ಬಿಜೆಪಿಯವರು Sorry ಸಾವರ್ಕರ್ ಅವರನ್ನು ಅಕ್ಷರಶಃ ಪಾಲನೆ ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಹೇಳಿದ್ದಾರೆ. ಪ್ರಜ್ಞೆ ಇಲ್ಲದೆ, ಮೆದುಳಿಗೂ ನಾಲಿಗೆಗೂ ಸಂಪರ್ಕವಿಲ್ಲದೆ ಮಾತನಾಡುವ ಬಿಜೆಪಿಯವರು ಕ್ಷಮೆ ಕೇಳುವುದರಲ್ಲಿ ಸಾವರ್ಕರ್ ಸಂಪ್ರದಾಯದಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಬಿಜೆಪಿಯವರು Sorry ಸಾವರ್ಕರ್‌ರನ್ನು
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದಿರುವ ಅವರು, “ಸೋಫಿಯಾ ಖುರೇಶಿ ಭಯೋತ್ಪಾದಕರ ಸಹೋದರಿ ಎಂದಿದ್ದ ವಿಜಯ್ ಶಾ ಕ್ಷಮೆ ಕೋರಿದರು. ಕಲಬುರಗಿ ಡಿಸಿ ಪಾಕಿಸ್ತಾನದಿಂದ ಬಂದವರು ಎಂದಿದ್ದ ರವಿಕುಮಾರ್ ಕ್ಷಮೆ ಕೋರಿದರು. ನನಗೆ ನಾಯಿ ಎಂದಿದ್ದ ನಾರಾಯಣಸ್ವಾಮಿಯವರು ವಿಷಾದಿಸಿದರು.” ಎಂದು ಅವರು ನೆನಪಿಸಿಕೊಂಡಿದ್ದಾರೆ.
ಬಿಜೆಪಿಯವರು Sorry ಸಾವರ್ಕರ್ ಅವರನ್ನು ಅಕ್ಷರಶಃ ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿರುವ ಪ್ರಿಯಾಂಕ್ ಖರ್ಗೆ, “ಪ್ರಜ್ಞೆ ಇಲ್ಲದೆ, ಮೆದುಳಿಗೂ ನಾಲಿಗೆಗೂ ಸಂಪರ್ಕವಿಲ್ಲದೆ ಮಾತನಾಡುವ ಬಿಜೆಪಿಯವರು ಕ್ಷಮೆ ಕೇಳುವುದರಲ್ಲಿ ಸಾವರ್ಕರ್ ಸಂಪ್ರದಾಯದಲ್ಲಿ ಮುಂದುವರಿಯುತ್ತಿದ್ದಾರೆ. ಅವರನ್ನು ಮೀರಿಸುತ್ತಿದ್ದಾರೆ! ನನಗೆ ಅದರಲ್ಲಿ ಸಂದೇಹವಿಲ್ಲ.” ಎಂದು ತಿಳಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಶಿ ಅವರನ್ನು ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ”ಭಯೋತ್ಪಾದಕರ ಸಹೋದರಿ” ಎಂದು ಕರೆದಿದ್ದರು. ಇದರ ಬಗ್ಗೆ ದೇಶದಾದ್ಯಂತ ಆಕ್ರೋಶ ವ್ಯಕ್ತಪವಾದ ನಂತರ ವಿಜಯ್ ಶಾ ಎರಡೆರೆದು ಬಾರಿ ಕ್ಷಮೆ ಕೋರಿದ್ದರು. ಅದಾಗ್ಯೂ, ಸುಪ್ರಿಂಕೋರ್ಟ್ ಅವರ ಕ್ಷಮೆಯನ್ನು ನಿರಾಕರಿಸಿದ್ದು, ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸುವಂತೆ ಆದೇಶ ನೀಡಿದೆ.
ಕಲಬುರಗಿಯಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ್ದ ಬಿಜೆಪಿ ಎಮ್‌ಎಲ್‌ಸಿ ರವಿಕುಮಾರ್ ಅವರು, ಜಿಲ್ಲಾಧಿಕಾರಿ ಫೌಜಿಯಾ ಅವರನ್ನು ಪಾಕಿಸ್ತಾನಿ ಎಂದು ಉಲ್ಲೇಕಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಅವರು ಕ್ಷಮೆ ಯಾಚಿಸಿದ್ದಾರೆ. ಬಿಜೆಪಿಯವರು Sorry ಸಾವರ್ಕರ್‌ರನ್ನು
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮಣಿಪುರದಲ್ಲಿ ಹೊಸ ಸರ್ಕಾರ ರಚಿಸಲು 44 ಶಾಸಕರು ಸಿದ್ಧರಿದ್ದಾರೆ: ರಾಜ್ಯಪಾಲರ ಭೇಟಿ ಬಳಿಕ ಬಿಜೆಪಿ ನಾಯಕ ಹೇಳಿಕೆ
ಮಣಿಪುರದಲ್ಲಿ ಹೊಸ ಸರ್ಕಾರ ರಚಿಸಲು 44 ಶಾಸಕರು ಸಿದ್ಧರಿದ್ದಾರೆ: ರಾಜ್ಯಪಾಲರ ಭೇಟಿ ಬಳಿಕ ಬಿಜೆಪಿ ನಾಯಕ ಹೇಳಿಕೆ

