ಪಹಲ್ಗಾಮ್ ದಾಳಿ ಮತ್ತು ಪಾಕ್ -ಭಾರತ ನಡುವೆ ನಡೆದ ‘ಯುದ್ಧ’ದ ಕುರಿತು ‘ಕೌಂಟರ್ ಕರೆಂಟ್ಸ್’ನ ಬಿನುದಾ ಅವರು 10 ಪ್ರಶ್ನೆಗಳ ಒಂದು ಪಟ್ಟಿ ಮಾಡಿದ್ದಾರೆ. ಅವುಗಳು ಈ ಕೆಳಗಿನಂತೆ ಇವೆ.
1. ಭಯೋತ್ಪಾದಕರು ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲನ್ನು ಹೇಗೆ ತಲುಪಿದರು?
2. ಬೈಸರನ್ ಹುಲ್ಲುಗಾವಲು ಪ್ರವಾಸಿಗರಿಗೆ ಮುಕ್ತವಾಗಿದೆ ಎಂದು ಸರ್ಕಾರಕ್ಕೆ ಏಕೆ ತಿಳಿದಿರಲಿಲ್ಲ?
3. ಬೈಸರನ್ ಹುಲ್ಲುಗಾವಲಿನಲ್ಲಿ ಭದ್ರತೆ ಏಕೆ ಇರಲಿಲ್ಲ?
4. ಪಹಲ್ಗಾಮ್ ದಾಳಿಯ ನಂತರ ಭಯೋತ್ಪಾದಕರನ್ನು ಬಂಧಿಸಲಾಗಿದೆಯೇ?
5. ದಾಳಿ ನಡೆಸಿದ ಭಯೋತ್ಪಾದಕರು ಪಾಕಿಸ್ತಾನ ಮೂಲದವರು ಎಂದು ಭಾರತ ಸರ್ಕಾರಕ್ಕೆ ಹೇಗೆ ತಿಳಿಯಿತು? ಅದು ಯಾವ ಮಾಹಿತಿಯ ಆಧಾರದ ಮೇಲೆ ಗೊತ್ತಾಯಿತು?
6. ಭಾರತ ಸರ್ಕಾರಕ್ಕೆ ಭಯೋತ್ಪಾದಕರ ಬಗ್ಗೆ ಗುಪ್ತಚರ ಮಾಹಿತಿ ಇದ್ದಿದ್ದರೆ, ಅವರನ್ನು ಇಲ್ಲಿಯವರೆಗೆ ಏಕೆ ಬಂಧಿಸಲು ಸಾಧ್ಯವಾಗಲಿಲ್ಲ?
7. ಈ ಭದ್ರತಾ ಲೋಪಗಳಿಗೆ ಯಾರು ಹೊಣೆ?
8. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ಆಂತರಿಕ ವಿಷಯ ಅಥವಾ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಷಯದ ಕುರಿತು ಮಾತುಕತೆ ನಡೆಸಲು ಅಮೆರಿಕವನ್ನು ಯಾರು ಆಹ್ವಾನಿಸಿದರು?
9. ಭಾರತ ಸರ್ಕಾರವು ಕದನ ವಿರಾಮ ಘೋಷಿಸುವ ಮೊದಲು ಡೊನಾಲ್ಡ್ ಟ್ರಂಪ್ ಏಕೆ ಕದನ ವಿರಾಮ ಘೋಷಿಸಿದರು?
10. ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನು ಮುಂದೆ ಭಯೋತ್ಪಾದಕ ದಾಳಿಗಳು ನಡೆಯುವುದಿಲ್ಲ ಎಂದು ಭಾರತ ಸರ್ಕಾರ ಖಾತರಿ ನೀಡಬಹುದೇ?
ಹೈದರಾಬಾದ್: ವಿಶ್ವ ಸುಂದರಿ ಸ್ಪರ್ಧೆಗಾಗಿ ಇಸ್ರೇಲ್ ಧ್ವಜ ಕೆಳಗಿಳಿಸಿದ ಯುವಕ; ಬಂಧನ


