ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಎಂಎಲ್‌ಸಿ ಎನ್. ರವಿ ಕುಮಾರ್ ಅವರಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ಕ್ಷಮೆಯಾಚಿಸುವಂತೆ ಮೌಖಿಕವಾಗಿ ಸೂಚಿಸಿದೆ. ಜಿಲ್ಲಾಧಿಕಾರಿಯನ್ನು ಪಾಕಿಸ್ತಾನಿ ಎಂದು ಕರೆದಿದ್ದಕ್ಕಾಗಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಮುಸ್ಲಿಂ ಜಿಲ್ಲಾಧಿಕಾರಿಯನ್ನು
ರವಿ ಕುಮಾರ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) 2023 ರ ಸೆಕ್ಷನ್ 197, 224, 299, 302, 351, 353 ಮತ್ತು ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(ಆರ್) ಅಡಿಯಲ್ಲಿ ಗುಲ್ಬರ್ಗದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನ್ನ ವಿರುದ್ಧ ದಾಖಲಿಸಿರುವ ಈ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ರವಿ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುವಾಗ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ರಜಾ ಪೀಠವು ಜಿಲ್ಲಾಧಿಕಾರಿ ಜೊತೆಗೆ ಕ್ಷಮೆ ಕೇಳುವಂತೆ ಹೇಳಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, “ಈ ರೀತಿಯ ಹೇಳಿಕೆ ನೀಡಬೇಕಾಗಿರಲಿಲ್ಲ. ಹಾಲಿ ಸಚಿವರೊಂದಿಗೆ ಮಧ್ಯಪ್ರದೇಶ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಏನಾಯಿತು ಎಂಬುದನ್ನು ನೀವು ನೋಡಿದ್ದೀರಿ. ಅವರಿಗಿಂತ ನೀವು ಭಿನ್ನವಾಗಿಲ್ಲ, ನೀವು ಅಂತಹ ರೀತಿಯ ಹೇಳಿಕೆಗಳನ್ನು ನೀಡುವಂತಿಲ್ಲ” ಎಂದು ಹೇಳಿದೆ.
ಈ ವೇಳೆ ಅರ್ಜಿದಾರ ರವಿ ಕುಮಾರ್ ಪರವಾಗಿ ಹಾಜರಾದ ವಕೀಲ ವಿನೋದ್ ಕುಮಾರ್ ಎಂ., ಈ ಬಗ್ಗೆ ಕ್ಷಮೆಯಾಚಿಸಲಾಗಿದೆ ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, “ಯಾರ ವಿರುದ್ಧ ಹೇಳಿಕೆ ನೀಡಿದ್ದೀರೊ ಅವರು ಈ ಕ್ಷಮೆಯಾಚನೆಯನ್ನು ಸ್ವೀಕರಿಸಬೇಕು. ನೀವು ಆ ಮಹಿಳೆ ಜೊತೆಗೆ ಕ್ಷಮೆಯಾಚಿಸಿ ಮತ್ತು ಅವರು ಅದನ್ನು ಸ್ವೀಕರಿಸಲಿ, ಈ ವೇಳೆ ನೀವು ಅದನ್ನು ದಾಖಲಿಸಲಿ. ಅಲ್ಲಿಯವರೆಗೆ ನಾವು ಈ ಅರ್ಜಿಯನ್ನು ಪರಿಗಣಿಸುವುದಿಲ್ಲ” ಎಂದು ಹೇಳಿದೆ.
“ಇದು ಸಂಪೂರ್ಣ ಅನಗತ್ಯವಾಗಿತ್ತು. ದಯವಿಟ್ಟು ಅವರಿಗೆ ಕ್ಷಮೆಯಾಚಿಸಿ ಮತ್ತು ಅವರು ಅದನ್ನು ಸ್ವೀಕರಿಸಿ ಮತ್ತು ಅದನ್ನು ದಾಖಲಿಸಲಿ. ನಂತರ ನಾವು ಅದನ್ನು ಪರಿಗಣಿಸಬಹುದು, ಅಲ್ಲಿಯವರೆಗೆ ಕಷ್ಟ” ಎಂದು ಅದು ಹೇಳಿದೆ.
ಈ ವೇಳೆ ರವಿ ಕುಮಾರ್ ಅವರ ವಕೀಲರು, ಅರ್ಜಿದಾರರು ಅವರ ಸಮುದಾಯದ ಹೆಸರನ್ನು ಹೇಳುವ ಮೂಲಕ ಅವರನ್ನು ಅವಮಾನಿಸಿಲ್ಲ ಎಂದು ವಾದಿಸಿದರು. ಅವರ ಜಾತಿಯ ಆಧಾರದ ಮೇಲೆ ನಾನು ಅವರನ್ನು ಅವಮಾನಿಸಿದ್ದೇನೆ ಎಂಬ ಯಾವುದೇ ಪದ ದೂರಿನಲ್ಲಿ ಇಲ್ಲ. ಹಾಗಾಗಿ ಇದರಲ್ಲಿ ದೌರ್ಜನ್ಯ ತಡೆ ಕಾಯ್ದೆಯನ್ನು ಹೇಗೆ ಅನ್ವಯಿಸಲು ಸಾದ್ಯ ಎಂದು ಪ್ರಶ್ನಿಸಿದರು.
ಹೆಚ್ಚುವರಿ ರಾಜ್ಯ ಸಾರ್ವಜನಿಕ ಅಭಿಯೋಜಕ ಬಿ.ಎನ್. ಜಗದೀಶ ಅವರು ಅರ್ಜಿಯನ್ನು ವಿರೋಧಿಸಿ, “ದೂರಿನಲ್ಲಿ ಬರೆಯಲ್ಪಟ್ಟಿರುವುದು ವೀಡಿಯೊದಲ್ಲಿ ಹೇಳಲಾದ ಅರ್ಧದಷ್ಟು ವಿಚಾರ ಮಾತ್ರವಿದೆ” ಎಂದು ಹೇಳಿದ್ದು, ಈ ಬಗ್ಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಸಮಯವನ್ನು ಕೋರಿದ್ದಾರೆ. ಮುಸ್ಲಿಂ ಜಿಲ್ಲಾಧಿಕಾರಿಯನ್ನು
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬೆಂಗಳೂರು| ರಾತ್ರೋರಾತ್ರಿ ದಲಿತರ ಮನೆ, ದೇವಸ್ಥಾನ ಧ್ವಂಸ ಆರೋಪ: ಪ್ರಕರಣ ದಾಖಲು
ಬೆಂಗಳೂರು| ರಾತ್ರೋರಾತ್ರಿ ದಲಿತರ ಮನೆ, ದೇವಸ್ಥಾನ ಧ್ವಂಸ ಆರೋಪ: ಪ್ರಕರಣ ದಾಖಲು

