನು ವಿನಂತಿಸಿದ್ದೆ” ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.
“ನಾನು ಇದನ್ನು ಲಿಖಿತವಾಗಿ ತಿಳಿಸಿದ್ದೇನೆ ಮತ್ತು [ರಾಜ್ಯ ಹಣಕಾಸು ಸಚಿವ ಅಜಿತ್ ಪವಾರ್] ಅವರೊಂದಿಗೆ ಮಾತನಾಡಿದ್ದೇನೆ” ಎಂದು ಅವರು ಹೇಳಿದ್ದಾರೆ.
ಮೇ 3 ರಂದು, ಅಜಿತ್ ಪವಾರ್ ನೇತೃತ್ವದ ಹಣಕಾಸು ಇಲಾಖೆಯು ಅವರಿಗೆ ತಿಳಿಸದೆ ತಮ್ಮ ಸಚಿವಾಲಯದಿಂದ ಹಣವನ್ನು ಅಕ್ರಮವಾಗಿ ತಿರುಗಿಸಿದೆ ಎಂದು ಶಿರ್ಸತ್ ಆರೋಪಿಸಿದ್ದರು. “ಅವರು [ಬಜೆಟ್ ಸಮಯದಲ್ಲಿ] ನನನಗೆ ತಿಳಿಸದೆ ನನ್ನ ಇಲಾಖೆಯಿಂದ 7,000 ಕೋಟಿ ರೂಪಾಯಿಗಳನ್ನು ತಿರುಗಿಸಿದ್ದಾರೆ” ಎಂದು ಅವರು ಹೇಳಿದ್ದರು.
“ಸರ್ಕಾರವು ಸಾಮಾಜಿಕ ನ್ಯಾಯ ಇಲಾಖೆ ಕಾರ್ಯನಿರ್ವಹಿಸಲು ಬಯಸದಿದ್ದರೆ ಅಥವಾ ಅವರು ಹಣವನ್ನು ಖರ್ಚು ಮಾಡಲು ಬಯಸದಿದ್ದರೆ, ಅವರು ಈ ಇಲಾಖೆಯನ್ನು ಮುಚ್ಚಬೇಕು.” ಎಂದು ಅವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗೆ ಹಣವನ್ನು ತಿರುಗಿಸುವುದು ಮುಂದುವರಿದರೆ, ಹಲವಾರು ಯೋಜನೆಗಳು ಸ್ಥಗಿತಗೊಳ್ಳಬಹುದು ಎಂದು ಶಿರ್ಸತ್ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಲಡ್ಕಿ ಬಹಿನ್ ಯೋಜನೆಯನ್ನು ತಾನು ವಿರೋಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಚುನಾವಣೆಯಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಇದು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.
ಲಡ್ಕಿ ಬಹಿನ್ ಯೋಜನೆಯಡಿಯಲ್ಲಿ, ವಾರ್ಷಿಕ ಕುಟುಂಬ ಆದಾಯ 2.5 ಲಕ್ಷ ರೂ.ಗಿಂತ ಕಡಿಮೆ ಇರುವ 21 ರಿಂದ 65 ವರ್ಷದೊಳಗಿನ ಮಹಿಳೆಯರು ನೇರ ಬ್ಯಾಂಕ್ ವರ್ಗಾವಣೆಯ ರೂಪದಲ್ಲಿ ತಿಂಗಳಿಗೆ 1,500 ರೂ.ಗಳನ್ನು ಪಡೆಯುತ್ತಾರೆ.
ನವೆಂಬರ್‌ನಲ್ಲಿ ನಡೆದ 288 ಸದಸ್ಯರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಮಹಾಯುತಿ ಮೈತ್ರಿಕೂಟ 230 ಸ್ಥಾನಗಳನ್ನು ಗೆಲ್ಲುವಲ್ಲಿ ಈ ನಗದು ವರ್ಗಾವಣೆ ಯೋಜನೆ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಹೇಳಲಾಗುತ್ತದೆ. ಮೈತ್ರಿಯಲ್ಲಿ ಬಿಜೆಪಿ, ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಬಣ ಇವೆ. ಚುನಾವಣೆಯಲ್ಲಿ ಮಹಿಳೆಯರಿಗೆ


