ರಾಜ್ಯ ಕಾಂಗ್ರೆಸ್ ಪಕ್ಷವು ಈ ಹಿಂದೆ ಬೊಮ್ಮಾಯಿ ವಿರುದ್ಧ ಪೇ ಸಿಎಂ ಚಳವಳಿ ಮಾಡಿದ್ದರು, ಆದರೆ ಈಗಲೂ ಭ್ರಷ್ಟಾಚಾರ ನಿಂತಿಲ್ಲ. ಹಾಗಾದರೆ ಇವರು ಯಾವ ಮುಖ ಇಟ್ಟುಕೊಂಡು ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ನಡೆಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸಮಾಲೀ ಪಾಟೀಲ್ ಮಂಗಳವಾರ ಪ್ರಶ್ನಿಸಿದ್ದಾರೆ. ಅವರು ಬೆಂಗಳೂರಿನ ಗಾಂಧಿ ಭವನದಲ್ಲಿ ‘ಸಂಯುಕ್ತ ಹೋರಾಟ ಕರ್ನಾಟಕ’ ಆಯೋಜಿಸಿದ್ದ ಜನಾಗ್ರಹ ಸಮಾವೇಶದಲ್ಲಿ ಪ್ರಸ್ತಾವಿಕವಾಗಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಯಾವ ಮುಖ
‘ಸಂಯುಕ್ತ ಹೋರಾಟ-ಕರ್ನಾಟಕ’ ರಾಜ್ಯದ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯಾಗಿದೆ. ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷಗಳಾದ ಹಿನ್ನಲೆ ಪಕ್ಷವು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬೃಹತ್ ಸಾಧನಾ ಸಮಾವೇಶವನ್ನು ಮಂಗಳವಾರ ಆಯೋಜಿಸಿದೆ. ಈ ಸಮಾವೇಶದ ನೈತಿಕತೆಯನ್ನು ಪ್ರಶ್ನಿಸಿ ಸಂಯುಕ್ತ ಹೋರಾಟ – ಕರ್ನಾಟಕ ಜನ ಚಳವಳಿಗಳಿಂದ ಜನಾಗ್ರಹ ಸಮಾವೇಶವನ್ನು ನಡೆಸಿದೆ.
ಸಮಾವೇಶವನ್ನು ಚೆನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್, ನೈಸ್ ಭೂ ಸಂತ್ರಸ್ತ ರೈತ ಹನುಮಂತಪ್ಪ ಅವರು ಉದ್ಘಾಟಿಸಿದರು. ಉದ್ಘಾಟನೆಯ ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಚಾಮರಸಮಾಲೀ ಪಾಟೀಲ್ ಅವರು, “ಚುನಾವಣೆ ಪೂರ್ವದಲ್ಲಿ ದೊಡ್ಡ ದೊಡ್ಡ ಭರವಸೆ ನೀಡುತ್ತಾರೆ, ಆದರೆ ಅಧಿಕಾರಕ್ಕೆ ಬಂದ ನಂತರ ಅದನ್ನು ಮರೆತುಬಿಡುತ್ತಾರೆ” ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
View this post on Instagram
“ಸಿದ್ದರಾಮಯ್ಯ ಕೂಡಾ ಈ ಹಿಂದೆ ಬಿಜೆಪಿಯ ಬೊಮ್ಮಾಯಿ ಸರ್ಕಾರದ ವಿರುದ್ಧದ ನಮ್ಮ ಹೋರಾಟಗಳಿಗೆ ಬಂದು ನಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ರೈತ ವಿರೋಧಿ ನೀತಿಯನ್ನು ವಾಪಾಸು ಪಡೆಯುತ್ತೇವೆ ಎಂದಿದ್ದರು. ಆದರೆ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಯಿತು. ಇನ್ನೂ ವಾಪಾಸು ಪಡೆದಿಲ್ಲ. ಜಾನುವಾರು ಕಾಯ್ದೆ, ವಿದ್ಯುತ್ ಕಾಯ್ದೆಯ ವಿರುದ್ಧ ಮಾತನಾಡಿದ್ದರು. ಆದರೆ ಅವರಿನ್ನೂ ಅದನ್ನು ಮಾಡಿಲ್ಲ” ಎಂದು ಹೇಳಿದರು.
“ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಯಿತು, ಈ ಬಗ್ಗೆ ನಾವು ಅವರಿಗೆ ಲಿಖಿತ ಮನವಿ ಕೂಡಾ ಮಾಡಿದ್ದೇವೆ. ಆದರೆ ಅವರು ಏನೂ ಕ್ರಮ ಕೈಗೊಂಡಿಲ್ಲ. ಅವರು ಬಿಜೆಪಿ ಸಿಎಂ ಬೊಮ್ಮಾಯಿ ವಿರುದ್ಧ ಪೇ ಸಿಎಂ ಚಳವಳಿ ಮಾಡಿದರು. ಆದರೆ ಈಗಲೂ ಭ್ರಷ್ಟಾಚಾರ ನಿಂತಿಲ್ಲ. ಹಾಗಾದರೆ ಇವರು ಯಾವ ಮುಖ ಇಟ್ಟುಕೊಂಡು ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡುತ್ತಿದ್ದಾರೆ.” ಎಂದು ಪ್ರಶ್ನಿಸಿದರು.
“ಸಿದ್ದರಾಮಯ್ಯ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಜೆಪಿಯಷ್ಟೇ ಭ್ರಷ್ಟಾಚಾರ ಕರ್ನಾಟಕದಲ್ಲಿ ಬೆಳೆಯುತ್ತಿದೆ. ರಾಜ್ಯದ ಹಲವು ತಾಲೂಕುಗಳು ಭೀಕರ ಬರಗಾಲಕ್ಕೆ ತುತ್ತಾಗಿದೆ. ಅನುದಾನ ನೀಡಲ್ಲ ಎಂದು ಕೇಂದ್ರದ ವಿರುದ್ಧ ಹೋರಾಡಿ ಮೂರು ಸಾವಿರ ಅನುದಾನ ಬಿಡುಗಡೆ ಆಯಿತು. ಆದರೆ ಅದನ್ನು ರಾಜ್ಯ ಸರ್ಕಾರ ಅದನ್ನು ಸರಿಯಾಗಿ ರೈತರಿಗೆ ಹಂಚಿಲ್ಲ” ಎಂದು ಹೇಳಿದರು.
ಜನವರಿಯಲ್ಲಿ ಕಟಾವಾದ ಜೋಳಕ್ಕೆ ಎಪ್ರಿಲ್‌ನಲ್ಲಿ ಖರೀದಿ ಕೇಂದ್ರ ತೆರೆದಿದೆ. ಈಗ ನುಸಿ ಬಂದಿದೆ ಎಂದು ಸಬೂಬು ಹೇಳುತ್ತಿದ್ದಾರೆ.ಇದಕ್ಕೆ ಕಾರಣ ಯಾರು? ತಡವಾಗಿ ಖರೀದಿ ಕೇಂದ್ರ ತೆರೆದಿದ್ದು ರೈತರ ತಪ್ಪೆ? ಎಂದು ಕೇಳಿದ ಅವರು, “ತುಂಗಾ ಭದ್ರಾ ಗೇಟ್ ಹಾಳಾಗಿದೆ, ಅದನ್ನು ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದರು, ಆದರೆ ಇದುವರೆಗೂ ಯಾವುದೇ ಒಂದು ಗೇಟ್ ಅನ್ನೂ ಬಿಚ್ಚಿಲ್ಲ” ಎಂದು ಹೇಳಿದರು.
“ಈ ಸರ್ಕಾರ ರೈತರಿಗೆ ಹಲವಾರು ಭರವಸೆ ನೀಡಿದರೂ ಈವರೆಗೆ ಯಾವುದೇ ಭರವಸೆ ಈಡೇರಿಲ್ಲ. ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳಿದ್ದು ನಿಜವೇ ಆದರೂ, ಅದರ ಅರ್ಥ ಕಾಂಗ್ರೆಸ್ ಬೆಂಬಲಿಸಿ ಎಂದಲ್ಲ. ಸಂಘಟಿತ ಹೋರಾಟ ಬಹಳ ಅಗತ್ಯ. ರೈತರು, ದಲಿತರು ಅಲ್ಪಸಂಖ್ಯಾತರು, ಮಹಿಳೆಯರು ಈ ನೀತಿಗೆಟ್ಟ ಸರ್ಕಾರದ ವಿರುದ್ಧ ಸೆಟೆದು ನಿಲ್ಲಬೇಕು” ಎಂದು ಅವರು ಹೇಳಿದರು. ಕಾಂಗ್ರೆಸ್ ಯಾವ ಮುಖ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ಇಂದಿರಾ ಸೌರ ಗಿರಿ ಜಲ ವಿಕಾಸಂ ಯೋಜನೆ’ಗೆ ತೆಲಂಗಾಣ ಮುಖ್ಯಮಂತ್ರಿಯಿಂದ ಚಾಲನೆ
‘ಇಂದಿರಾ ಸೌರ ಗಿರಿ ಜಲ ವಿಕಾಸಂ ಯೋಜನೆ’ಗೆ ತೆಲಂಗಾಣ ಮುಖ್ಯಮಂತ್ರಿಯಿಂದ ಚಾಲನೆ

