ಪ್ರಮುಖ ಗುಜರಾತಿ ಪತ್ರಿಕೆ, ಕೇಂದ್ರ ಸರ್ಕಾರದ ವಿರುದ್ಧ ಟೀಕಾತ್ಮಕ ಲೇಖನಗಳನ್ನು ಪ್ರಕಟಿಸುವ ‘ಗುಜರಾತ್ ಸಮಾಚಾರ್’ನ ಮಾಲೀಕರಲ್ಲಿ ಒಬ್ಬರಾದ ಬಾಹುಬಲಿ ಶಾ ಅವರನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ. ಬಾಹುಬಲಿ ಶಾ ಅವರು ಗುಜರಾತ್ ಸಮಾಚಾರ್ ಅನ್ನು ಹೊಂದಿರುವ ಲೋಕ ಪ್ರಕಾಶನ್ ಲಿಮಿಟೆಡ್‌ನ ನಿರ್ದೇಶಕರಲ್ಲಿ ಒಬ್ಬರು. ಗುಜರಾತ್ ಸಮಾಚಾರ್ ಗುಜರಾತಿನ ಅತಿದೊಡ್ಡ ಮತ್ತು ಪ್ರಭಾವಿ ಗುಜರಾತಿ ದಿನಪತ್ರಿಕೆಯಾಗಿದ್ದು, ತನ್ನ ಸ್ವತಂತ್ರ ಸಂಪಾದಕೀಯ ನಿಲುವಿಗೆ ಹೆಸರುವಾಸಿಯಾಗಿದೆ. ಪಹಲ್ಗಾಮ್ ದಾಳಿಯಲ್ಲಿ
ಅವರ ಹಿರಿಯ ಸಹೋದರ ಶ್ರೇಯಂಶ್ ಶಾ ಅವರು ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿದ್ದಾರೆ. ಶ್ರೇಯಂಶ್ ಶಾ ನಡೆಸುತ್ತಿರುವ ಗುಜರಾತಿ ಸುದ್ದಿ ವಾಹಿನಿ ಜಿಎಸ್‌ಟಿವಿಯ ಡಿಜಿಟಲ್ ಸೇವೆಗಳ ಮುಖ್ಯಸ್ಥ ತುಷಾರ್ ದೇವ್, ಶುಕ್ರವಾರ ಮುಂಜಾನೆ ಬಾಹುಬಲಿ ಶಾ ಅವರನ್ನು ಇಡಿ ಬಂಧಿಸಿದೆ ಎಂದು ಹೇಳಿದ್ದಾರೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿರುವ ದೇವ್ ಅವರು, ಬಾಹುಬಲಿ ಶಾ ಅವರನ್ನು ಮೊದಲು ವಿಎಸ್ ಆಸ್ಪತ್ರೆಗೆ ಇಡಿ ಕರೆದೊಯ್ಯಿತು. ಮತ್ತು ನಂತರ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ನಗರದ ಜೈಡಸ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅವರು ಹೇಳಿದ್ದಾರೆ.
ತನ್ನ ಕ್ರಮದ ಹಿಂದಿನ ಕಾರಣಗಳ ಬಗ್ಗೆ ಇಡಿ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ವರದಿಗಳು ಉಲ್ಲೇಖಿಸಿವೆ. ಶುಕ್ರವಾರ ಮುಂಜಾನೆ ಇಡಿ ಬಾಹುಬಲಿ ಶಾ ಅವರನ್ನು ಬಂಧಿಸಿದೆ ಮತ್ತು ಅವರು ಆಸ್ಪತ್ರೆಯಲ್ಲಿದ್ದಾರೆ ಎಂದು ಗುಜರಾತ್ ಸಮಾಚಾರ್ ಉದ್ಯೋಗಿಯೊಬ್ಬರು ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆಯು ಅಹಮದಾಬಾದ್‌ನಲ್ಲಿರುವ GSTV ಆವರಣವನ್ನು ಸುಮಾರು 36 ಗಂಟೆಗಳ ಕಾಲ ಶೋಧಿಸಿದೆ. ಐಟಿ ಅಧಿಕಾರಿಗಳು ಹೋದ ಕೂಡಲೇ ಗುರುವಾರ ಸಂಜೆ ಇಡಿ ಆವರಣದ ಮೇಲೆ ದಾಳಿ ನಡೆಸಿತು ಎಂದು ದೇವ್ ಮತ್ತೊಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್‌ನ ರಾಹುಲ್ ಗಾಂಧಿ, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಮತ್ತು ಇತರ ವಿರೋಧ ಪಕ್ಷದ ನಾಯಕರು ಇದನ್ನು ಸರ್ಕಾರದಿಂದ ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸುವ ಪ್ರಯತ್ನವೆಂದು ಖಂಡಿಸಿದ್ದಾರೆ. ಗುಜರಾತ್ ಸಮಾಚಾರ್‌ನ ಟೀಕಾತ್ಮಕ ವರದಿಗಳಿಗೆ ಸರ್ಕಾರದಿಂದ ಸೇಡು ತೀರಿಸಿಕೊಳ್ಳುವ ಕ್ರಮವೆಂದು ಅವರು ಆರೋಪಿಸಿದ್ದಾರೆ.
