ಕುರಾನ್ ಮತ್ತು ಹದೀಸ್‌ನ ಮೂರು ಪ್ರತಿಗಳು ಹೊಲದಲ್ಲಿ ಸುಟ್ಟ ಸ್ಥಿತಿಯಲ್ಲಿ (ಮೇ 12 ರಂದು) ಪತ್ತೆಯಾದ ನಂತರ ಬೆಳಗಾವಿಯು ಉದ್ವಿಗ್ನ ಸಂದರ್ಭಕ್ಕೆ ಸಾಕ್ಷಿಯಾಯಿತು.
ಈ ಘಟನೆ ಮೇ 11 ರಂದು ಸಂತಿ ಬಸ್ತವಾಡ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಪೊಲೀಸರ ಪ್ರಕಾರ, ಅಪರಿಚಿತ ವ್ಯಕ್ತಿಗಳು ನಿರ್ಮಾಣ ಹಂತದಲ್ಲಿರುವ ಮಸೀದಿಗೆ ನುಗ್ಗಿ ಪ್ರಾರ್ಥನೆ ಸಲ್ಲಿಸಲು ಇರಿಸಲಾಗಿದ್ದ ಕುರಾನ್ ಮತ್ತು ಹದೀಸ್‌ನ ಮೂರು ಪ್ರತಿಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಮರುದಿನ, ಭಕ್ತರು ನಮಾಜ್ ಮಾಡಲು ಒಟ್ಟುಗೂಡಿದಾಗ, ಧಾರ್ಮಿಕ ಪುಸ್ತಕಗಳು ಕಾಣೆಯಾಗಿರುವುದನ್ನು ನೋಡಿದ್ದಾರೆ. ನಂತರ ಹತ್ತಿರದ ಹೊಲದಲ್ಲಿ ಪ್ರತಿಗಳನ್ನು ಸುಟ್ಟು ಹಾಕಿರುವುದು ಕಂಡುಬಂದಿದೆ.
ಹೆಚ್ಚಿನ ಸಂಖ್ಯೆಯ ಮುಸ್ಲಿಮ್ ಸದಸ್ಯರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ, ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.
ನಂತರ, ಸಂತಿ ಬಸ್ತವಾಡದಿಂದ ರಾಣಿ ಚೆನ್ನಮ್ಮ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ಅಲ್ಲಿ ಪ್ರತಿಭಟನಾಕಾರರು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿ, ರಸ್ತೆ ತಡೆದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಕುರಾನ್ ಸುಟ್ಟ ವದಂತಿಗಳ ನಡುವೆ ನಾಗ್ಪುರದಲ್ಲಿ ಪ್ರತಿಭಟನಾಕಾರರೊಂದಿಗೆ ಪೊಲೀಸರ ಘರ್ಷಣೆ
ಕೋಮು ಉದ್ವಿಗ್ನತೆಯನ್ನು ಗ್ರಹಿಸಿದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮುಸ್ಲಿಂ ಸಮುದಾಯದ ಹಿರಿಯ ನಾಯಕರೊಂದಿಗೆ ಶಾಂತಿ ಸಭೆ ನಡೆಸಿ ಎರಡು ದಿನಗಳಲ್ಲಿ ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಭರವಸೆ ನೀಡಿದರು.
“ಘಟನೆಯ ದಿನದಂದು ಕೆಲವು ದುರಸ್ತಿ ಕಾರ್ಯಕ್ಕಾಗಿ ಕಟ್ಟಡದ ಮೇಲೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾವನ್ನು ಕಾಕತಾಳೀಯವಾಗಿ ತೆಗೆದುಹಾಕಲಾಗಿದೆ. ಘಟನೆಯ ತನಿಖೆ ನಡೆಯುತ್ತಿದೆ, ನಾವು ಅಪರಾಧಿಗಳನ್ನು ಬಂಧಿಸುತ್ತೇವೆ” ಎಂದು ಬೆಳಗಾವಿ ಪೊಲೀಸ್ ಆಯುಕ್ತ ಇಯಾಡಾ ಮಾರ್ಟಿನ್ ಹೇಳಿದರು.
2021ರ ಕೊರೊನಾ ಉಲ್ಬಣದ ವೇಳೆ ರಾಜ್ಯದಲ್ಲಿ 2 ಲಕ್ಷ ಹೆಚ್ಚುವರಿ ಸಾವು: ವರದಿ


