ಮುಸ್ಲಿಂ ಜಿಮ್ ಟ್ರೈನರ್ ಮತ್ತು ತರಬೇತಿ ಪಡೆಯುವವರು ಜಿಮ್‌ಗೆ ಪ್ರವೇಶಿಸುವುದನ್ನು ನಿಷೇಧಿಸುವಂತೆ ಮಧ್ಯಪ್ರದೇಶದ ಭೋಪಾಲ್‌ನ ಸಬ್ ಇನ್ಸ್‌ಪೆಕ್ಟರೊಬ್ಬರು ಜಿಮ್ ಮಾಲಿಕರಿಗೆ ಸೂಚಿಸುತ್ತಿರುವ ವಿಡಿಯೊ ವೈರಲ್ ಆಗಿದ್ದು ದೇಶದಾದ್ಯಂತ ಆಕ್ರೋಶ ವ್ಯಕ್ತಪವಾಗಿದೆ. ಭಜರಂಗದಳದ ದುಷ್ಕರ್ಮಿಗಳು ಅಯೋಧ್ಯಾ ನಗರ ಪ್ರದೇಶದ ಜಿಮ್‌ಗೆ ಭೇಟಿ ನೀಡಿ, ಜಿಮ್ ಆಪರೇಟರ್‌ನಿಂದ ಮುಸ್ಲಿಂ ಟ್ರೈನರ್‌ಗಳ ವಿವರಗಳನ್ನು ಕೇಳಿದಾಗ ಈ ಘಟನೆ ನಡೆದಿ ಎಂದು ವರದಿಯಾಗಿದೆ. ಮುಸ್ಲಿಮರು ಜಿಮ್‌ನಲ್ಲಿ
ಭೋಪಾಲ್‌ನಲ್ಲಿ ಜಿಮ್ ಮಾಲೀಕರೊಂದಿಗಿನ ಸಂವಾದದ ಸಂದರ್ಭದಲ್ಲಿ ಸಬ್ ಇನ್ಸ್‌ಪೆಕ್ಟರ್ ದಿನೇಶ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರು ಈ ವಿಡಿಯೋದಲ್ಲಿ ಮುಸ್ಲಿಂ ಟ್ರೈನರ್ ಮತ್ತು ತರಬೇತಿ ಪಡೆಯುವವರು ಜಿಮ್‌ಗೆ ಪ್ರವೇಶಿಸುವುದನ್ನು ನಿಷೇಧಿಸುವಂತೆ ಮಾಲೀಕರಿಗೆ ಸೂಚಿಸುತ್ತಿರುವುದು ಕೇಳಿಬರುತ್ತಿದೆ. 3–4 ದಿನಗಳ ಹಿಂದೆ ಈ ನಡೆದಿದೆ ಎಂದು ಹೇಳಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಸಾರ್ವಜನಿಕರ ಗಮನ ಸೆಳೆಯಿತು.
“ಯಾವುದೇ ಮುಸ್ಲಿಂ ಇಲ್ಲಿ ತರಬೇತಿ ನೀಡಲು ಅಥವಾ ಪಡೆಯಲು ಬರುವಂತಿಲ್ಲ. ನಾನು ಅದನ್ನು ನಿಮಗೆ ಸ್ಪಷ್ಟಪಡಿಸಿದ್ದೇನೆ” ಎಂದು ಪೊಲೀಸ್ ಅಧಿಕಾರಿ ಹೇಳುವುದು ವಿಡಿಯೊದಲ್ಲಿ ದಾಖಲಾಗಿದೆ. ವಿಡಿಯೋ ವೈರಲ್ ಆದ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಆಜ್ ತಕ್ ವರದಿ ಮಾಡಿದೆ.
ಭೋಪಾಲ್ ಪೊಲೀಸರ ಹೇಳಿಕೆಗೆ ಬಿಜೆಪಿ ಬೆಂಬಲ ನೀಡಿದ್ದು, ಆದರೆ ಕಾಂಗ್ರೆಸ್ ಇದನ್ನು ವಿರೋಧಿಸಿ, ಜಿಮ್ ತೆರೆಯುವುದು, ತರಬೇತಿ ನೀಡುವುದು ಅಪರಾಧವಲ್ಲ ಎಂದು ಹೇಳಿದೆ.