ಗುಜರಾತ್ ಶಾಸಕ ಮತ್ತು ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ ಜಿಗ್ನೇಶ್ ಮೇವಾನಿ ಅವರು ಇಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ 25 ವರ್ಷಗಳಿಂದ ಗುಜರಾತ್ ಸಮಾಚಾರ್ ಪತ್ರಿಕೆ ಕೇಂದ್ರ ಸರ್ಕಾರವನ್ನು ಟೀಕಿಸುವ ವರದಿಗಳನ್ನು ಪ್ರಕಟಿಸುತ್ತಿರುವುದರಿಂದ ಗುಜರಾತ್ ಸಮಾಚಾರ್ ಮತ್ತು ಅದರ ಮಾಲೀಕರನ್ನು ಗುರಿಯಾಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಟೀಕಾತ್ಮಕ ಲೇಖನಗಳನ್ನು ಪ್ರಕಟಿಸುವ ಗುಜರಾತ್ ಸಮಾಚಾರ್, ವಿಶೇಷವಾಗಿ ಇತ್ತೀಚೆಗೆ ಭಾರತ-ಪಾಕಿಸ್ತಾನ ಒಡಂಬಡಿಕೆ, ಪೆಹಲ್ಗಾಮ್ ಮತ್ತು ಪುಲ್ವಾಮಾ ದಾಳಿಯಂತಹ ಘಟನೆಗಳ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿ ಬರೆದಿತ್ತು.
ಅದರಲ್ಲೂ ಪಹಲ್ಗಾಮ್ ಭಯೋತ್ಪಾದಕ ದಾಳಿಯ (ಏಪ್ರಿಲ್ 22, 2025) ಕುರಿತಾದ ವರದಿಗಳು ಸರ್ಕಾರದ ಭದ್ರತಾ ವೈಫಲ್ಯಗಳನ್ನು ತೀವ್ರವಾಗಿ ಟೀಕಿಸುವ ನಿಲುವನ್ನು ಪತ್ರಿಕೆ ತೆಗೆದುಕೊಂಡಿತ್ತು. ಪತ್ರಿಕೆಯು ಕೇಂದ್ರ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರದ ಆಡಳಿತವನ್ನು ಭಯೋತ್ಪಾದಕ ದಾಳಿಗಳನ್ನು ತಡೆಯುವಲ್ಲಿ ವಿಫಲವಾದದ್ದಕ್ಕಾಗಿ ಹೊಣೆಹೊರುವಂತೆ ಕೇಳಿತ್ತು. ಅಲ್ಲದೆ, ಕೇಂದ್ರ ಸರ್ಕಾರದ ಭಯೋತ್ಪಾದನೆ-ವಿರೋಧಿ ಕಾರ್ಯತಂತ್ರಗಳು ಮತ್ತು ಗುಪ್ತಚರ ವೈಫಲ್ಯಗಳನ್ನು ಪ್ರಶ್ನಿಸಿತ್ತು. ಈ ಘಟನೆಯನ್ನು 2019ರ ಪುಲ್ವಾಮಾ ದಾಳಿಯೊಂದಿಗೆ ಹೋಲಿಕೆ ಮಾಡಿ, ಭದ್ರತಾ ವ್ಯವಸ್ಥೆಯಲ್ಲಿನ ನಿರಂತರ ಕೊರತೆಗಳನ್ನು ಎತ್ತಿ ತೋರಿಸಿತ್ತು.
2019ರಲ್ಲಿ, ಗುಜರಾತ್ ಸಮಾಚಾರ್‌ನ ಬ್ಯಾನರ್ ಹೆಡ್‌ಲೈನ್ “56 ನಿ ಛಾತಿನಿ ಕಾಯರ್ತಾ: ಆತಂಕಿಯೋ ಬೆಫಾಮ್, 44 ಜವಾನ್ ಶಹೀದ್” (56 ಇಂಚಿನ ಎದೆಯ ಕಾಯರತೆ: ಭಯೋತ್ಪಾದಕರಿಗೆ ಮುಕ್ತ ಕೈ, 44 ಯೋಧರು ಹುತಾತ್ಮರಾದರು) ಎಂಬ ಶೀರ್ಷಿಕೆಯು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಪಹಲ್ಗಾಮ್ ದಾಳಿಯಲ್ಲಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮಂಗಳೂರು ಕರಾವಳಿಯಲ್ಲಿ ಮುಳುಗುತ್ತಿದ್ದ ಹಡಗಿನಿಂದ ಆರು ಸಿಬ್ಬಂದಿ ರಕ್ಷಿಸಿದ ಭಾರತೀಯ ಕರಾವಳಿ ರಕ್ಷಣಾ ಪಡೆ
ಮಂಗಳೂರು ಕರಾವಳಿಯಲ್ಲಿ ಮುಳುಗುತ್ತಿದ್ದ ಹಡಗಿನಿಂದ ಆರು ಸಿಬ್ಬಂದಿ ರಕ್ಷಿಸಿದ ಭಾರತೀಯ ಕರಾವಳಿ ರಕ್ಷಣಾ ಪಡೆ

