ಭಾರತ ಮತ್ತು ಪಾಕಿಸ್ತಾನದ ನಡುವಿನ ನಿರಂತರ ಉದ್ವಿಗ್ನತೆ, ಶೆಲ್ ದಾಳಿ ಮತ್ತು ದಾಳಿಗಳ ಬಗ್ಗೆ ಜಮಾತೆ-ಇ-ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೈನಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. “ಯುದ್ಧ ಮತ್ತು ಕಲಹ ಯಾರ ಹಿತಾಸಕ್ತಿಯಲ್ಲೂ ಅಲ್ಲ; ಗಡಿ ಪ್ರದೇಶಗಳಲ್ಲಿ ನಾಗರಿಕರಿಗೆ ರಕ್ಷಣೆ ಬೇಕು” ಎಂದು ಆಗ್ರಹಿಸಿದ್ದಾರೆ.
ಸಂಘರ್ಷವನ್ನು ಹೆಚ್ಚಿಸುವ ಉದ್ದೇಶವಿಲ್ಲ ಎಂದು ಭಾರತ ಸರ್ಕಾರ ಪದೇ ಪದೇ ಹೇಳುತ್ತಿರುವುದನ್ನು ಹುಸೈನಿ ಸ್ವಾಗತಿಸಿದರು.
ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ತಮ್ಮ ಜನರ ಸಮೃದ್ಧಿ-ಪ್ರಗತಿಗಾಗಿ ಶ್ರಮಿಸುತ್ತಿರುವಾಗ ಬಡತನ ಮತ್ತು ಅಭಾವದೊಂದಿಗೆ ಹೋರಾಡುತ್ತಿವೆ ಎಂದು ಅವರು ಒತ್ತಿ ಹೇಳಿದರು.
ಎರಡೂ ರಾಷ್ಟ್ರಗಳು ಪರಮಾಣು ಶಕ್ತಿಗಳಾಗಿರುವುದರಿಂದ ಯುದ್ಧ ಮತ್ತು ಅಶಾಂತಿ ಯಾರ ಹಿತಾಸಕ್ತಿಗೂ ಪೂರಕವಾಗಿರುವುದಿಲ್ಲ. ಎರಡೂ ದೇಶಗಳ ಬಡ ಜನಸಂಖ್ಯೆಗೆ ಹೆಚ್ಚು ಹಾನಿ ಮಾಡುತ್ತದೆ ಎಂದು ಅವರು ಎಚ್ಚರಿಸಿದರು. ಸುಸ್ಥಿರ ಶಾಂತಿಯತ್ತ ತ್ವರಿತ ಮತ್ತು ಸ್ಪಷ್ಟ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಎರಡೂ ಕಡೆಯ ರಾಜಕೀಯ ಮತ್ತು ಮಿಲಿಟರಿ ನಾಯಕತ್ವವನ್ನು ಒತ್ತಾಯಿಸಿದರು.
ಭಾರತದ ಗಡಿ ಪ್ರದೇಶಗಳಲ್ಲಿ ನಾಗರಿಕ ಸಾವುನೋವುಗಳ ವರದಿಗಳನ್ನು ಉಲ್ಲೇಖಿಸಿದ ಹುಸೈನಿ, ಮುಗ್ಧ ನಾಗರಿಕರು ಎದುರಿಸುತ್ತಿರುವ ಬೆದರಿಕೆಗಳು ತುರ್ತು ಗಮನವನ್ನು ಬಯಸುತ್ತವೆ ಎಂದು ಒತ್ತಿ ಹೇಳಿದ ಅವರು, ಕೊಲ್ಲಲ್ಪಟ್ಟವರ ಕುಟುಂಬಗಳಿಗೆ ಅವರು ಹೃತ್ಪೂರ್ವಕ ಸಂತಾಪ ಸೂಚಿಸಿದರು. ಅವರಿಗೆ ಅಗತ್ಯ ನೆರವು ಮತ್ತು ರಕ್ಷಣೆಯನ್ನು ಒದಗಿಸಲು ಸರ್ಕಾರವನ್ನು ಆದ್ಯತೆ ನೀಡುವಂತೆ ಕರೆ ನೀಡಿದರು.
ಪಾಕಿಸ್ತಾನದ ಶೆಲ್ ದಾಳಿಯಲ್ಲಿ 4 ಮಕ್ಕಳು ಸೇರಿದಂತೆ ಕನಿಷ್ಠ 16 ನಾಗರಿಕರು ಸಾವನ್ನಪ್ಪಿದ್ದಾರೆ. ಒಬ್ಬ ಸೈನಿಕ ಕೂಡ ಸಾವನ್ನಪ್ಪಿದ್ದಾನೆ.