#Hate | #Triggering |
In Bhopal’s Ayodhya Nagar, on May 28, Police and Bajrang Dal/ VHP leaders jointly raided a GYM, without a formal complaint, enquiring about Muslims.
They were seen enquiring about Muslims associated with the gym.
At the end, Police inspector Sharma… pic.twitter.com/oAVzaFmDcs
— काश/if Kakvi (@KashifKakvi) June 1, 2025
ಭೋಪಾಲ್‌ನ ಬಿಜೆಪಿ ಸಂಸದ ಅಲೋಕ್ ಶರ್ಮಾ ಪೊಲೀಸರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದು, ಮುಸ್ಲಿಂ ಜಿಮ್ ಟ್ರೈನರ್ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದು, ಭೋಪಾಲ್‌ನಲ್ಲಿ ಟ್ರೈನರ್‌ಗಳ ಪಟ್ಟಿಯನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಮಹಿಳಾ ಗ್ರಾಹಕರಿಗೆ ಮಹಿಳಾ ತರಬೇತುದಾರರನ್ನು ಮಾತ್ರ ನಿಯೋಜಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
“ಇಂದೋರ್‌ನಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಂಡಂತೆ, ಈಗ ನಾವು ಭೋಪಾಲ್‌ನಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಜಿಮ್ ಟ್ರೈನರ್‌ಗಳ ಪಟ್ಟಿಯನ್ನು ಪೊಲೀಸರಿಗೆ ಹಸ್ತಾಂತರಿಸುತ್ತೇವೆ. ಸರ್ಕಾರ ಕಾನೂನಿನ ಪ್ರಕಾರ ಕಾರ್ಯನಿರ್ವಹಿಸುತ್ತದೆ, ಆದರೆ ನಾವು ಕೂಡ ನಮ್ಮ ಜವಾಬ್ದಾರಿಗಳನ್ನು ಪೂರೈಸುತ್ತೇವೆ. ಯಾರಿಗೂ ಲವ್ ಜಿಹಾದ್ ಮಾಡಲು ಸ್ವಾತಂತ್ರ್ಯ ನೀಡಲಾಗುವುದಿಲ್ಲ. ಇಲ್ಲಿ ಭೂ ಜಿಹಾದ್ ಕೂಡ ನಡೆಯುತ್ತಿದೆ.” ಎಂದು ಅಲೋಕ್ ಶರ್ಮಾ ಹೇಳಿದ್ದಾರೆ.
ಭೋಪಾಲ್ ಕೇವಲ ನವಾಬರ ಅಥವಾ ಯಾವುದೇ ಒಂದು ಸಮುದಾಯದ ನಗರವಲ್ಲ ಎಂದು ಅವರು ಮತ್ತಷ್ಟು ಪ್ರತಿಪಾದಿಸಿದ್ದಾರೆ. “ಇದು ಚಕ್ರವರ್ತಿ ಅಶೋಕ, ಚಂದ್ರಗುಪ್ತ ಮೌರ್ಯ, ಪರ್ಮಾರ್ ರಾಜವಂಶ ಮತ್ತು ರಾಣಿ ಕಮಲಪತಿಯ ನಾಡು. ಒಬೈದಿಯಾ ಶಾಲೆ, ರಶೀದಿಯಾ ಶಾಲೆ, ಸುಲ್ತಾನಿಯಾ ಜನಾನಾ ಆಸ್ಪತ್ರೆ ಮತ್ತು ಹಮೀದಿಯಾ ಆಸ್ಪತ್ರೆಯಂತಹ ಸಂಸ್ಥೆಗಳಿಗೆ ಭಾರತೀಯ ಐತಿಹಾಸಿಕ ವ್ಯಕ್ತಿಗಳ ಹೆಸರನ್ನು ಇಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
