ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಕೇಂದ್ರಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ ದಾಳಿಯ ಗಂಟೆಗಳ ನಂತರ, ಬುಧವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ಬರುವ ಕನಿಷ್ಠ 430 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ದಾಳಿ ಮುಗಿದ ಹತ್ತು ನಿಮಿಷಗಳ ನಂತರ, ವಿಮಾನ ಹಾರಾಟವನ್ನು ಟ್ರ್ಯಾಕ್ ಮಾಡುವ ಫ್ಲೈಟ್‌ರಾಡರ್ 24, ಪಾಕಿಸ್ತಾನದ ವಾಯುಪ್ರದೇಶದಿಂದ ಹೆಚ್ಚಿನ ವಿಮಾನಗಳು ಬೇರೆಡೆಗೆ ತಿರುಗುತ್ತಿರುವುದನ್ನು ತೋರಿಸುವ ಚಿತ್ರಗಳನ್ನು ಬಿಡುಗಡೆ ಮಾಡಿದೆ.
ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಪಂಜಾಬ್ ಈ ಐದು ರಾಜ್ಯಗಳಲ್ಲಿ ಹರಡಿರುವ ಭಾರತದ 27 ವಿಮಾನ ನಿಲ್ದಾಣಗಳನ್ನು ನಾಗರಿಕ ಕಾರ್ಯಾಚರಣೆಗಳಿಗೆ ಮುಚ್ಚಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲವೊಂದು ತಿಳಿಸಿದೆ ಎಂದು TNIE ವರದಿ ಮಾಡಿದೆ.
“ಈಗ, ನಿಲ್ದಾಣಗಳ ಮುಚ್ಚುವಿಕೆಯು ಅನಿರ್ದಿಷ್ಟಾವಧಿಗೆ ತಲುಪಿದೆ ಮತ್ತು ಮುಂದಿನ ಪ್ರಾರಂಭದ ದಿನಾಂಕಗಳನ್ನು ನಂತರ ತಿಳಿಸಲಾಗುವುದು” ಎಂದು ಮೂಲಗಳು ತಿಳಿಸಿವೆ.
ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರ್ಮಿಂಗ್ಹ್ಯಾಮ್‌ನಿಂದ ಮತ್ತು ಗ್ಯಾಟ್ವಿಕ್‌ನ ಆಗಮಿಸುತ್ತಿದ್ದ ಎರಡು ಅಂತರರಾಷ್ಟ್ರೀಯ ವಿಮಾನಗಳನ್ನು ದೆಹಲಿಗೆ ತಿರುಗಿಸಲಾಗುತ್ತಿದೆ ಎಂದು ಏರ್ ಇಂಡಿಯಾ ನಂತರ ಘೋಷಿಸಿತು.
ಮೇ 10 ರವರೆಗೆ ಜಮ್ಮು, ಶ್ರೀನಗರ, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್‌ಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ ಎಂದು ಏರ್ ಇಂಡಿಯಾ ಹೇಳಿದೆ.
“ವಾಯುಪ್ರದೇಶ ನಿರ್ಬಂಧಗಳ ಕುರಿತ ಸರ್ಕಾರದ ಅಧಿಸೂಚನೆಯಿಂದಾಗಿ, ಹಲವು ವಿಮಾನ ನಿಲ್ದಾಣಗಳಿಂದ (ಅಮೃತಸರ, ಬಿಕಾನೇರ್, ಚಂಡೀಗಢ, ಧರ್ಮಶಾಲಾ, ಗ್ವಾಲಿಯರ್, ಜಮ್ಮು, ಜೋಧ್‌ಪುರ, ಕಿಶನ್‌ಗಢ, ಲೇಹ್, ರಾಜ್‌ಕೋಟ್ ಮತ್ತು ಶ್ರೀನಗರ) 165ಕ್ಕೂ ಹೆಚ್ಚು ಇಂಡಿಗೋ ವಿಮಾನಗಳನ್ನು ಮೇ 10, 2025 ರಂದು ಬೆಳಿಗ್ಗೆ 5.29 ರವರೆಗೆ ರದ್ದುಗೊಳಿಸಲಾಗಿದೆ” ಎಂದು ಇಂಡಿಗೊ ಹೇಳಿದೆ.
ಲೇಹ್, ಶ್ರೀನಗರ, ಜಮ್ಮು, ಧರ್ಮಶಾಲಾ, ಕಾಂಡ್ಲಾ ಮತ್ತು ಅಮೃತಸರಕ್ಕೆ ಹೋಗುವ ಮತ್ತು ಅಲ್ಲಿಂದ ಹೊರಡುವ ತನ್ನ ವಿಮಾನಗಳನ್ನು ರದ್ದುಗೊಳಿಸುವುದಾಗಿ ಎಂದು ಸ್ಪೈಸ್‌ಜೆಟ್ ಘೋಷಿಸಿದೆ. ಅದೇ ವೇಳೆ ಆಕಾಶ ಏರ್, ಶ್ರೀನಗರಕ್ಕೆ ಹೋಗುವ ಮತ್ತು ಅಲ್ಲಿಂದ ಹೊರಡುವ ತನ್ನ ವಿಮಾನಗಳನ್ನು ರದ್ದುಗೊಳಿಸಿದೆ.
ಆಪರೇಷನ್ ಸಿಂಧೂರ ಹಿನ್ನಲೆ ಫ್ರಾಂಕ್‌ಫರ್ಟ್‌ನಿಂದ ಬ್ಯಾಂಕಾಕ್‌ಗೆ ಹೋಗುವ ಥಾಯ್ ಏರ್‌ವೇಸ್ ವಿಮಾನವನ್ನು (TG-921) ದುಬೈಗೆ ತಿರುಗಿಸಲಾಗಿದೆ ಎಂದು ವರದಿಯಾಗಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಯುಪಿ| ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಅಪ್ರಾಪ್ತ ಸೇರಿದಂತೆ ಇಬ್ಬರ ಬಂಧನ
ಯುಪಿ| ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಅಪ್ರಾಪ್ತ ಸೇರಿದಂತೆ ಇಬ್ಬರ ಬಂಧನ