“ಮಾಧ್ಯಮ ವರದಿಗಳ ಪ್ರಕಾರ, ಗಡಿಯ ಇನ್ನೊಂದು ಬದಿಯಲ್ಲಿ ಹಲವಾರು ನಾಗರಿಕರು ಸಹ ಸಾವನ್ನಪ್ಪಿದ್ದಾರೆ. ಜನಾಂಗ, ಧರ್ಮ, ಭಾಷೆ, ರಾಷ್ಟ್ರೀಯತೆ ಅಥವಾ ವರ್ಗವನ್ನು ಲೆಕ್ಕಿಸದೆ ಮುಗ್ಧ ನಾಗರಿಕರನ್ನು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುವುದು ತೀವ್ರ ದುರಂತ. ಎಲ್ಲ ಸಂದರ್ಭಗಳಲ್ಲಿಯೂ ಮುಗ್ಧ ಮಾನವ ಜೀವಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು ಎಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದರು.
ಗಡಿಯ ಪಾಕಿಸ್ತಾನದ ಭಾಗದಲ್ಲಿ ನಾಗರಿಕರ ಸಾವುಗಳ ಮಾಧ್ಯಮ ವರದಿಗಳನ್ನು ಅವರು ಒಪ್ಪಿಕೊಂಡರು. ಅವರ ಗುರುತನ್ನು ಲೆಕ್ಕಿಸದೆ, ಮುಗ್ಧ ನಾಗರಿಕರನ್ನು; ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುವುದು ತೀವ್ರ ದುರಂತ ಎಂದು ಹೇಳಿದರು. ಎಲ್ಲಾ ಸಂದರ್ಭಗಳಲ್ಲಿಯೂ ಮುಗ್ಧ ಮಾನವ ಜೀವಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ದೇಶಗಳ ಸಾಮೂಹಿಕ ಜವಾಬ್ದಾರಿಯನ್ನು ಅವರು ಒತ್ತಿ ಹೇಳಿದರು.
ಈ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಗಂಭೀರ ಸಮಸ್ಯೆ ಎಂದು ಎತ್ತಿ ತೋರಿಸಿದ ಹುಸೇನಿ, ಭಾರತ ಮತ್ತು ಪಾಕಿಸ್ತಾನ ಎರಡೂ ನಾಗರಿಕರಿಗೆ ಭಾರಿ ನಷ್ಟವನ್ನುಂಟುಮಾಡಿವೆ. ಈಗ ಸಂಕುಚಿತ ಹಿತಾಸಕ್ತಿಗಳನ್ನು ಮೀರಿ ಈ ಪ್ರಮುಖ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವತ್ತ ಗಮನಹರಿಸುವ ಸಮಯ ಬಂದಿದೆ” ಎಂದು ಅವರು ಹೇಳಿದರು.
ಪಾಕಿಸ್ತಾನದ ಸಶಸ್ತ್ರ ಪಡೆಗಳು ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಿಗ್ಗೆ ಭಾರತದ ಪಶ್ಚಿಮ ಗಡಿಯಲ್ಲಿ ಡ್ರೋನ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಬಳಸಿ ಅನೇಕ ದಾಳಿಗಳನ್ನು ನಡೆಸಿದವು ಎಂದು ಭಾರತೀಯ ಸೇನೆ ಹೇಳಿದೆ. ಆದರೆ, ಯಾವುದೇ ಸಾವುನೋವುಗಳು ವರದಿಯಾಗಿಲ್ಲ.
“ಪಾಕಿಸ್ತಾನ ಸಶಸ್ತ್ರ ಪಡೆಗಳು 2025 ರ ಮೇ 08 ಮತ್ತು 09 ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ಡ್ರೋನ್‌ಗಳು ಮತ್ತು ಇತರ ಯುದ್ಧಸಾಮಗ್ರಿಗಳನ್ನು ಬಳಸಿ ಅನೇಕ ದಾಳಿಗಳನ್ನು ನಡೆಸಿದವು” ಎಂದು ಸೇನೆಯು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಭಾರತ – ಪಾಕ್ ಸಂಘರ್ಷ ಹಿನ್ನಲೆ | ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗುತ್ತಿರುವ ಸುಳ್ಳುಗಳು