Groups of MPs are roaming around in Muslim nations to showcase India’s unity while BJP MPs back home are busy showcasing bigotry and targeting of minorities. You need an @asadowaisi to speak for India while you target ordinary citizens. https://t.co/YmoSNTkrI8
— Rohini Singh (@rohini_sgh) June 1, 2025
“ಭೋಪಾಲ್‌ನಾದ್ಯಂತ ಒಂದೇ ಕಾನೂನು ಅನ್ವಯಿಸಬೇಕು. ಯಾರೂ ಪಾಕಿಸ್ತಾನದಲ್ಲಿಲ್ಲ; ಎಲ್ಲರೂ ಭಾರತದಲ್ಲಿದ್ದಾರೆ – ಅದು ಖಾಜಿ ಕ್ಯಾಂಪ್ ಆಗಿರಲಿ ಅಥವಾ ಯಾವುದೇ ಇತರ ಪ್ರದೇಶವಾಗಲಿ.” ಎಂದು ಅವರು ಸ್ಥಳೀಯ ಆಡಳಿತವನ್ನು ಟೀಕಿಸಿದ್ದಾರೆ. ಕಲೆಕ್ಟರ್, ಪೊಲೀಸ್ ಆಯುಕ್ತರು, ಹೆಚ್ಚುವರಿ ಎಸ್‌ಪಿ ಮತ್ತು ಎಸ್‌ಡಿಎಂ ಸೇರಿದಂತೆ ಅಧಿಕಾರಿಗಳು ತಮ್ಮ ಕಚೇರಿಗಳಿಂದ ಹೊರಬಂದು ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಸಂಸದರ ಹೇಳಿಕೆಗಳನ್ನು ಟೀಕಿಸಿದ್ದಾರೆ. “ಜಿಮ್ ತೆರೆಯುವುದು ಅಥವಾ ತರಬೇತಿ ನೀಡುವುದು ಅಪರಾಧವಲ್ಲ. ಯಾರಾದರೂ ತರಬೇತಿ ಪಡೆದಿದ್ದರೆ, ಅವರು ತರಬೇತಿ ನೀಡುತ್ತಾರೆ. ಯಾವುದೇ ಅನುಮಾನವಿದ್ದರೆ, ಅದನ್ನು ತನಿಖೆ ಮಾಡಿ. ಜನರು ತಮ್ಮ ಜಿಮ್‌ಗಳು ಮತ್ತು ತರಬೇತುದಾರರನ್ನು ಆಯ್ಕೆ ಮಾಡುತ್ತಾರೆಯೆ ಹೊರತು ಸಂಸದರು ಅಥವಾ ಶಾಸಕರಲ್ಲ” ಎಂದು ಅವರು ಹೇಳಿದ್ದಾರೆ.
“ಅವರು ಭೋಪಾಲ್‌ನ ಸಂಸದರು, ಭೋಪಾಲ್ ನಿವಾಸಿ ಮತ್ತು ನಮ್ಮ ಸ್ನೇಹಿತ. ಅವರಿಗೆ ವಹಿಸಲಾಗಿರುವ ಪ್ರಮುಖ ಅಭಿವೃದ್ಧಿ ಕಾರ್ಯಗಳಲ್ಲಿ ಅವರು ಕೆಲಸ ಮಾಡಬೇಕು” ಎಂದು ಶಾಸಕ ಮಸೂದ್ ಅವರು ಶರ್ಮಾ ಅವರಿಗೆ ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮೋದಿ ಸಂಪುಟಕ್ಕೆ ರಾಜೀನಾಮೆ ಘೋಷಿಸಲಿರುವ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್; ಕಾರಣವೇನು ಗೊತ್ತೆ!
ಮೋದಿ ಸಂಪುಟಕ್ಕೆ ರಾಜೀನಾಮೆ ಘೋಷಿಸಲಿರುವ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್; ಕಾರಣವೇನು ಗೊತ್ತೆ!

