ದೆಹಲಿ ವಿಶ್ವವಿದ್ಯಾಲಯದ (ಡಿಯು) ಬಳಿಯ ಅಂಗಡಿಯವನ ಮೇಲೆ ಬಲಪಂಥೀಯ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಆತನ ದಿನಸಿ ಅಂಗಡಿಯಿಂದ ಮಾಂಸ ಖರೀದಿಸಿದ ಬಾಲಕನೊಬ್ಬ ಅದು ಗೋಮಾಂಸ ಎಂದು ಹೇಳಿಕೊಂಡ ನಂತರ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು
ಮೇ 28 ರ ಬುಧವಾರದಂದು ಡಿಯುನ ಉತ್ತರ ಕ್ಯಾಂಪಸ್‌ನಲ್ಲಿ ಈ ಘಟನೆ ನಡೆದಿದೆ. ವಿಜಯ್ ನಗರದ ನಾರ್ತ್ ಈಸ್ಟ್ ಸ್ಟೋರ್‌ನ ಮಾಲೀಕರಾದ ಚಮನ್ ಕುಮಾರ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಕಿರುಕುಳ ನೀಡಿ ಹಲ್ಲೆ ಮಾಡಲಾಗಿದೆ.
ಬಲಪಂಥೀಯ ಸಂಘಟನೆ ಬೆಂಬಲಿಗರು ಚಮನ್ ಕುಮಾರ್ ಅವರನ್ನು ಎಳೆದುಕೊಂಡು ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾಣಿಸಿಕೊಂಡಿವೆ. “ರಾಷ್ಟ್ರದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿರಿ” ಎಂಬ ಘೋಷಣೆಗಳು ಸಹ ಕೇಳಿಬಂದಿವೆ.
ಹಲ್ಲೆ ಬಿಡಿಸಲು ಮಧ್ಯಪ್ರವೇಶಿಸಲು ಪ್ರಯತ್ನಿಸಿದವರನ್ನೂ ಥಳಿಸಲಾಯಿತು. ಕೋಪಗೊಂಡ ಗುಂಪು ಅವರ ಧರ್ಮವನ್ನು ಕೇಳಿ; ಅವರು ಮಾಂಸವನ್ನೂ ತಿನ್ನಬೇಕು ಎಂದು ಒತ್ತಾಯಿಸಿದೆ.
ಮಾಹಿತಿಯ ಮೇರೆಗೆ ಪೊಲೀಸರು ಆಗಮಿಸಿ ಚಮನ್ ಕುಮಾರ್ ಮತ್ತು ಅವರ ಕುಟುಂಬವನ್ನು ರಕ್ಷಿಸಿದರು. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಡಿಸಿಪಿ (ವಾಯುವ್ಯ) ಭೀಷಮ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಅನುಮಾನದ ಮೇಲೆ, ಕೆಲವು ಸಾರ್ವಜನಿಕರು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರಿಗೆ ವೈದ್ಯಕೀಯ ನೆರವು ನೀಡಲಾಗಿದೆ. ಗೋಮಾಂಸವೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಮಾಂಸದ ಮಾದರಿಯನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. ವಿಧಿವಿಜ್ಞಾನ ವರದಿ ಮತ್ತು ಪೂರ್ಣ ವಿಚಾರಣೆ ಪೂರ್ಣಗೊಂಡ ನಂತರ, ಕಾನೂನಿನ ನಿಬಂಧನೆಗಳ ಪ್ರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಮರುದಿನ, ದೆಹಲಿಯ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ) ಮಾಡೆಲ್ ಟೌನ್ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆಯನ್ನು ಆಯೋಜಿಸಿತು. “ಪೊಲೀಸರು ಸ್ಥಳಕ್ಕೆ ಬಂದ ನಂತರವೂ, ಗುಂಪಿನಲ್ಲಿದ್ದ ಪುರುಷರು ಮಹಿಳಾ ವಿದ್ಯಾರ್ಥಿನಿಯರಾದ ನಮ್ಮನ್ನು, ನಮ್ಮ ಮೇಲೆ ಕೂಗುತ್ತಾ, ನಮ್ಮನ್ನು ತಳ್ಳುತ್ತಾ ಮತ್ತು ಬೀದಿಗಳಲ್ಲಿ ನಮ್ಮನ್ನು ಹಿಂಬಾಲಿಸುವ ಮೂಲಕ ಕಿರುಕುಳ ನೀಡಿದರು. ಗುಂಪು ಮನೆ ತಲುಪವವರೆಗೂ ನಮ್ಮನ್ನು ಹಿಂಬಾಲಿಸಿತು” ಎಂದು ವಿದ್ಯಾರ್ಥಿಗಳು ಹೇಳಿದರು.
ದೆಹಲಿ ವಿಶ್ವವಿದ್ಯಾಲಯದ ಎಸ್‌ಎಫ್‌ಐ ಸಹ-ಸಂಚಾಲಕಿ ಸಿಮ್ರನ್ ಅವರ ಪ್ರಕಾರ, ಅಂಗಡಿ ಮಾಲೀಕರಿಗೆ ಸಹಾಯ ಮಾಡಲು ಪ್ರಯತ್ನಿಸಿದ ವಿದ್ಯಾರ್ಥಿಗಳನ್ನು ಬಲಪಂಥೀಯ ಬೆಂಬಲಿಗರು ಬಂಧಿಸಿ, ಹಲ್ಲೆ ನಡೆಸಿ ಹಿಂಬಾಲಿಸಿದ್ದಾರೆ. “ಕ್ಯಾಂಪಸ್ ಪ್ರದೇಶಗಳಲ್ಲಿ ಈಗಾಗಲೇ ಸಾಕಷ್ಟು ಅನ್ಯದ್ವೇಷವನ್ನು ಎದುರಿಸುತ್ತಿರುವ ವಲಸೆ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡುವ ಅಪಾಯಕಾರಿ ಪ್ರಯತ್ನ ಇದು” ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ| ಸರ್ಕಾರಿ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಪತ್ನಿಯೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಪತ್ರಕರ್ತ


